ಲವ್ ಜಿಹಾದ್ ತಡೆಗಟ್ಟಲು ಶೀಘ್ರದಲ್ಲೇ ಕಠಿಣ ಕಾನೂನು, ಉಪಮುಖ್ಯಮಂತ್ರಿ ಘೋಷಣೆ!

By Suvarna NewsFirst Published Dec 21, 2022, 5:33 PM IST
Highlights

ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಬಳಿಕ ಲವ್ ಜಿಹಾದ್ ಕುರಿತು ಭಾರಿ ಚರ್ಚೆಗಳಾಗುತ್ತಿದೆ. ಜೊತೆಗೆ ಈ ರೀತಿಯ ಕ್ರೌರ್ಯ ತಡೆಗಟ್ಟಲು ಕಠಿಣ ಕಾನೂನಿನ ಅಗತ್ಯತೆಯನ್ನು ಹಲವರು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಲವ್ ಜಿಹಾದ್ ನಿಯಂತ್ರಣಕ್ಕೆ ಶೀಘ್ರದಲ್ಲೇ ಕಾನೂನು ಜಾರಿಯಾಗುತ್ತಿರುವ ಸುಳಿವು ಸಿಕ್ಕಿದೆ.

ಮುಂಬೈ(ಡಿ.21): ದೆಹಲಿಯ ಶ್ರದ್ಧ ವಾಕರ್ ಭೀಕರ ಹತ್ಯೆ ಬಳಿಕ ದೇಶದಲ್ಲಿ ಆಕ್ರೋಶ ಮಡುಗಟ್ಟಿದೆ. ಅದರಲ್ಲೂ ಪ್ರಮುಖವಾಗಿ ಹಿಂದೂ ಹೆಣ್ಣಮಕ್ಕಳನ್ನು ಮೋಸದ ಬಲೆಗೆ ಬೀಳಿಸಿ ಬಳಿಕ ಹತ್ಯೆ ಮಾಡುವ ಹಲವು ಘಟನೆಗಳು ವರದಿಯಾಗುತ್ತಿದೆ. ಆದರೆ ಕಠಿಣ ಕ್ರಮ ಮಾತ್ರ ಆಗುತ್ತಿಲ್ಲ ಅನ್ನೋ ಆಕ್ರೋಶ ಹಲವರು ವ್ಯಕ್ತಪಡಿಸಿದ್ದಾರೆ. ಶ್ರದ್ಧ ವಾಕರ್ ಹತ್ಯೆ ಬಳಿಕ ಲವ್ ಜಿಹಾದ್ ತಡೆಗೆ ಸರ್ಕಾರ ಮುಂದಾಗಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಇದೀಗ ದೇಶದಲ್ಲೇ ಮೊದಲ ಬಾರಿಗೆ ಲವ್ ಜ್ ಜಿಹಾದ್ ತಡೆಗೆ ಕಠಿಣ ಕಾನೂನು ಜಾರಿಗೆ ಮುಂದಾಗಿದೆ. ಅಂತರ್ ಧರ್ಮದ ಮದುವೆ, ಆಶ್ವಾಸನೆ ಲಿವಿಂಗ್ ರಿಲೇಶನ್‌ಶಿಪ್ ಸಂಬಂಧಗಳಲ್ಲಿ ಹೆಣ್ಣು ಅನುಭವಿಸುವ ಮಾನಸಿಕ ಹಾಗೂ ದೈಹಿಕ ಯಾತನೆ ಅಂತ್ಯಗೊಳಿಸಲು ಲವ್ ಜಿಹಾದ್ ಕಾನೂನು ಅಗತ್ಯ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ದೇವೇಂದ್ರ ಫಡ್ನವಿಸ್, ಶ್ರದ್ಧ ವಾಕರ್ ಪ್ರಕರಣವನ್ನು ಫಾಸ್ಟ್ ಟ್ರಾಕ್ ಕೋರ್ಟ್ ಮೂಲಕ ವಿಚಾರಣೆ ನಡೆಸಿ ನ್ಯಾಯ ಒದಗಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡುತ್ತೇವೆ. ಆರೋಪಿಗೆ ಕಠಿಣ ಶಿಕ್ಷೆ ಆದಷ್ಟು ಬೇಗ ಸಿಗಬೇಕು. ನೊಂದಿರುವ ಶ್ರದ್ಧಾ ಪೋಷಕರಿಗೆ ನ್ಯಾಯ ಸಿಗಬೇಕು ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಇದೇ ವೇಳೆ ಇಂತಹ ಘಟನೆಗಳನ್ನು ತಡೆಯಲು ಲವ್ ಜಿಹಾದ್ ವಿರೋಧಿ ನಿಯಮದ ಅಗತ್ಯವಿದೆ ಎಂದಿದ್ದಾರೆ.

Love jihad ಬಗ್ಗೆ ಪ್ರತಿಯೊಬ್ಬ ಹಿಂದು ಎಚ್ಚೆತ್ತುಕೊಳ್ಳಬೇಕು: ಸೂಲಿಬೆಲೆ

ಮಹಾರಾಷ್ಟ್ರ ವಿಧಾಸಭೆಯಲ್ಲಿ ಈ ಕುರಿತು ಚರ್ಚಿಸಿ ಶೀಘ್ರದಲ್ಲೇ ಲವ್ ಜಿಹಾದ್ ವಿರೋಧಿ ಕಾನೂನು ಜಾರಿ ಮಾಡುತ್ತೇವೆ. ಈ ಮೂಲಕ ರಾಜ್ಯದ ಹೆಣ್ಣುಮಕ್ಕಳ ಸುರಕ್ಷತೆಗೆ ಕಾನೂನಿನ ರಕ್ಷಣೆ ಒದಗಿಸುತ್ತೇವೆ. ಲವ್ ಜಿಹಾದ್ ತಡೆ ಅತೀ ಅವಶ್ಯಕವಾಗಿ ಮಾರ್ಪಟ್ಟಿದೆ. ಒಂದೊಂದೆ ಪ್ರಕರಣಗಳು ದಾಖಲಾಗುತ್ತಿದೆ. ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಫಡ್ನವಿಸ್ ಹೇಳಿದ್ದಾರೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ಅಂತರ್ಜಾತಿ ವಿವಾಹ ಹಾಗೂ ಅಂತರ್‌ ಧರ್ಮೀಯ ವಿವಾಹದ ಮೇಲೆ ನಿಗಾ ಇಡಲು ಸಮಿತಿ ನೇಮಕ ಮಾಡಿದೆ. ಈ ಸಮಿತಿಗೆ ಸಚಿವ ಮಂಗಲ್‌ ಪ್ರಭಾತ್‌ ಲೋಧಾ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಅಂತರ್ಜಾತಿ/ಅಂತರ್‌ಧರ್ಮೀಯ ವಿವಾಹ-ಕುಟುಂಬ ಸಮನ್ವಯ ಸಮಿತಿ’ ಎಂದು ಹೆಸರಿಡಲಾಗಿದೆ.

Love Jihad: ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ಸ್ಥಾಪನೆ ಆಂದೋಲನ

ಈ ಬಗ್ಗೆ ಮಾತನಾಡಿದ ಸಚಿವ ಮಂಗಲ್‌ ಪ್ರಭಾತ್‌ ಲೋಧಾ, ‘ಶ್ರದ್ಧಾ ವಾಕರ್‌ಳನ್ನು ಆಕೆಯ ಕುಟುಂಬದಿಂದ ದೂರ ಮಾಡಿದ ವ್ಯಕ್ತಿಯೊಬ್ಬ ಹತ್ಯೆ ಮಾಡಿದ. 6 ತಿಂಗಳಾದರೂ ಹತ್ಯೆ ವಿಷಯ ಯಾರಿಗೂ ಗೊತ್ತಿರಲಿಲ್ಲ. ಇನ್ನೊಂದು ಇಂಥ ಪ್ರಕರಣ ನಡೆಯುವುದನ್ನು ನಾವು ಬಯಸುವುದಿಲ್ಲ. ಈ ರೀತಿ ಮದುವೆ ಆಗಿರುವ ಮಹಿಳೆಯರು ಕುಟುಂಬದಿಂದ ದೂರ ಆಗದಂತೆ ನಿಗಾ ವಹಿಸಲಾಗುವುದು’ ಎಂದು ಹೇಳಿದರು.

ಸರ್ಕಾರದ ಈ ಕ್ರಮಕ್ಕೆ ವಿಪಕ್ಷ ಎನ್‌ಸಿಪಿ ಆಕ್ರೋಶ ವ್ಯಕ್ತಪಡಿಸಿದ್ದು, ‘ದಂಪತಿಗಳ ವೈಯಕ್ತಿಕ ಜೀವನದ ಮೇಲೆ ಬೇಹುಗಾರಿಕೆ ನಡೆಸುವ ಅಧಿಕಾರ ಶಿಂಧೆ ಸರ್ಕಾರಕ್ಕೆ ಇಲ್ಲ. ಇದೊಂದು ರೀತಿ ಪ್ರತೀಕಾರ ಕ್ರಮ’ ಎಂದು ಟೀಕಿಸಿದೆ. ಆದರೆ ಇದು ಸೂಕ್ತ ಕ್ರಮ ಎಂದು ಶಿಂಧೆ ಬಣದ ಶಿವಸೇನೆ ಸಮರ್ಥಿಸಿಕೊಂಡಿದೆ.

click me!