
ಮುಂಬೈ [ನ. 09] ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುತ್ತದೆ ಎಂಬ ಭಾವನೆಯಲ್ಲಿ ಇದ್ದಾಗಲೇ ಅಲ್ಲಿನ ರಾಜ್ಯಪಾಲರು ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೌಶ್ಯತ್ರಿ ಅವರು ಆಹ್ವಾನ ನೀಡಿದ್ದಾರೆ.
ಫಲಿತಾಂಶ ಪ್ರಕಟಗೊಂಡು 15 ದಿನ ಕಳೆದರೂ ಯಾವೊಂದು ಪಕ್ಷ ಅಥವಾ ಮೈತ್ರಿಕೂಟ ಸರ್ಕಾರ ರಚನೆಗೆ ಹಕ್ಕು ಮುಂದಾಗಲಿಲ್ಲ. ಚುನಾವಣೆಗೆ ಮುನ್ನವೇ ದೋಸ್ತಿಯಾಗಿ ಅಖಾಡಕ್ಕೆ ಇಳಿದಿದ್ದ ಬಿಜೆಪಿ ಮತ್ತು ಶಿವಸೇನೆ ನಂತರ ಭಿನ್ನಾಭಿಪ್ರಾಯದಿಂದ ದೂರವಾಗಿದ್ದವು. ಹಾಗಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ನಿರ್ಮಾಣವಾಗಿರಲಿಲ್ಲ.
ಮಹಾರಾಷ್ಟ್ರ-ಹರಿಯಾಣ ಫೈನಲ್ ಫಲಿತಾಂಶ, ಯಾರಿಗೆ ಎಷ್ಟು?...
ಸರ್ಕಾರ ರಚನೆಗೆ ಹಕ್ಕು ಮಂಡಿಸದೆ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸ್ವಸಾಮರ್ಥ್ಯದ ಮೇಲೆ ಸರ್ಕಾರ ರಚನೆ ಮಾಡುವಂತೆ ಬಿಜೆಪಿ ಶಾಸಕರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದು ಒಂದು ವೇಳೆ ಸರ್ಕಾರ ರಚನೆ ಮಾಡಿದರೆ ಬಹುಮತ ಸಾಬೀತು ಮಾಡಬೇಕಾಗುತ್ತದೆ.
ಮಹಾರಾಷ್ಟ್ರಚುನಾವಣಾ ಫಲಿತಾಂಶ- ಒಟ್ಟು 288 ಸ್ಥಾನಗಳು[ಒಂದು ನೋಟ]
ಸರಳ ಬಹುಮತ 145
* ಬಿಜೆಪಿ- 105
*ಶಿವಸೇನೆ- 56
* ಕಾಂಗ್ರೆಸ್-44
* ಎನ್ ಸಿಪಿ- 54
* ಇಂಡಿಪೆಂಡೆಂಟ್ಸ್- 13
* ಆಲ್ ಇಂಡಿಯಾ ಮಜಿಲ್ಸ್ ಇ ಇಥೆದುಲ್ ಮುಸ್ಲಿಮನ್ -2
* ಬಹುಜನ ವಿಕಾಸ್ ಆಗಡಿ- 3
* ಕಮ್ಯೂನಿಸ್ಟ್ ಪಾರ್ಟಿ(ಎಂ)- 1
* ಜನ್ ಸುರಜ್ಯ ಶಕ್ತಿ- 1
* ಕ್ರಾಂತಿಕಾರಿ ಪಾರ್ಟಿ- 1
* ಮಹಾರಾಷ್ಟ್ರ ನವನಿರ್ಮಾಣ ಸೇನಾ- 1
* ಪೆಸಂಟ್ಸ್ ಆಂಡ್ ವರ್ಕರ್ಸ್ ಪಾರ್ಟಿ- 1
* ಪ್ರಹಾರ್ ಜನಶಸಕ್ತಿ ಪಾರ್ಟಿ- 2
* ರಾಷ್ಟ್ರೀಯ ಸಮಾಜ ಪಕ್ಷ- 1
ಸಮಾಜವಾದಿ ಪಾರ್ಟಿ -2
ಸ್ವಾಭಿಮಾನಿ ಪಕ್ಷ-1
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ