ಬಿಜೆಪಿ-ಸೇನೆಗೆ ಭಾರಿ ಜಯ ಬಿಜೆಪಿ ಕೂಟಕ್ಕೆ 11, ಅಘಾಡಿಗೆ ಕೇವಲ 2 ಸೀಟು 

By Kannadaprabha News  |  First Published Jul 13, 2024, 10:49 AM IST

ಬಿಜೆಪಿ ತಾನು ಸ್ಪರ್ಧಿಸಿದ ಎಲ್ಲ, ಶಿಂಧೆ ಶಿವಸೇನೆಯ ಇಬ್ಬರು, ಅಜಿತ್ ಎನ್‌ಸಿಪಿಯ ಇಬ್ಬರು ಗೆದ್ದಿದ್ದಾರೆ. ಅಘಾಡಿ 2 ಸೀಟಲ್ಲಿ ಗೆದ್ದಿದ್ದು, ಶರದ್ ಪವಾರ್ ಬೆಂಬಲಿತ ಅಭ್ಯರ್ಥಿ, ಪಿಡಬ್ಲ್ಯುಪಿ ಪಕ್ಷದ ಜಯಂತ ಪಾಟೀಲ್‌ ಸೋತಿದ್ದಾರೆ. 


ಮುಂಬೈ: ವರ್ಷಾಂತ್ಯದ ವಿಧಾನಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತ ಆಗಿದ್ದ ಮಹಾರಾಷ್ಟ್ರ ವಿಧಾನ ಪರಿಷತ್ ದೈವಾರ್ಷಿಕ ಚುನಾವಣೆಯಲ್ಲಿ ಆಡಳಿತಾ ರೂಢ ಮಹಾಮೂತಿ ಮೈತ್ರಿಕೂಟ (ಬಿಜೆಪಿ- ಶಿಂಧೆ ಶಿವಸೇನೆ-ಎನ್‌ಸಿಪಿ ಅಜಿತ್), 11 ಸೀಟುಗಳ ಪೈಕಿ 9ರಲ್ಲಿ ಗೆದ್ದು ದಿಗ್ವಿಜಯ ಸಾಧಿ ಸಿವೆ. ಇದೇ ವೇಳೆ, ಇನ್ನು ಉಳಿದ 2 ಕ್ಷೇತ್ರಗಳಲ್ಲಿ ಮಹಾ ವಿಕಾಸ ಅಘಾಡಿ ಕೂಟ (ಎನ್‌ಸಿಪಿ ಶರದ್-ಕಾಂಗ್ರೆಸ್-ಠಾಕ್ರೆ ಶಿವಸೇನೆ) ಗೆದ್ದಿವೆ. 11 ಸೀಟುಗಳಿಗೆ 12 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಹೀಗಾಗಿ ಅವಿರೋಧ ಆಯ್ಕೆ ನಡೆಯದೇ ಚುನಾವಣೆ ಏರ್ಪಟ್ಟಿತ್ತು. 

ಬಿಜೆಪಿ ತಾನು ಸ್ಪರ್ಧಿಸಿದ ಎಲ್ಲ, ಶಿಂಧೆ ಶಿವಸೇನೆಯ ಇಬ್ಬರು, ಅಜಿತ್ ಎನ್‌ಸಿಪಿಯ ಇಬ್ಬರು ಗೆದ್ದಿದ್ದಾರೆ. ಅಘಾಡಿ 2 ಸೀಟಲ್ಲಿ ಗೆದ್ದಿದ್ದು, ಶರದ್ ಪವಾರ್ ಬೆಂಬಲಿತ ಅಭ್ಯರ್ಥಿ, ಪಿಡಬ್ಲ್ಯುಪಿ ಪಕ್ಷದ ಜಯಂತ ಪಾಟೀಲ್‌ ಸೋತಿದ್ದಾರೆ. 

Tap to resize

Latest Videos

ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಬಿಗ್ ರಿಲೀಫ್: ಜಾಮೀನು ಸಿಕ್ಕರೂ ಜೈಲೇ ಗತಿ

7-8 ಶಾಸಕರ ಅಡ್ಡಮತ ಮುಂಬೈ 7-8 ಕಾಂಗ್ರೆಸ್ ಶಾಸಕರು ಬಿಜೆಪಿ ಪರ ಅಡ್ಡಮತದಾನ ಮಾಡಿದ್ದು, ಇದು ಎನ್‌ಸಿಪಿ (ಶರದ್ ಬಣ) ಜಯಂತ ಪಾಟೀಲ್ ಸೋಲಿಗೆ ಕಾರಣ ಎನ್ನಲಾಗಿದೆ. ಹೀಗಾಗಿ ಅಘಾಡಿಗೆ ಇದು ಭಾರಿ ಹಿನ್ನಡೆ ಆಗಿದೆ.

ಸಂಕಷ್ಟದಲ್ಲಿ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ IAS ಅಧಿಕಾರಿ ಪೂಜಾ

click me!