ಕೂಡಿ ಬಾಳುವ ಸಂದೇಶ: ದೇಶಕ್ಕೆ ಮೋದಿ ಅಮೂಲ್ಯ ಉಪದೇಶ!

Published : Nov 09, 2019, 06:19 PM IST
ಕೂಡಿ ಬಾಳುವ ಸಂದೇಶ: ದೇಶಕ್ಕೆ ಮೋದಿ  ಅಮೂಲ್ಯ ಉಪದೇಶ!

ಸಾರಾಂಶ

ಅಯೋಧ್ಯೆ ಭೂವಿವಾದದ ಸುಪ್ರೀಂಕೋರ್ಟ್ ತೀರ್ಪು ಹಿನ್ನೆಲೆ/ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ/ ಸುಪ್ರೀಂಕೋರ್ಟ್ ಕೂಡಿ ಬಾಳುವ ಸಂದೇಶ ನೀಡಿದೆ ಎಂದ ಪ್ರಧಾನಿ/ ಹಳೆಯ ವೈಷಮ್ಯ ಮರೆತು ಭವಿಷ್ಯದೆಡೆಗೆ ಮುನ್ನಡೆಯೋಣ ಎಂದ ಮೋದಿ/ ನವಭಾರತದ ನಿರ್ಮಾಣಕ್ಕೆ ಇಂದಿನ ಸುಪ್ರೀಂ ತೀರ್ಪು ದಾರಿದೀಪ ಎಂದ ಪ್ರಧಾನಿ/ ಉಜ್ವಲ ಭವಿಷ್ಯದೆಡೆಡೆಗೆ ಕೂಡಿ ಹೆಜ್ಜೆ ಹಾಕುವ ಕಾಲ ಬಂದಾಗಿದೆ ಎಂದ ಮೋದಿ/ 

ನವದೆಹಲಿ(ನ.09): ದೇಶ ಕಾತರದಿಂದ ಕಾಯುತ್ತಿದ್ದ ಐತಿಹಾಸಿಕ ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ತೀರ್ಪನ್ನು ಕೊನೆಗೂ ಸುಪ್ರೀಂಕೋರ್ಟ್ ಪ್ರಕಟಿಸಿದೆ. 

ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ  ವಹಿಸಿ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ. ಈ ಮೂಲಕ ವಿವಾದಿತ ಜಾಗಕ್ಕಾಗಿ ಹೋರಾಡುತ್ತಿದ್ದ ಹಿಂದೂಗಳ ನಂಬಿಕೆಗೆ ಐತಿಹಾಸಿಕ ಜಯ ಲಭಿಸಿದೆ. ಆದರೆ, ಬಾಬರಿ ಮಸೀದಿ ಪ್ರತ್ಯೇಕ ಜಾಗವನ್ನು ಕಲ್ಪಿಸಲು ಕೋರ್ಟ್ ಸರಕಾರಕ್ಕೆ ಸೂಚಿಸಿದೆ.   

ವಿವಾದಿತ ಸ್ಥಳದಲ್ಲಿ ರಾಮನ ಜನನ ಸತ್ಯ ಎಂದಿರುವ ಸುಪ್ರೀಂ ಕೋರ್ಟ್, ಕಾನೂನಾತ್ಮಕ ನಿಯಮ ರೂಪಿಸಿ ಮಂದಿರ ನಿರ್ಮಾಣಕ್ಕೆ ಮುಂದಾಗುವಂತೆ ಸರ್ಕಾರಕ್ಕೆ ಸ್ಪಷ್ಟ ನಿರ್ದೇಶಿಸಿದೆ.

ಇನ್ನು ಸುಪ್ರೀಂ ತೀರ್ಪಿನ ಕುರಿತು ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಘನ ನ್ಯಾಯಾಲಯದ ತೀರ್ಪು ಕೂಡಿ ಬಾಳುವ ಸಂದೇಶ ರವಾನಿಸಿದೆ ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ತೀರ್ಪನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ ಪ್ರಧಾನಿ ಮೋದಿ, ನವಭಾರತದ ನಿರ್ಮಾಣಕ್ಕೆ ಇಂದಿನ ಸುಪ್ರೀಂ ತೀರ್ಪು ದಾರಿದೀಪ ಎಂದು ಬಣ್ಣಿಸಿದರು.

ಹಳೆಯ ವೈಷಮ್ಯ ಮರೆತು ಎಲ್ಲರೂ ಒಂದಾಗಿ ಭಾರತದ ಭವಿಷ್ಯವನ್ನು ನಿರ್ಮಿಸಬೇಕಿದೆ ಎಂದು ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು.

ಸುಪ್ರೀಂ ತೀರ್ಪನ್ನು ಸ್ವೀಕರಿಸುತ್ತಾ ಉಜ್ವಲ ಭವಿಷ್ಯದೆಡೆಡೆಗೆ ಕೂಡಿ ಹೆಜ್ಜೆ ಹಾಕುವ ಕಾಲ ಬಂದಾಗಿದೆ ಎಂದು ಪ್ರಧಾನಿ  ಮೋದಿ ನುಡಿದರು.

ಎಲ್ಲ ಸಮುದಾಯದ ಜನ ಒಟ್ಟಾಗಿ ಭವಿಷ್ಯವನ್ನು ನಿರ್ಮಿಸೋಣ ಎಂದು ಕರೆ ನೀಡಿದ ಪ್ರಧಾನಿ, ಸುಪ್ರೀಂ ಕೋರ್ಟ್ ಅಣತಿಯನ್ನು ಪಾಲಿಸುವ ಭರವಸೆ ಕೂಡ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ