
ಬೆಳಗಾವಿ (ಜ 26) ' ಕರ್ನಾಟಕ ಆಕ್ರಮಿತ ಬೆಳಗಾವಿ ಮತ್ತಿತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ತಮ್ಮ ಸರಕಾರ ಬದ್ಧವಾಗಿದೆ' ಎಂದು ಟ್ವೀಟ್ ಮಾಡುವ ಮೂಲಕ ಭಾರೀ ವಿವಾದಕ್ಕೆ ಹಾಗೂ ಕರ್ನಾಟಕ ಸರಕಾರ ಮತ್ತು ಜನತೆಯ ಆಕ್ರೋಶಕ್ಕೆ ಕಾರಣವಾಗಿದ್ದ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರಕಾರ ಈಗ ಗಡಿವಿವಾದ ಸಂಬಂಧ ಮತ್ತೊಂದು ಕಿಡಿ ಹೊತ್ತಿಸಲು ತಯಾರಾಗಿದ್ದಾರೆ.
ಉದ್ಧಟತನಕ್ಕೆ ಇನ್ನೊಂದೆ ಹೆಸರೆ ಉದ್ಧವ್ ಠಾಕ್ರೆ!
ಬುಧವಾರ ಮಹಾರಾಷ್ಟ್ರ ಸರಕಾರವೇ ಹೊರತರುತ್ತಿರುವ ಗಡಿವಿವಾದ ಕುರಿತ ಪುಸ್ತಕವೊಂದನ್ನು ಠಾಕ್ರೆ ಅವರು ಬಿಡುಗಡೆ ಮಾಡಲಿದ್ದಾರೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಗಡಿವಿವಾದ ಕುರಿತು ಬರೆದ "ಮಹಾರಾಷ್ಟ್ರ ಕರ್ನಾಟಕ ಸೀಮಾವಾದ: ಸಂಘರ್ಷ ಆನಿ ಸಂಕಲ್ಪ"( ಗಡಿವಿವಾದ: ಸಂಘರ್ಷಮತ್ತು ಸಂಕಲ್ಪ)ಎಂಬ ಈ ಪುಸ್ತಕದಲ್ಲಿ 1956 ರಿಂದ 2021 ರವರೆಗಿನ ಗಡಿವಿವಾದ ಘಟನಾವಳಿಗಳು ಮತ್ತು ಮಹಾರಾಷ್ಟ್ರ ತಳೆದ ನಿಲುವುಗಳು ಇವೆಯೆಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ