
ಮುಂಬೈ(ಮೇ.01): ಕೊರೋನಾದಿಂದ ಜರ್ಜರಿತವಾಗಿದ್ದ ಮುಂಬೈನಲ್ಲಿ ನಿಧಾನವಾಗಿ ಪರಿಸ್ಥಿತಿ ಬದಲಾಗತೊಡಗಿದೆ. ಪರಿಣಾಮಕಾರಿ ಜನತಾ ಕಫä್ರ್ಯ ಹಾಗೂ ಸೋಂಕು ನಿಯಂತ್ರಣ ಕ್ರಮ ಜರುಗಿಸಿದ್ದರಿಂದ ದೇಶದ ವಾಣಿಜ್ಯ ರಾಜಧಾನಿಯ ಕೊರೋನಾ ಪಾಸಿಟಿವಿಟಿ ದರ ಇತ್ತೀಚಿನ ದಿನಗಳಲ್ಲೇ ಮೊದಲ ಬಾರಿ ಒಂದಂಕಿಗೆ ಕುಸಿದಿದೆ. ಇದು ಸೋಂಕು ಏರಿಕೆಯಿಂದ ಜರ್ಜರಿತವಾಗಿ ಈಗಷ್ಟೇ ಜನತಾ ಕಫä್ರ್ಯ ಆರಂಭಿಸಿರುವ ಕರ್ನಾಟಕಕ್ಕೂ ಒಂದು ಆಶಾದಾಯಕ ಸುದ್ದಿ.
"
‘ಏಪ್ರಿಲ್ 4ರಂದು ಮುಂಬೈನಲ್ಲಿ ಪಾಸಿಟಿವಿಟಿ ದರ ಗರಿಷ್ಠ ಶೇ.27.94ಕ್ಕೆ ತಲುಪಿತ್ತು. ಆದರೆ, ಏಪ್ರಿಲ್ 29ರಂದು (ಗುರುವಾರ) ಪಾಸಿಟಿವಿಟಿ ದರ ಶೇ.9.94ರಷ್ಟುದಾಖಲಾಗಿದೆ. 43,524 ಮಂದಿ ಪರೀಕ್ಷೆಗೆ ಒಳಪಟ್ಟರೆ 3,328 ಮಂದಿಗೆ ಸೋಂಕು ದೃಢಪಟ್ಟಿದೆ’ ಎಂದು ಮುಂಬೈ ನಗರಪಾಲಿಕೆ ಆಯುಕ್ತ ಇಕ್ಬಾಲ್ ಚಹಲ್ ಹೇಳಿದ್ದಾರೆ.
ಇದರ ನಡುವೆಯೇ, ‘ಲಾಕ್‌ಡೌನ್ ಥರದ ನಿಯಂತ್ರಣ ಕ್ರಮಗಳು ಮಹಾರಾಷ್ಟ್ರಕ್ಕೆ ನೆರವಾಗಿವೆ. ಇಲ್ಲದಿದ್ದರೆ ಈಗಿನ 6.5 ಲಕ್ಷ ಸಕ್ರಿಯ ಪ್ರಕರಣಗಳ ಬದಲು 10 ಲಕ್ಷ ಸಕ್ರಿಯ ಪ್ರಕರಣ ಇರುತ್ತಿದ್ದವು’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಒಂದಂಕಿಯ ಏಕೈಕ ನಗರ:
‘ಅತಿ ಹೆಚ್ಚು ಟೆಸ್ಟ್ (ಸುಮಾರು 44 ಸಾವಿರ) ಮಾಡಿದರೂ ಪಾಸಿಟಿವಿಟಿ ದರವನ್ನು ಒಂದಂಕಿಯಲ್ಲಿ ತೋರುತ್ತಿರುವ ದೇಶದ ಏಕೈಕ ದೊಡ್ಡ ನಗರವೆಂದರೆ ಮುಂಬೈ’ ಎಂದು ಆಯುಕ್ತ ಚಹಲ್ ಅವರು ಹೇಳಿಕೊಂಡಿದ್ದಾರೆ.
‘ನಗರದ ಶೇ.85 ಸೋಂಕಿತರಿಗೆ ಸೋಂಕು ಲಕ್ಷಣ ಇಲ್ಲ. ಸೋಂಕು ತಗ್ಗಿ ಗುಣಮುಖರ ಹೆಚ್ಚುತ್ತಿದ್ದಂತೆಯೇ ನಗರದಲ್ಲಿನ ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಹೆಚ್ಚುತ್ತಿದೆ. ಹಾಸಿಗೆ ಲಭ್ಯತೆ ಈಗ 5725ಕ್ಕೆ ಹೆಚ್ಚಿದೆ. ಇದು ಸೋಂಕು ಇಳಿಕೆಯ ಲಕ್ಷಣ’ ಎಂದು ಅವರು ತಿಳಿಸಿದ್ದಾರೆ.
ಯ ಭೂ ಸೇನೆಯ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಬಳಿ ಮಾಹಿತಿ ಪಡೆದುಕಜೊಂಡಿದ್ದಾರೆ. ಈ ವೇಳೆ ಕೋವಿಡ್ ನಿರ್ವಹಣೆಗೆ ಸೇನೆ ಕೈಗೊಳ್ಳುತ್ತಿರುವ ವಿವಿಧ ಕ್ರಮಗಳ ಕುರಿತಾಗಿಯೂ ಚರ್ಚೆ ನಡೆದಿದೆ.
"
ನಗರದಲ್ಲಿ ಟೆಸ್ಟಿಂಗ್ ಹೆಚ್ಚಿಸಿದ್ದು, ಪರಿಣಾಮಕಾರಿ ಜನತಾ ಕಫä್ರ್ಯ, ಕಂಟೇನ್ಮೆಂಟ್ ವಲಯಗಳ ಸೃಷ್ಟಿಹಾಗೂ ಸರ್ಕಾರದ ಕ್ರಮಗಳಿಗೆ ಜನರ ಸಹಕಾರವೇ ಸೋಂಕು ಇಳಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ