ಉದ್ಧವ್‌ಗೆ ಬಿಗ್‌ ಶಾಕ್, ಶಿವಸೇನೆಯ 37 ಶಾಸಕರ ಬೆಂಬಲ ಪತ್ರದ ಬೆನ್ನಲ್ಲೇ ಮುಂಬೈನತ್ತ ಏಕನಾಥ್‌ ಶಿಂಧೆ!

By Suvarna NewsFirst Published Jun 24, 2022, 1:54 PM IST
Highlights

* ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ

* ಸರ್ಕಾರ ಪತನ? ಕುರ್ಚಿ ಕಳರೆದುಕೊಳ್ಳುವ ಭೀತಿಯಲ್ಲಿ ಉದ್ಧವ್ ಠಾಕ್ರೆ

* ಬಂಡಾಯ ನಾಯಕರ ಬೆಂಬಲದ ಜೊತೆ ಮುಂಬೈನತ್ತ ಶಿಂಧೆ ಪ್ರಯಾಣ

ಗುಮುಂಬೈ(ಜೂ.24): ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಶಿವಸೇನೆಯ 37 ಬಂಡಾಯ ಶಾಸಕರು ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಜಿರ್ವಾಲ್ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದು, ಏಕನಾಥ್ ಶಿಂಧೆ ಅವರು ಸದನದಲ್ಲಿ ತಮ್ಮ ನಾಯಕರಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಹಿಂದಿನ ದಿನ ನರಹರಿ ಜಿರ್ವಾಲ್ ಅವರು ಬಂಡಾಯ ಶಾಸಕ ಏಕನಾಥ್ ಶಿಂಧೆ ಅವರ ಬದಲಿಗೆ ಅಜಯ್ ಚೌಧರಿ ಅವರನ್ನು ಸದನದಲ್ಲಿ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ನೇಮಿಸಲು ಅನುಮೋದನೆ ನೀಡಿದ್ದಾರೆ ಎಂದು ಹೇಳಿದ್ದರು.

ಗುವಾಹಟಿಯಲ್ಲಿ ಬಂಡಾಯ ಶಾಸಕರು

ಶಿಂಧೆ ಅವರು ಶಿವಸೇನೆಯ 37 ಶಾಸಕರ ಸಹಿ ಇರುವ ಪತ್ರವನ್ನು ವಿಧಾನಸಭೆಯ ಉಪ ಸ್ಪೀಕರ್‌ಗೆ ಕಳುಹಿಸಿದ್ದಾರೆ. ಶಿವಸೇನೆಯ ಈ ಎಲ್ಲಾ ಬಂಡಾಯ ಶಾಸಕರು ಶಿಂಧೆ ಅವರೊಂದಿಗೆ ಗುವಾಹಟಿಯ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಸುನೀಲ್ ಪ್ರಭು ಬದಲಿಗೆ ಶಿವಸೇನೆ ಶಾಸಕ ಭರತ್ ಗೊಗವಾಲೆ ಅವರನ್ನು ಶಾಸಕಾಂಗ ಪಕ್ಷದ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತುರುಗೇಟು ಕೊಟ್ಟ ಶಿಂಧೆ

ಏತನ್ಮಧ್ಯೆ, ಪ್ರಭು ಅವರು ಕರೆದಿರುವ ಸಭೆಗೆ ಹಾಜರಾಗದಿದ್ದಕ್ಕಾಗಿ ತಮ್ಮ ಬಣದ ಶಾಸಕರ ವಿರುದ್ಧ ಕ್ರಮ ಜರುಗಿಸಲು ಕೋರುವವರಿಗೆ ಶಿಂಧೆ ತಿರುಗೇಟು ನೀಡಿದರು, ಶಾಸಕಾಂಗ ಕೆಲಸಕ್ಕೆ ಮಾತ್ರ ವಿಪ್ ಅನ್ವಯಿಸುತ್ತದೆ ಎಂದು ಪ್ರತಿಪಾದಿಸಿದರು.

ಈ ಕುರಿತು ಟ್ವೀಟ್ ಮಾಡಿರುವ ಶಿಂಧೆ, ‘ನೀವು ಯಾರಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದೀರಿ? ನಿಮ್ಮ ಗಿಮಿಕ್‌ಗಳನ್ನು ನಾವು ತಿಳಿದಿದ್ದೇವೆ ಮತ್ತು ಕಾನೂನನ್ನು ಸಹ ಅರ್ಥಮಾಡಿಕೊಳ್ಳುತ್ತೇವೆ. ಸಂವಿಧಾನದ 10 ನೇ ಶೆಡ್ಯೂಲ್ ಪ್ರಕಾರ, ವಿಪ್ ಶಾಸಕಾಂಗ ವ್ಯವಹಾರಕ್ಕೆ ಅನ್ವಯಿಸುತ್ತದೆ ಮತ್ತು ಯಾವುದೇ ಸಭೆಗೆ ಅಲ್ಲ ಎಂದಿದ್ದಾರೆ. ಅಲ್ಲದೇ "ನಿಮ್ಮಲ್ಲಿ ಸಾಕಷ್ಟು ಸಂಖ್ಯೆಯ (ಶಾಸಕರ) ಇಲ್ಲದ ಕಾರಣ ನಾವು ನಿಮ್ಮ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೇವೆ, ಆದರೆ ನೀವು ಇನ್ನೂ 12 ಶಾಸಕರ ಗುಂಪನ್ನು ರಚಿಸಿದ್ದೀರಿ. ಅಂತಹ ಬೆದರಿಕೆಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸವಾಲೆಸೆದಿದ್ದಾರೆ.

ಮುಂಬೈನತ್ತ ಏಕನಾಥ್ ಶಿಂಧೆ

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇತರ ಬಂಡಾಯ ಶಾಸಕರೊಂದಿಗೆ ಗುವಾಹಟಿ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಬೀಡು ಬಿಟ್ಟಿದ್ದ ಏಕನಾರ್ಥ ಶಿಂಧೆ ಮುಂಬೈಗೆ ಪ್ರಯಾಣ ಬೆಳೆದಿದ್ದಾರೆ. ಅವರ ಮುಂದಿನ ನಡೆ ಏನು? ಎಲ್ಲವೂ ಕಾಲ ಉತ್ತರಿಸಬೇಕಿದೆ. 

click me!