ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು, ತೆರೆ ಮುಂದೆ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಬಿಜೆಪಿ?

By Suvarna NewsFirst Published Jun 24, 2022, 3:06 PM IST
Highlights

* ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು

* ಸರ್ಕಾರ ಬೀಳುವ ಹಂತದಲ್ಲಿದ್ದರೂ ಮೌನ ವಹಿಸಿದೆ ಬಿಜೆಪಿ

* ಬಿಜೆಪಿ ಮೌನಕ್ಕಿದೆ ಈ ಹಿಂದಿನ ಘಟನೆಗಳ ನಂಟು

ಮುಂಬೈ(ಜೂ.24): ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಬಂಡಾಯದ ನಂತರ, ಉದ್ಧವ್ ಠಾಕ್ರೆ ಸರ್ಕಾರದ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಚನೆಗೆ ಕೇವಲ ಒಂದು ಹೆಜ್ಜೆ ದೂರದಲ್ಲಿರುವ ಬಿಜೆಪಿ ತನ್ನ ರಾಜಕೀಯ ದಾಳ ಉರುಳುಳಿಸುವಲ್ಲಿ ಹಿಂದೇಟು ಹಾಕುತ್ತಿದೆ. ಬಿಜೆಪಿಯು ಬಹಿರಂಗವಾಗಿ ಹೊರಬರುವ ಬದಲು, ಉದ್ಧವ್ ಸರ್ಕಾರ ತಾನಾಗೇ ಮುಂದುವರೆಯಲು ಕಾಯುತ್ತದೆ ಎಂದು ತೋರುತ್ತಿದೆ. ಉದ್ಧವ್ ಸರ್ಕಾರವನ್ನು ಉರುಳಿಸುವ ಹೊಣೆಯನ್ನು ಬಿಜೆಪಿ ತೆಗೆದುಕೊಳ್ಳಲು ಬಯಸುವುತ್ತಿಲ್ಲ. ಬಿಜೆಪಿ ಎಚ್ಚೆತ್ತುಕೊಂಡಿದ್ದು, ಈ ಬಂಡಾಯಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ, ಇದು ಶಿವಸೇನೆಯ ಆಂತರಿಕ ವಿಚಾರ ಎನ್ನುವಂತೆ ತೋರಿಸುತ್ತಿದೆ.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಆಪ್ತರಾಗಿದ್ದ ಏಕನಾಥ್ ಶಿಂಧೆ ಅವರ ಬಂಡಾಯವು ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟುಹಾಕಿದೆ. ಈ ಬಿಕ್ಕಟ್ಟಿಗೆ ಬಿಜೆಪಿಯೇ ಕಾರಣ ಎಂದು ಶಿವಸೇನೆ ನಾಯಕರು ಆರೋಪಿಸುತ್ತಿದ್ದರೂ ನಾಯಕರು ಮಾತ್ರ ಮೌನವಾಗಿದ್ದಾರೆ. ಬಿಜೆಪಿ ಬಯಲಿಗೆ ಬರುವ ಬದಲು ಕಾದು ನೋಡುವ ಮಾರ್ಗ ಅನುಸರಿಸಿದೆ. 2019 ರಲ್ಲಿ, ಎನ್‌ಸಿಪಿ ನಾಯಕ ಅಜಿತ್ ಪವಾರ್ ಜೊತೆ ತರಾತುರಿಯಲ್ಲಿ ಸರ್ಕಾರ ರಚಿಸಲು ಮುಂದಾಗಿ ಬಹುದೊಡ್ಡ ಪೆಟ್ಟು ತಿಂದಿದೆ. ಈ ಕಾರಣದಿಂದಾಗಿ ಅದು ಈ ಬಾರಿ ಯಾವುದೇ ಆತುರವನ್ನು ತೋರಿಸುತ್ತಿಲ್ಲ.

ಏಕನಾಥ್ ಶಿಂಧೆ ಗುಜರಾತ್ ಮತ್ತು ಈಗ ಅಸ್ಸಾಂನಲ್ಲಿ ಮೊಕ್ಕಾಂ ಹೂಡಿದ್ದು, ಪಕ್ಷದ ಮೂರನೇ ಎರಡರಷ್ಟು ಶಾಸಕರು ಶಿವಸೇನೆಯಲ್ಲಿ ಬಂಡಾಯದ ಕಹಳೆಯನ್ನು ಊದಿದ್ದಾರೆ. ಒಂದೆಡೆ ಈ ಬೆಳವಣಿಗೆಯನ್ನು ಸ್ವತಃ ಬಿಜೆಪಿಯೇ ಶಿವಸೇನೆಯ ಆಂತರಿಕ ವಿಚಾರ ಎಂದು ಹೇಳುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ಆಡಳಿತವಿರುವ ಗುಜರಾತ್ ಮತ್ತು ಅಸ್ಸಾಂನಲ್ಲಿ ಬಂಡಾಯ ಶಾಸಕರ ವಾಸ್ತವ್ಯ ಮತ್ತು ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಹೊರಗಿವರು ಯಾರೂ ನುಸುಳಲು ಸಾಧ್ಯವಾಗದಷ್ಟು ಶಾಸಕರಿಗೆ ಭದ್ರತೆ ಒದಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾರಿಗಾದರೂ ಈ ರಾಜಕೀಯ ಗೊಂದಲದಿಂದ ಲಾಭವಾಗುವುದಾದರೆ ಅದು ಬಿಜೆಪಿ ಮಾತ್ರ.

2019 ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟದಲ್ಲಿ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಿದೆ. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ, ಶಿವಸೇನೆ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು ತನ್ನ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಕೈಜೋಡಿಸಿ ಸರ್ಕಾರವನ್ನು ರಚಿಸಿತು, ಆದರೆ ಎರಡೂವರೆ ವರ್ಷಗಳ ನಂತರ, ಸಚಿವ ಏಕನಾಥ್ ಶಿಂಧೆ ಬಂಡಾಯವೆದ್ದು ಮೂರನೇ ಎರಡರಷ್ಟು ಶಾಸಕರನ್ನು ಕರೆದೊಯ್ದರು. ಉದ್ಧವ್ ಸರ್ಕಾರದ ಅಧಿಕಾರದಿಂದ ಬೀಳ್ಕೊಡುವ ಸ್ಕ್ರಿಪ್ಟ್ ಬರೆಯಲಾಗಿದೆ.

ಉದ್ಧವ್ ಠಾಕ್ರೆ ಅವರ ಕೈಯಿಂದ ಹೊರಹೊಮ್ಮುವ ಅಧಿಕಾರವನ್ನು ಗಮನಿಸಿದರೆ, ಬಿಜೆಪಿ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಅಥವಾ ಸರ್ಕಾರ ರಚಿಸುವ ಆತುರವನ್ನು ತೋರಿಸುವುದಿಲ್ಲ ಎಂಬುವುದು ಸ್ಪಷ್ಟ. ಉದ್ಧವ್ ಸರ್ಕಾರವನ್ನು ಉರುಳಿಸುವ ಮೂಲಕ ಶಿವಸೇನೆಗೆ ಸಹಾನುಭೂತಿ ಮತ್ತು ಮರಾಠ ಕಾರ್ಡ್ ಆಡಲು ಅವಕಾಶವನ್ನು ನೀಡಲು ಬಿಜೆಪಿ ಬಯಸುವುದಿಲ್ಲ ಎಂಬುದು ಇದಕ್ಕೆ ಒಂದು ಪ್ರಮುಖ ಕಾರಣ. ಎರಡನೇ ಪ್ರಮುಖ ಕಾರಣವೆಂದರೆ 2019 ರ ಮಹಾರಾಷ್ಟ್ರ ಮತ್ತು 2020 ರ ರಾಜಸ್ಥಾನಗಳು ತಪ್ಪನ್ನು ಪುನರಾವರ್ತಿಸಲು ಬಯಸುತ್ತಿಲ್ಲ ಎಂಬುವುದು ರಾಜಕೀಯ ವಿಶ್ಲೇಷಕರ ಮಾತಾಗಿದೆ. 

2019 ರಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಜೊತೆಗೆ ಬಿಜೆಪಿ ಸರ್ಕಾರ ರಚಿಸಲು ಪ್ರಯತ್ನಿಸಿತು. ಮಾಜಿ ಮುಖ್ಯಮಂತ್ರಿ ಫಡ್ನವೀಸ್ ಅವರು ಕುರ್ಚಿಯನ್ನು ಪಡೆದಿದ್ದರು, ಆದರೆ ಅವರು ಕೇವಲ 80 ಗಂಟೆಗಳ ಕಾಲ ಮಾತ್ರ ಹುದ್ದೆಯಲ್ಲಿ ಉಳಿಯಲು ಸಾಧ್ಯವಾಯಿತು. ಇದರಿಂದ ಬಿಜೆಪಿ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಈ ಕಹಿ ಅನುಭವದಿಂದಾಗಿ ಈ ಬಾರಿ ಬಿಜೆಪಿ ಆ ತಪ್ಪನ್ನು ಪುನರಾವರ್ತಿ\ಸುತ್ತಿಲ್ಲ. 

ಅದೇ ಸಮಯದಲ್ಲಿ, ಬಿಜೆಪಿಗೆ ಎರಡನೇ ದೊಡ್ಡ ಕಾರಣವೆಂದರೆ ಬಂಡಾಯ ಶಿವಸೇನೆ ಶಾಸಕರು ಮುಂಬೈಗೆ ಹಿಂತಿರುಗಿದಾಗ, ಉದ್ಧವ್ ಠಾಕ್ರೆ ಪಾಳಯಕ್ಕೆ ಮತ್ತೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ರಾಜಸ್ಥಾನದ ಸಚಿನ್ ಪೈಲಟ್ ಪ್ರಕರಣದಲ್ಲಿ ಬಿಜೆಪಿ ಈ ರೀತಿಯ ಘಟನೆಯನ್ನು ಕಂಡಿದೆ. ರಾಜ್ಯದಲ್ಲಿ ಗೆಹ್ಲೋಟ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಮತ್ತು ತನ್ನ ಶಾಸಕರನ್ನು ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಆ ಸಮಯದಲ್ಲಿ ಆರೋಪಿಸಿತ್ತು. ಅಂತಿಮವಾಗಿ ಕಾಂಗ್ರೆಸ್ ತನ್ನ ಸರ್ಕಾರ ಉಳಿಸುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿಯಲ್ಲಿ, ಮಹಾರಾಷ್ಟ್ರ ಪ್ರಕರಣದಲ್ಲಿ, ಬಂಡಾಯ ಶಾಸಕರು ಮುಂಬೈಗೆ ಮರಳಲು ಶಿವಸೇನೆ ಮತ್ತು ಎನ್‌ಸಿಪಿ ಕಾಯುತ್ತಿವೆ. ಮುಂಬೈಗೆ ಬಂದರೆ ಪರಿಸ್ಥಿತಿ ಬದಲಾಗುತ್ತದೆ ಎಂದ ಶರದ್ ಪವಾರ್, ಉದ್ಧವ್ ಠಾಕ್ರೆಯ ಶಿವಸೇನೆ ಶಾಸಕರು ಬಂದು ನಮ್ಮೊಂದಿಗೆ ಮಾತನಾಡಲಿ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ನಾರಾಯಣ ರಾಣೆ ಏಕನಾಥ್ ಶಿಂಧೆ ಅವರನ್ನು ಬಹಿರಂಗವಾಗಿ ಬೆಂಬಲಿಸಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಎಂವಿಎ ಸರ್ಕಾರದ ಬಿಕ್ಕಟ್ಟಿಗೆ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಇದು ಶಿವಸೇನೆಯ ಆಂತರಿಕ ವಿಷಯವಾಗಿದ್ದು, ಉದ್ಧವ್ ಠಾಕ್ರೆ ಅವರ ವೈಫಲ್ಯದಿಂದಾಗಿ ಅವರು ತಮ್ಮ ಪಕ್ಷವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಆದರೆ, ಉದ್ಧವ್ ಠಾಕ್ರೆ ಅವರು ಮರಾಠಿ ಮುಖ್ಯಮಂತ್ರಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಆರೋಪ ತನ್ನ ಮೇಲೆ ಬರಬಾರದೆಂದು ಬಿಜೆಪಿ ಬಯಸಿದೆ.

ಹಿಂದುತ್ವದ ಪಿಚ್‌ನಲ್ಲಿ ಶಿವಸೇನೆಗಿಂತ ಒಂದು ಹೆಜ್ಜೆ ಮುನ್ನಡೆಯಬಹುದಾದರೂ, ಮರಾಠಿ ಗುರುತಿನ ಹೆಸರಿನಲ್ಲಿ ಅದನ್ನು ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಬಿಜೆಪಿಯೂ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಮಹಾರಾಷ್ಟ್ರದ ರಾಜಕೀಯದಲ್ಲಿ ಮರಾಠಿ ಅಸ್ಮಿತೆ ಕೆರಳಿಸಿ ಎದುರಾಳಿ ಜೊತೆ ಸುದೀರ್ಘ ರಾಜಕೀಯ ಇನ್ನಿಂಗ್ಸ್ ಆಡುವಂತಿಲ್ಲ. ಶಿವಸೇನೆ ಈಗ ಅದೇ ಹಾದಿಯಲ್ಲಿ ತನ್ನ ಪಣತೊಟ್ಟಿದ್ದು, ಮರಾಠಿ ಅಸ್ಮಿತೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಸಮರ್ಥವಾಗಿದೆ. ಅದಕ್ಕಾಗಿಯೇ ಬಿಜೆಪಿ ಕಾದು ನೋಡುವ ಮನಸ್ಥಿತಿಯಲ್ಲಿದೆ ಮತ್ತು ಯಾವುದೇ ಆತುರ ತೋರಿಸಲು ಬಯಸುವುದಿಲ್ಲ.

click me!