ನ.20ಕ್ಕೆ ಮಹಾರಾಷ್ಟ್ರ, ನ.13, 20ರಂದು ಜಾರ್ಖಂಡ್ ಎಲೆಕ್ಷನ್: ರಾಜೀವ್ ಕುಮಾರ್

By Kannadaprabha News  |  First Published Oct 16, 2024, 6:59 AM IST

ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆಗೆ ಬರುವ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. 


ನವದೆಹಲಿ (ಅ.16): ಬಿಜೆಪಿ ಹಾಗೂ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆ ಆಗಿರುವ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆಗೆ ಬರುವ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಇದರ ಜೊತೆ ಜೊತೆಗೇ, ಕರ್ನಾಟಕದ 3 ಸೇರಿ ವಿವಿಧ ರಾಜ್ಯಗಳ 48ವಿಧಾನಸಭೆ ಉಪಚುನಾವಣೆಗಳು ಹಾಗೂ ಕೇರಳದ ವಯನಾಡು, ಮಹಾರಾಷ್ಟ್ರದ ನಾಂ ದೇಡ್‌ ಲೋಕಸಭಾ ಕ್ಷೇತ್ರಗಳಿಗೂ ಉಪಚುನಾವಣೆ ದಿನಾಂಕ ಗಳನ್ನು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಈ ಪ್ರಕಾರ, 288 ಕ್ಷೇತ್ರಗಳ ಮಹಾರಾಷ್ಟ್ರದಲ್ಲಿ ಏಕ ಹಂತದಲ್ಲಿ ಅಂದರೆ ನ.20ಕ್ಕೆ ಮತದಾನ ನಡೆಯಲಿದೆ. 

81 ಕ್ಷೇತ್ರಗಳ ಜಾರ್ಖಂಡ್ ಚುನಾವಣೆಯು ನ.13 ಮತ್ತು ನ.20ರಂದು 2 ಹಂತಗಳಲ್ಲಿ ನಡೆಯಲಿದೆ. ಇದೇ ವೇಳೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡಲ್ಲಿ ನ.13ರಂದು, ಉತ್ತರಾಖಂಡದ ಕೇದಾರನಾಥ್ ವಿಧಾನಸಭೆ ಹಾಗೂ ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದಲ್ಲಿ ನ.20ರಂದು ಉಪಚುನಾವಣೆ ನಡೆಯಲಿದೆ. 2 ರಾಜ್ಯಗಳ ವಿಧಾನಸಭೆಚುನಾವಣೆ, 48 ವಿಧಾನಸಭಾ ಉಪಚುನಾವಣೆ ಹಾಗೂ ವಯನಾಡ್, ನಾಂದೇಡ್ ಲೋಕಸಭಾ ಉಪಚುನಾವಣಾ ಫಲಿತಾಂಶಗಳು ಒಟ್ಟಿಗೇ ನ.23ರಂದು ಘೋಷಣೆ ಆಗಲಿವೆ. ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ. 

Tap to resize

Latest Videos

ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ

ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆ: ಹಾಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂಧೆಬಣ)- ಎನ್ ಸಿಪಿ (ಅಜಿತ್ ಬಣ) ಮೈತ್ರಿಕೂಟ ಅಧಿಕಾರದಲ್ಲಿದೆ. ಅದನ್ನು ಕೆಳಗಿಳಿಸಲು ಕಾಂಗ್ರೆಸ್‌-ಎನ್‌ಸಿಪಿ (ಶರದ್ ಬಣ)- ಶಿವಸೇನೆ (ಠಾಕ್ರೆ ಬಣ) ಮೈತ್ರಿಕೂಟ ಸಾಹಸ ನಡೆಸುತ್ತಿದೆ. ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್‌ ಕೂಟ ಅಧಿಕಾರದಲ್ಲಿದೆ. ಈ ಕೂಟ ಕೆಳಗಿಳಿಸಲು ಬಿಜೆಪಿ ಯತ್ನಿಸುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ಅವಧಿನ.26ಕ್ಕೆ ಕೊನೆಗೊಳ್ಳಲಿದ್ದು, ಜಾರ್ಖಂಡ್‌ನ ಅವಧಿ 2025ರ ಜ.5ಕ್ಕೆ ಮುಕ್ತಾಯವಾಗಲಿದೆ. 2019ರ ಜಾರ್ಖಂಡ್ ವಿಧಾನಸಭಾ ಚುನಾವಣೆಯು ಐದು ಹಂತಗಳಲ್ಲಿ ನಡೆದಿದ್ದರೆ, ಮಹಾರಾಷ್ಟ್ರದಲ್ಲಿ ಕೇವಲ ಒಂದು ಹಂತ ಮತದಾನ ನಡೆದಿತ್ತು.

click me!