ಮುಂಬೈ ಪಾರ್ಕ್‌ಗೆ ಟಿಪ್ಪು ಸುಲ್ತಾನ್ ಹೆಸರು: ಬಿಜೆಪಿ, ವಿಎಚ್‌ಪಿ ತೀವ್ರ ವಿರೋಧ!

By Suvarna News  |  First Published Jan 27, 2022, 7:42 AM IST

* ನೂತನ ಉದ್ಯಾನವನವೊಂದಕ್ಕೆ ಟಿಪ್ಪು ಸುಲ್ತಾನ್‌ ಹೆಸರು
*ಸರ್ಕಾರದ ನಿರ್ಧಾರಕ್ಕೆ ವಿಎಚ್‌ಪಿ ಮತ್ತು ಬಿಜೆಪಿ  ಟೀಕೆ
*ಬಿಜೆಪಿಯಿಂದ ಕೋಮು ಬಣ್ಣ ನೀಡಲು ಪ್ರಯತ್ನ: ಕಾಂಗ್ರೆಸ್


ಮುಂಬೈ (ಜ. 27) : ಮಹಾರಷ್ಟ್ರದ ಮುಂಬೈಯಲ್ಲಿ (Mumbai) ಅಭಿವೃದ್ಧಿಪಡಿಸಲಾಗಿರುವ ನೂತನ ಉದ್ಯಾನವನವೊಂದಕ್ಕೆ ಟಿಪ್ಪು ಸುಲ್ತಾನ್‌ (Tippu Sultan) ಹೆಸರಿಟ್ಟಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ನಿರ್ಧಾರನ್ನು ವಿಎಚ್‌ಪಿ (VHP) ಮತ್ತು ಬಿಜೆಪಿ (BJP) ಬಲವಾಗಿ ಟೀಕಿಸಿವೆ. ಅಲ್ಲದೆ ಬುಧವಾರ ನಡೆದ ಪಾರ್ಕ್ನ ಉದ್ಘಾಟನೆ ವೇಳೆ ಪ್ರತಿಭಟನೆಯನ್ನೂ ನಡೆಸಿವೆ. ಮಲ್ವಾನಿ ಪ್ರದೇಶದಲ್ಲಿನ ನವೀಕರಿಸಲಾದ ಪಾರ್ಕ್ ಅನ್ನು ಸಚಿವ ಅಸ್ಲಾಂ ಶೇಖ್‌ (Aslam Shaikh) ಬುಧವಾರ ಉದ್ಘಾಟಿಸಿದರು. ಈ ವೇಳೆ ಬಿಜೆಪಿ, ವಿಎಚ್‌ಪಿ ಕಾರ್ಯಕರ್ತರ ಪ್ರತಿಭಟನೆಗೆ ಬಗ್ಗೆ ಪ್ರತಿಕ್ರಿಯಿಸಿದ ಅವರು 15 ವರ್ಷಗಳ ಹಿಂದಿನಿಂದಲೇ ಪಾರ್ಕ್ಗೆ ಟಿಪ್ಪು ಸುಲ್ತಾನ್‌ ಹೆಸರು ಇದೆ. ಆಗ ಇಲ್ಲದ ವಿರೋಧ ಈಗ ಏಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಪಾರ್ಕ್ಗೆ ಟಿಪ್ಪು ಹೆಸರಿಟ್ಟ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌  , ‘ಹಿಂದುಗಳ ಮೇಲೆ ದೌರ್ಜನ್ಯವೆಸಗಿದ ವ್ಯಕ್ತಿಗೆ ಗೌರವ ನೀಡುತ್ತಿರುವುದಕ್ಕೆ ಕಾರಣವೇನು? ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು. ಈ ಸರ್ಕಾರ ಸ್ಥಿರವಾಗಿಲ್ಲ’ಎಂದು ಟೀಕಿಸಿದರು.

Tap to resize

Latest Videos

“ಎಂವಿಎ ಸರ್ಕಾರವು ಜನರ ಭಾವನೆಗಳನ್ನು ಅವಮಾನಿಸಿದೆ. ಇಂತಹ ಕೃತ್ಯವನ್ನು ಬಿಜೆಪಿ ಸಹಿಸುವುದಿಲ್ಲ. ಈ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಪೊಲೀಸ್ ರಕ್ಷಣೆ ನೀಡಿದ ರೀತಿ ದಿಗಿಲು ಹುಟ್ಟಿಸುವಂತಿದೆ. ಆದರೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ'  ಫಡ್ನವೀಸ್‌ ಹೇಳಿದರು.‌

ಇದನ್ನೂ ಓದಿ: ಟಿಪ್ಪು ಸಿಂಹಾಸನದ ಕಳಸ 15 ಕೋಟಿಗೆ ಹರಾಜು

ಸಮಸ್ಯೆಗೆ ಕೋಮು ಬಣ್ಣ: ಈ ಈ ಸ್ಥಳವನ್ನು ಈಗಾಗಲೇ ಟಿಪ್ಪು ಸುಲ್ತಾನ್ ಮೈದಾನ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ಮರುನಾಮಕರಣ ಮಾಡುವ ಯಾವುದೇ ಅಧಿಕೃತ ಕ್ರಮವಿಲ್ಲ ಎಂದು ಶೇಖ್ ಹೇಳಿದರು. “ಇದೀಗ ಹಲವು ವರ್ಷಗಳಿಂದ ಟಿಪ್ಪು ಸುಲ್ತಾನ್ ಮೈದಾನ ಎಂದು ಜನಪ್ರಿಯವಾಗಿ ಉಲ್ಲೇಖಿಸಲಾಗಿದೆ. ಈ ಹಿಂದೆ ಕಾರ್ಯಾರಂಭ ಮಾಡಿರುವ ಮತ್ತು ಈಗ ಪೂರ್ಣಗೊಂಡಿರುವ ಹೊಸ ಸೌಲಭ್ಯಗಳ ಉದ್ಘಾಟನೆಗೆ ಮಾತ್ರ ನಾನು ಬಂದಿದ್ದೆ, ಬಿಜೆಪಿಯು ಸಮಸ್ಯೆಗೆ ಕೋಮು ಬಣ್ಣ ನೀಡಲು ಪ್ರಯತ್ನಿಸುತ್ತಿದೆ''  ಎಂದು ಅಸ್ಲಾಂ ಆರೋಪಿಸಿದರು.

ಮಲ್ವಾನಿ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಅಸ್ಲಂ ಶೇಖ್ ಅವರು ತಮ್ಮ ಶಾಸಕರ ಅಭಿವೃದ್ಧಿ ನಿಧಿಯ ಮೂಲಕ ಮೈದಾನದಲ್ಲಿ ನವೀಕರಣ ಮತ್ತು ಸೌಲಭ್ಯಗಳ ವಿಸ್ತರಣೆಯನ್ನು ಕೈಗೊಂಡಿದ್ದರು. ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು, ಅವರು ಬುಧವಾರ ಸೌಲಭ್ಯವನ್ನು ಉದ್ಘಾಟಿಸಿದ್ದಾರೆ.

ಇದನ್ನೂ ಓದಿಟಿಪ್ಪು ಸುಲ್ತಾನ್ ಏನೆಲ್ಲಾ ಮಾಡಿದ್ರು? ಇತಿಹಾಸ ತೆರೆದಿಟ್ಟ ಸಿದ್ದರಾಮಯ್ಯ

ಮರುನಾಮಕರಣ ಪ್ರಸ್ತಾವನೆ ಇಲ್ಲ: ಆದರೆ ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಆದಿತ್ಯ ಠಾಕ್ರೆ (Aditya Thackeray) ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಉದ್ಯಾನವನ್ನು ಟಿಪ್ಪು ಸುಲ್ತಾನ್ ಹೆಸರನ್ನು ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾವನೆಯನ್ನು ಅಂಗೀಕರಿಸಿಲ್ಲ ಎಂದು ಹೇಳಿದ್ದಾರೆ. “ಯಾವುದೇ ಮರುನಾಮಕರಣ ನಡೆದಿಲ್ಲ. ಈ ವಿಷಯಗಳ ಬಗ್ಗೆ ಬಿಎಂಸಿಗೆ ಅಧಿಕಾರವಿದೆ ಮತ್ತು ಬಿಎಂಸಿಯ ಮುಂದೆ ಮರುನಾಮಕರಣದ ಯಾವುದೇ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ, ”ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಂಬೈ ಬಿಜೆಪಿ ಅಧ್ಯಕ್ಷ ಮಂಗಲ್ ಪ್ರಭಾತ್ ಲೋಧಾ, "ಇದು ಮುಸ್ಲಿಂ ಓಲೈಕೆಯಲ್ಲದೆ ಬೇರೇನೂ ಅಲ್ಲ. ಸಾರ್ವಜನಿಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕ್ರೀಡಾ ಸಂಕೀರ್ಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಅವಕಾಶ ನೀಡಬಾರದು ಎಂದು ನಾವು ರಾಜ್ಯ ಸರ್ಕಾರವನ್ನು ಪದೇ ಪದೇ ಒತ್ತಾಯಿಸುತ್ತಿದ್ದೇವೆ. ಅವರು ಬೇರೆ ಹೆಸರನ್ನು ಏಕೆ ಯೋಚಿಸುವುದಿಲ್ಲ?" ಎಂದು ಹೇಳಿದರು.

64 ಜನರ ವಿರುದ್ಧ FIR: ಸಂಸದ ಗೋಪಾಲ್ ಶೆಟ್ಟಿ, ಶಾಸಕ ಮತ್ತು ಉದ್ಯಮಿ ಮಂಗಲ್ ಪ್ರಭಾತ್ ಲೋಧಾ, ಶಾಸಕ ಅತುಲ್ ಭಟ್ಕಳಕರ್ ಮತ್ತು ಬಿಜೆಪಿ ಕಾರ್ಪೊರೇಟರ್‌ ಸೇರಿದಂತೆ ಬಜರಂಗದಳ ಮತ್ತು ಬಿಜೆಪಿಯ 64 ಜನರ ವಿರುದ್ಧ "ಕಾನೂನುಬಾಹಿರ ಸಭೆ, ಗಲಭೆ, ಮತ್ತು ಕೋವಿಡ್ -19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಆರೋಪದ  ಮೇಲೆ ಎರಡು ಎಫ್‌ಐಆರ್‌ಗಳನ್ನು ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. 

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ಅವರು ಎರಡು ಬೆಸ್ಟ್ ಬಸ್‌ಗಳ (BEST Bus) ಟೈರ್‌ಗಳನ್ನು ಪಂಕ್ಚರ್ ಮಾಡಿದರು ಮತ್ತು ರಸ್ತೆಯನ್ನು ತಡೆದು ಚಾರ್ಕೋಪ್ ಜಂಕ್ಷನ್‌ನಲ್ಲಿ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡಿದರು. ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಅವರಿಗೆ ನೋಟಿಸ್ ನೀಡಿ ಅಲ್ಲಿಂದ ತೆರಳಲು ಅವಕಾಶ ನೀಡಲಾಯಿತು. ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಪ್ರತಿಭಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ" ಎಂದು ಹೇಳಿದ್ದಾರೆ.

click me!