'ಮಹಿಳಾ ಶಿಕ್ಷಕರಿದ್ದ ಶಾಲೆಯ ಪ್ರಾಂಶುಪಾಲರು 'ಈ' ಮದ್ದು ಸೇವಿಸ್ಬೇಕು!'

By Suvarna NewsFirst Published Oct 13, 2021, 3:54 PM IST
Highlights

* ಮಹಿಳೆಯರ ಬಗ್ಗೆ ಮತ್ತೊಬ್ಬ ಸಚಿವನ ವಿವಾದಾತ್ಮಕ ಹೇಳಿಕೆ

* ಆ ಒಂದು ಕಾರಣದಿಂದ ಪುರುಷರನ್ನು ಹಿಂದಿಕ್ಕಲು ಮಹಿಳೆಯರಿಗೆ ಸಾಧ್ಯವಿಲ್ಲ ಎಂದ ದೋಟಸಾರ

ಜೈಪುರ(ಅ.13): ರಾಜಸ್ಥಾನದ(Rajasthan) ಗೆಹ್ಲೋಟ್(Gehlot) ಸರ್ಕಾರದ, ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋಟಸಾರ(Education Minister ಕೊಟ್ಟಿರುವ ಹೇಳಿಕೆಯೊಂದು ಭಾರೀ ವಿವಾದ ಸೃಷ್ಟಿಸಿದೆ. ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಮಹಿಳಾ(Women) ಉದ್ಯೋಗಿಗಳು ತಮ್ಮ ನಡುವೆ ಸಾಕಷ್ಟು ಜಗಳವಾಡುತ್ತಾರೆ. ಯಾವೆಲ್ಲಾ ಶಾಲೆಗಳಲ್ಲಿ ಮಹಿಳಾ ಶಿಕ್ಷಕರು ಮತ್ತು ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದೆಯೋ, ಅಲ್ಲಿ ಜಗಳವೂ ಹೆಚ್ಚು. ಇಂತಹ ಅನೇಕ ವರದಿಗಳು ನನಗೆ ಬಂದಿವೆ. ಇದೇ ವಿಚಾರದಿಂದಸಾಗಿ ಮಹಿಳಾ ಸಿಬ್ಬಂದಿಗೆ, ಪುರುಷರನ್ನು ಹಿಂದಿಕ್ಕಲು ಆಗುವುದಿಲ್ಲ ಎಂದಿದ್ದಾರೆ.

ಮುಖ್ಯವಾಗಿ ನನ್ನ ಇಲಾಖೆಗೆ ಸಂಬಂಧಿಸಿದಂತೆ, ಹೆಚ್ಚು ಮಹಿಳಾ ಸಿಬ್ಬಂದಿ ಇರುವ ಶಾಲೆಗಳಲ್ಲಿ, ವಿವಿಧ ಕಾರಣಗಳಿಂದಾಗಿ ಹೆಚ್ಚು ಜಗಳಗಳು ನಡೆಯುತ್ತವೆ. ಈ ಸಣ್ಣ ವಿಷಯಗಳನ್ನು ನೀವು ಸರಿಪಡಿಸಿದರೆ ನೀವು ಯಾವಾಗಲೂ ಪುರುಷರಿಗಿಂತ ಮುಂದಿರುತ್ತೀರಿ ಎಂದು ದೊಟಸಾರ ಹೇಳಿದ್ದಾರೆ. ಮಹಿಳೆಯರ ಜಗಳದಿಂದಾಗಿ ಶಿಕ್ಷಕರು ಮತ್ತು ಪ್ರಾಂಶುಪಾಲರು ಸಾರಿಡಾನ್ (ತಲೆನೋವು ಮಾತ್ರೆ) ತಿನ್ನಬೇಕಾಗುತ್ತದೆ. ಸರ್ಕಾರ ಮಹಿಳೆಯರಿಗಾಗಿ ಯೋಜನೆಗಳನ್ನು ತಂದಿದೆ, ಮಹಿಳೆಯರೇ ಸರ್ಕಾರದ ಆದ್ಯತೆಯಾಗಿದ್ದಾರೆ. ಹೀಗಾಗಿ ಜಗಳವನ್ನು ನಿಲ್ಲಿಸಿ ಅವರು ಪುರುಷರನ್ನು ಹಿಂದಿಕ್ಕಬೇಕಾಗುತ್ತದೆ. 

ಮಹಿಳೆಯರ ಸಮಸ್ಯೆಯ ಬಗ್ಗೆ ಸರ್ಕಾರ ಹೆಚ್ಚಿನ ಆದ್ಯತೆ ಕೊಡಲಿದೆ

ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರವು ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸುವುದರೊಂದಿಗೆ ಉದ್ಯೋಗಗಳು ಮತ್ತು ಬಡ್ತಿಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿದೆ ಎಂದು ದೋಟಸಾರ ಹೇಳಿದ್ದಾರೆ. ನಮ್ಮ ಸರ್ಕಾರವು ಮಹಿಳೆಯರ ಸಮಸ್ಯೆ ಬಗ್ಗೆ ಆದ್ಯತೆ ಮೇಲೆ ಕೆಲಸ ಮಾಡುತ್ತದೆ. ಸರ್ಕಾರವು ಮಹಿಳೆಯರ ಸುರಕ್ಷತೆ ಮತ್ತು ಸೌಕರ್ಯವನ್ನು ಯಾವಾಗಲೂ ಖಾತ್ರಿಪಡಿಸುತ್ತದೆ ಮತ್ತು ಅವರಿಗೆ ನೆಚ್ಚಿನ ಸ್ಥಳಗಳಲ್ಲಿ ಪೋಸ್ಟಿಂಗ್ ನೀಡಿದೆ ಎಂದು ಅವರು ಹೇಳಿದ್ದಾರೆ. ನಗರಗಳು ಮತ್ತು ಸುತ್ತಮುತ್ತ ನಾವು ಗರಿಷ್ಠ ಸಂಖ್ಯೆಯ ಮಹಿಳೆಯರನ್ನು ನಿಯೋಜಿಸಿದ್ದೇವೆ ಎಂದು ಹಲವರು ಹೇಳುತ್ತಾರೆ ಎಂದೂ ತಿಳಿಸಿದ್ದಾರೆ.

ಕರ್ನಾಟಕ ಆರೋಗ್ಯ ಸಚಿವ ಸುಧಾಕರ್ ಹೇಳಿಕೆಯೂ ವೈರಲ್

ಇನ್ನು ಭಾನುವಾರವಷ್ಟೇ ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರ ಬಗ್ಗೆ ಹೇಳಿಕೆ ನೀಡಿದ್ದ ಸುಧಾಕರ್  ಭಾರತದ ಅನೇಕ ಆಧುನಿಕ ಮಹಿಳೆಯರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ಅವರಿಗೆ ಮದುವೆಯೇ ಬೇಕಾಗಿಲ್ಲ. ಒಂದು ವೇಳೆ ಅವರು ಮದುವೆಯಾದರೂ ಮಗುವನ್ನು ಹೆರಲು ಸಿದ್ಧರಿರುವುದಿಲ್ಲ. ತಾವು ಗರ್ಭಿಣಿಯಾಗುವ ಬದಲು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಲು ಬಯಸುತ್ತಾರೆ. ವರ್ಷಗಳು ಕಳೆದಂತೆ ನಮ್ಮ ಆಲೋಚನೆಯಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೆ, ಈ ರೀತಿಯ ಬದಲಾವಣೆ ಒಳ್ಳೆಯದಲ್ಲ. ಈ ವಿಷಯವನ್ನು ಹೇಳುವುದಕ್ಕೆ ನನಗೆ ಬಹಳ ಬೇಸರವಾಗುತ್ತಿದೆ ಎಂದಿದ್ದರು. 

click me!