ವೈದ್ಯಕೀಯ ತಪಾಸಣೆಗಾಗಿ ಬಿಸಿಲಲ್ಲಿ 7 ಕಿ.ಮೀ ನಡೆದ ತುಂಬು ಗರ್ಭಿಣಿ ಸಾವು

Published : May 15, 2023, 09:04 PM IST
ವೈದ್ಯಕೀಯ ತಪಾಸಣೆಗಾಗಿ ಬಿಸಿಲಲ್ಲಿ 7 ಕಿ.ಮೀ ನಡೆದ ತುಂಬು ಗರ್ಭಿಣಿ ಸಾವು

ಸಾರಾಂಶ

ವೈದ್ಯಕೀಯ ತಪಾಸಣೆಗಾಗಿ  ಬರೋಬ್ಬರಿ 7 ಕಿಲೋ ಮೀಟರ್ ನಡೆದ ತುಂಬು ಗರ್ಭಿಣಿಯೊಬ್ಬರು ಸೂರ್ಯನ ತಾಪ ತಡೆಯಲಾಗದೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

ಮಹಾರಾಷ್ಟ್ರ: ವೈದ್ಯಕೀಯ ತಪಾಸಣೆಗಾಗಿ  ಬರೋಬ್ಬರಿ 7 ಕಿಲೋ ಮೀಟರ್ ನಡೆದ ತುಂಬು ಗರ್ಭಿಣಿಯೊಬ್ಬರು ಸೂರ್ಯನ ತಾಪ ತಡೆಯಲಾಗದೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಹಳ್ಳಿಯೊಂದರ ಗರ್ಭಿಣಿ ಮಹಿಳೆ ಸಾವನ್ನಪ್ಪಿದವರು. ಇವರು ವೈದ್ಯಕೀಯ ತಪಾಸಣೆಗಾಗಿ ಒಟ್ಟು ಏಳು ಕಿಲೋಮೀಟರ್‌ಗೂ ಹೆಚ್ಚು ದೂರ ಬಿಸಿಲಲ್ಲಿ ನಡೆದ ನಂತರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬುಡಕಟ್ಟು ಸಮುದಾಯದ 21 ವರ್ಷದ ಗರ್ಭಿಣಿ ಮಹಿಳೆ ಸೋನಾಲಿ ವಾಘಾಟ್ ಮೃತ ಮಹಿಳೆಯಾಗಿದ್ದು, ಇವರು ಪಾಲ್ಘರ್ ಜಿಲ್ಲೆಯ ದಹಾನು ತಾಲೂಕಿನ ಒಸರ್ ವೀರಾ ಗ್ರಾಮದ ತನ್ನ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ನಡೆದು ಹತ್ತಿರದ ಹೆದ್ದಾರಿಯನ್ನು ತಲುಪಬೇಕಾಗಿತ್ತು. ಇಲ್ಲಿಯವರೆಗೆ ಬಂದರಷ್ಟೇ ಆಕೆಗೆ ತವಾ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಆಟೋರಿಕ್ಷಾ ಸಿಗುತ್ತಿತ್ತು. ಹೀಗೆ ಆಸ್ಪತ್ರೆಗೆ ಬಂದ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ ಸೋನಾಲಿ ಸಮುದಾಯ ಆಸ್ಪತ್ರೆಯಲ್ಲಿ ನಿಯಮಿತ ತಪಾಸಣೆಗೆ ಒಳಗಾಗುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ಬಂದ ಅವರು ಮನೆ ತಲುಪಲು ಮತ್ತೆ ಉರಿಬಿಸಿಲಿನಲ್ಲಿ ಮೂರುವರೆ ಕಿಲೋ ಮೀಟರ್‌ ನಡೆಯಬೇಕಾಗಿತ್ತು. ಹೀಗೆ ನಡೆದು ಮನೆ ಸೇರಿದ ಆಕೆಗೆ ಸಂಜೆ ಹೊತ್ತಿಗೆ ಆರೋಗ್ಯ ಸಮಸ್ಯೆ  ಕಾಣಿಸಿಕೊಂಡಿದೆ. 

ಕಲಬುರಗಿ: ಮಕ್ಕಳೊಂದಿಗೆ ಬಾವಿಗೆ ಜಿಗಿದ ನೆಗೆಣಿಯರು, ಒಬ್ಬಳ ರಕ್ಷಣೆ, ಗರ್ಭಿಣಿ ಸಾವು

ಈ ಬಗ್ಗೆ ಮಾತನಾಡಿದ ಪಾಲ್ಘರ್ ಜಿಲ್ಲಾ ಸಿವಿಲ್ ಸರ್ಜನ್ ಡಾ ಸಂಜಯ್ ಬೋಡಾಡೆ (Dr Sanjay Bodade), ಗರ್ಭಿಣಿ ಮಹಿಳೆಯನ್ನು ಧುಂಡಲ್ವಾಡಿ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಆಕೆಯನ್ನು ಕಸದ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ಅಲ್ಲಿ ವೈದ್ಯರು ಆಕೆ ಅರೆ ಕೊಮೊರ್ಬಿಡ್ ಸ್ಥಿತಿಯಲ್ಲಿ (semi-comorbid condition) ಇರುವುದನ್ನು ಗಮನಿಸಿದ್ದಾರೆ. 

ಜೊತೆಗೆ ಮಹಿಳೆ ಅಧಿಕ ತಾಪಮಾನದಿಂದ ಬಳಲುತ್ತಿದ್ದು,  ರಕ್ತಹೀನತೆಯೂ ಇದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಹನುವಿನ (Dahanu) ಧುಂಡಲವಾಡಿಯಲ್ಲಿರುವ (Dhundalwadi) ವಿಶೇಷ ಆಸ್ಪತ್ರೆಗೆ ಕರೆದೊಯ್ಯಲು ಹೇಳಲಾಯ್ತು, ಆದರೆ ಮಹಿಳೆಯು ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದು, ಎರಡೂ ಜೀವಗಳು ಬಲಿಯಾಗಿವೆ.  ಅಲ್ಲಿಯವರೆಗೂ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿರಲಿಲ್ಲ. ಆದರೆ ಅವರು ಅರೆ-ಕೊಮೊರ್ಬಿಡ್ ಸ್ಥಿತಿಯಲ್ಲಿ ಇದ್ದ ಕಾರಣ ಅವರಿಗೆ ಚಿಕಿತ್ಸೆ ನೀಡಲು ಸಾಧ್ಯವಿರಲಿಲ್ಲ. ಹೀಗಾಗಿ ಅವರನ್ನು ವಿಶೇಷ ಆಸ್ಪತ್ರೆಗೆ ಕಳುಹಿಸಲಾಗಿತ್ತು ಎಂದು ಡಾ ಬೊಡಾಡೆ ಹೇಳಿದರು. 

ಕಲಘಟಗಿ‌ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಹೆರಿಗೆಗೆ ಬಂದ ಗರ್ಭಿಣಿ ಸಾವು

ಸುಡುವ ಬಿಸಿಲಲ್ಲಿ ನಡೆದಾಡಿದ ಕಾರಣ ಮಹಿಳೆಯ ಸ್ಥಿತಿ ಹದಗೆಟ್ಟಿದೆ ಇದು ಅಂತಿಮವಾಗಿ ಸಾವಿಗೆ ಕಾರಣವಾಯಿತು, ಘಟನೆಯ ಬಗ್ಗೆ ತನಿಖೆ ನಡೆಸಲು ತಾವೇ ಖುದ್ದಾಗಿ ಪಿಎಚ್‌ಸಿ ಮತ್ತು ಎಸ್‌ಡಿಎಚ್‌ಗೆ ಭೇಟಿ ನೀಡಿದ್ದು, ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಯಾವುದೇ ಪುರಾವೆ ಕಂಡುಬಂದಿಲ್ಲ ಎಂದು ಹಿರಿಯ ವೈದ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಸಮರ್ಪಕ ರಸ್ತೆ ಸೌಲಭ್ಯವಿಲ್ಲದ ಬಿಸಿಲಿನಲ್ಲಿ ನಡೆದ ಕಾರಣ ಗರ್ಭಿಣಿ ಪ್ರಾಣ ಬಿಟ್ಟಿದ್ದು, ಎರಡೂ ಜೀವಗಳು ಬಲಿಯಾಗಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!