ಡ್ರೋನ್ ಮೂಲಕ ಲಸಿಕೆ ಹಂಚಲು ತೆಲಂಗಾಣ ಸರ್ಕಾರಕ್ಕೆ ಗ್ರೀನ್ ಸಿಗ್ನಲ್!

By Suvarna NewsFirst Published Apr 30, 2021, 8:15 PM IST
Highlights

ಕೊರೋನಾ ವೈರಸ್ 2ನೇ ಅಲೆ ಭೀಕರತೆಗೆ ದೇಶವೇ ತತ್ತರಿಸಿದೆ. ಎಲ್ಲಾ ರೀತಿಯಲ್ಲೂ ನಿಯಂತ್ರಣಕ್ಕೆ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದೀಗ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೊರೋನಾ ನಿಯಂತ್ರಣದ ಶ್ರಮಗಳು ನಡೆಯುತ್ತಿದೆ. ಇದರ ಭಾಗವಾಗಿ ತೆಲಂಗಾಣ ಸರ್ಕಾರಕ್ಕೆ ಲಸಿಕೆ ವಿತರಿಸಲು ಡ್ರೋನ್ ಬಳಸಲು ಅನುಮತಿ ನೀಡಿದೆ.

ತೆಲಂಗಾಣ(ಏ.30):  ಸಾಮಾಜಿಕ ಅಂತರ ಪಾಲನೆ, ಸೋಂಕಿ ಹರದಂತೆ ನೋಡಿಕೊಳ್ಳಲು ತಂತ್ರಜ್ಞಾನಗಳ ಬಳಕೆ ಉತ್ತಮ. ಇದರ ಅಂಗವಾಗಿ ಇದೀಗ ನಾಗರೀಕ ವಿಮಾನಯಾನ ಸಚಿವಾಲಯ ತೆಲಂಗಾಣ ಸರ್ಕಾರಕ್ಕೆ ಡ್ರೋನ್ ಮೂಲಕ ಲಸಿಕೆ ನೀಡಲು ಗ್ರೀನ್ ಸಿಗ್ನಲ್   ನೀಡಿದೆ.

ಕೊರೋನಾ ನಿಯಂತ್ರಣಕ್ಕೆ ಬೆಂಗಳೂರಿನಲ್ಲಿ ಡ್ರೋಣ್ ಮೂಲಕ ಸ್ಯಾನಿಟೈಸರ್ ಸಿಂಪಡಣೆ

ಬೆಂಗಳೂರಿನಲ್ಲಿ ಸ್ಯಾನಿಟೈಸ್ ಮಾಡಲು ಕರ್ನಾಟಕ ಸರ್ಕಾರ ಡ್ರೋನ್ ಬಳಕೆ ಮಾಡುತ್ತಿದೆ. ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರ ಲಸಿಕೆ ನೀಡಲು ಡ್ರೋನ್ ಬಳಕೆ ಮಾಡಲು ಅನುಮತಿ ಕೇಳಿತ್ತು. ಇದಕ್ಕೆ ವಿಮಾನಯಾನ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

ಇದೀಗ ತೆಲಂಗಾಣ ಸರ್ಕಾರ ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಡ್ರೋನ್ ಬಳಕೆ ಮಾಡಲಿದೆ. ತೆಲಂಗಾಣದ ಹಲವು ಭಾಗಗಳಿಗೆ ಡ್ರೋನ್ ಮೂಲಕ ಲಸಿಕೆ ರವಾನೆಯಾಗಲಿದೆ.  ಈ ಮೂಲಕ ರಾಜ್ಯಜಲ್ಲಿ ಸರಾಗವಾಗಿ ಲಸಿಕೆ ಹಂಚಲು ತೆಲಂಗಾಣ ಮುಂದಾಗಿದೆ

click me!