ಮಹಾ ಸಾರಿಗೆಯಿಂದ ರಾಜ್ಯ ಸಾರಿಗೆ ನಿಗಮಕ್ಕೆ ಧಮ್ಕಿ

By Kannadaprabha NewsFirst Published Feb 22, 2021, 8:10 AM IST
Highlights

ಪದೇ ಪದೇ ಕರ್ನಾಟಕ ಮೇಲೆ ಹರಿಹಾಯುತ್ತಿರುವ ಮಹಾರಾಷ್ಟ್ರ ಸರ್ಕಾರ ಇದೀಗ ಸಾರಿಗೆ ನಿಗಮದ ವಿರುದ್ಧವೂ ಕಾಲು ಕೆದರಿ ನಿಂತಿದೆ. 

 ಬೆಳಗಾವಿ (ಫೆ.22):   ಗಡಿ ವಿಚಾ​ರ​ವಾಗಿ ಮಹಾರಾಷ್ಟ್ರದ ಮುಖ್ಯ​ಮಂತ್ರಿ, ಶಿವ​ಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಸೇರಿ ಇತರ ನಾಯಕರು ಕರ್ನಾ​ಟ​ಕದ ಜತೆ​ಗೆ ಕಾಲು ಕೆದರಿ ಜಗಳಕ್ಕೆ ನಿಂತಿ​ರುವ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಸಾರಿಗೆ ನಿಗಮವು ಬಸ್‌​ಗಳ ನಿಲು​ಗಡೆ ವಿಚಾ​ರ​ವಾಗಿ ನಮ್ಮ ವಾಯುವ್ಯರಸ್ತೆ ಸಾರಿಗೆ ನಿಗಮಕ್ಕೆ ಅಧಿಕೃತವಾಗಿ ಬೆದ​ರಿಕೆ ಪತ್ರ​ವೊಂದನ್ನು ರವಾ​ನಿ​ಸಿ​ದೆ.

ಕರ್ನಾಟಕದ ಸಾರಿಗೆ ನಿಗಮದಲ್ಲಿ ಪರ್ಮಿಟ್‌ ಇಲ್ಲದ ಬಸ್‌ಗಳು ಇರಲು ಸಾಧ್ಯವೇ ಇಲ್ಲ. ಅಲ್ಲದೆ, ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವುದು ಅಂತಾರಾಜ್ಯ ಒಪ್ಪಂದಗಳ ಸ್ಪಷ್ಟಉಲ್ಲಂಘ​ನೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ 5 ಜಿಲ್ಲೇಲಿ ಲಾಕ್ಡೌನ್‌, ಕರ್ನಾಟಕಕ್ಕೆ ಇದು ಎಚ್ಚರಿಕೆ ಗಂಟೆ! ...

ಮಹಾ​ರಾ​ಷ್ಟ್ರದ ಮೀರಜ್‌ನ ಶಾಸ್ತ್ರಿ ವೃತ್ತದಲ್ಲಿ ಬಸ್‌ಗಳ ನಿಲುಗಡೆಯೇ ಇಲ್ಲ. ಆದರೆ, ಕರ್ನಾಟಕದ ಪರ್ಮಿಟ್‌ ಇಲ್ಲದ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿ​ದ್ದು, ಇದ​ರಿಂದ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ ನಷ್ಟ​ವಾ​ಗು​ತ್ತಿದೆ. ಇದನ್ನು ತಡೆಯದಿದ್ದರೆ ಫೆ.23ರಂದು ರಸ್ತೆ ತಡೆ ನಡೆಸಬೇಕಾಗುತ್ತದೆ ಎಂದು ಆರೋ​ಪಿಸಿ ಶಿವಸೇನೆ ಸಾಂಗ್ಲಿ ಜಿಲ್ಲಾ ಘಟಕ ಅಲ್ಲಿನ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ. ಇದನ್ನು ಆಧ​ರಿಸಿ ಮಹಾ​ರಾ​ಷ್ಟ್ರದ ಸಾರಿಗೆ ನಿಗಮದ ಅಧಿ​ಕಾ​ರಿ​ಗಳು ವಾಯುವ್ಯ ಸಾರಿಗೆಯ ಚಿಕ್ಕೋಡಿ ವಿಭಾಗದ ಅಧಿಕಾರಿಗಳಿಗೆ ಫೆ.18ರಂದು ಎಚ್ಚ​ರಿ​ಕೆಯ ಪತ್ರ ಬರೆ​ದಿ​ದ್ದಾ​ರೆ.

ಪರ್ಮಿಟ್‌ ಇಲ್ಲದ ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಕಳಿಸಬಾರದು. ಒಂದು ವೇಳೆ ಕಳಿಸಿದಲ್ಲಿ ಶಿವಸೇನೆಯಿಂದಾ​ಗುವ ಪರಿಣಾಮಗಳಿಗೆ ನೀವೇ ಹೊಣೆ ಎಂದು ಬೆದರಿಕೆ ಧಾಟಿಯಲ್ಲಿ ಪತ್ರ​ದಲ್ಲಿ ಹೇಳಿ​ಕೊಂಡಿ​ದ್ದಾ​ರೆ.

ಕರ್ನಾಟಕದ ಸಾರಿಗೆ ನಿಗಮದಲ್ಲಿ ಪರ್ಮಿಟ್‌ ಇಲ್ಲದ ಬಸ್‌ಗಳು ಇರಲು ಸಾಧ್ಯವೇ ಇಲ್ಲ. ಅಲ್ಲದೆ, ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವುದು ಅಂತಾರಾಜ್ಯ ಒಪ್ಪಂದಗಳ ಸ್ಪಷ್ಟಉಲ್ಲಂಘ​ನೆ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜತೆಗೆ, ಸಾರಿಗೆ ಸಚಿ​ವರೂ ಆದ ಉಪ ಮುಖ್ಯ​ಮಂತ್ರಿ ಈ ವಿಚಾ​ರ​ವನ್ನು ಗಂಭೀ​ರ​ವಾಗಿ ಪರಿ​ಗ​ಣಿ​ಸ​ಬೇ​ಕು. ಮಹಾ​ರಾ​ಷ್ಟ್ರಕ್ಕೆ ಲಿಖಿತ​ವಾ​ಗಿಯೇ ಪ್ರತಿ​ಭ​ಟನೆ ದಾಖ​ಲಿ​ಸ​ಬೇಕು ಎಂದು ಆಗ್ರ​ಹಿ​ಸಿ​ದ್ದಾ​ರೆ.

click me!