
ನವೆದೆಹಲಿ(ಜ.26): ಕೃಷಿ ಕಾಯ್ದೆ ವಿರೋಧಿಸಿ ರೈತರು ಆಯೋಜಿಸಿದ್ದ ಟ್ರಾಕ್ಟರ್ ರ್ಯಾಲಿ ಇದೀಗ ದಂಗೆಯಾಗಿ ಮಾರ್ಪಟ್ಟಿದೆ. ಹಿಂಸಾರೂಪ ಪಡೆದ ಟ್ರಾಕ್ಟರ್ ರ್ಯಾಲಿಯನ್ನು ರೈತ ಸಂಘಟನೆ ಹಿಂಪಡೆದಿದೆ. ಆದರೆ ಪ್ರತಿಭಟನಾಕಾರರು ದೆಹಲಿಯಿಂದ ಹಿಂದೆ ಸರಿದಿಲ್ಲ. ಕೆಂಪು ಕೋಟೆ ಮುತ್ತಿಗೆ ಹಾಕಿದ ಹಲವು ರೈತರನ್ನು ಹೊರದಬ್ಬಿದ್ದರೂ, ಇದೀಗ ಕೆಲ ರೈತರ ಗುಂಪು ಕೆಂಪು ಕೋಟೆಯಲ್ಲಿ ಠಿಕಾಣಿ ಹೂಡಿದೆ.
ಮಾಡಿದ್ದೆಲ್ಲಾ ಮಾಡಿ, ಟ್ರಾಕ್ಟರ್ ರ‍್ಯಾಲಿ ಹಿಂಪಡೆದ ರೈತ ಸಂಘಟನೆ!.
ಕೆಂಪು ಕೋಟೆಯಲ್ಲೇ ಬೀಡುಬಿಟ್ಟಿರುವ ರೈತರನ್ನು ಹೊರಕಳಿಸುವ ಪ್ರಯತ್ನ ಮುಂದುವರಿದೆ. ಇತ್ತ ಇಂದಿನ ಟ್ರಾಕ್ಟರ್ ರ್ಯಾಲಿಯಲ್ಲಿ ಅತೀ ಹೆಚ್ಚು ಗಾಯಗೊಂಡಿರುವುದು ಪೊಲೀಸ್ ಪಡೆ. ಇದೀಗ ಗಾಯಗೊಂಡ ಪೊಲೀಸರ ಸಂಖ್ಯೆ 109ಕ್ಕೇರಿದೆ. ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.
"
ಕಿಸಾನ್ ಮೋರ್ಚಾ ಸೇರಿದಂತೆ ಹಲವು ರೈತ ಸಂಘಟನೆಗಳು ಗಲಭೆಗೂ ತಮಗೂ ಸಂಬಂಧವಿಲ್ಲ ಎಂದಿದೆ. ಗಲಭೆ ಮಾಡಿದವರು ನಾವಲ್ಲ ಎಂದು ಹೊಸ ಕತೆ ಕಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ