ಅನಾಥ ವೃದ್ಧೆಗೆ 'ಮಗ'ನಾಗಿ ಕೈತುತ್ತು ತಿನ್ನಿಸಿದ ಪೊಲೀಸ್ ಅಧಿಕಾರಿ!

By Suvarna News  |  First Published Jun 1, 2021, 4:18 PM IST

* ನೀವಂದುಕೊಂಡಂತೆ ನಿರ್ದಯಿಗಳಲ್ಲ ಪೊಲೀಸರು

* ಅನಾಥ ವೃದ್ಧೆಗೆ ಮಗನಂತೆ ಕೈತುತ್ತು ತಿನ್ನಿಸಿದ ಪೊಲೀಸ್

* ವೈರಲ್ ಆಯ್ತು ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿಯ ಫೋಟೋ


ನವದೆಹಲಿ(ಜೂ.01): ಸೋಶೀಯಲ್ ಮಿಡಿಯಾ ಸಾಗರದಂತೆ ಇಲ್ಲಿ ವಿವಿಧ ವಿಚಾರಗಳು ಹರಿದಾಡುತ್ತವೆ. ಕೆಲವು ಮನಸ್ಸಿಗೆ ನೋವುಂಟು ಮಾಡಿದರೆ, ಇನ್ನು ಕೆಲವು ಭಾವುಕರನ್ನಾಗಿಸುತ್ತವೆ. ಇನ್ನು ಕೆಲ ಫೋಟೋಗಳು ಜಗತ್ತಿನಲ್ಲಿ ಇನ್ನೂ ಮಾನವೀಯತೆ ಇದೆ ಎಂಬುವುದನ್ನು ತಿಳಿಸಿಕೊಡುತ್ತವೆ.  ಸದ್ಯ ಇಂತಹುದೇ ಫೋಟೋ ಒಂದು ವೈರಲ್ ಆಗಿದೆ. ಆದರೆ ಫೋಟೋದಲ್ಲಿರುವ ಪೊಲೀಸ್ ಅಧಿಕಾರಿ ಯಾರು? ಯಾವ ಠಾಣೆಯಲ್ಲೊ ಕರ್ತವ್ಯ ನಿರ್ವಹಿಸುತ್ತಾರೆಂಬ ವಿಚಾರ ಮಾತ್ರ ತಿಳಿದು ಬಂದಿಲ್ಲ. ಆದರೆ ನೆಟ್ಟಿಗರು ಮಾತ್ರ ಈ ಪೊಲಿಸ್ ಅಧಿಕಾರಿಯ ಹೃದಯವಂತಿಕೆಗೆ ಮನಸೋತಿದ್ದಾರೆ.

पुलिस का एक चेहरा ऐसा भी होता है 🙏🙏 🙏🙏 pic.twitter.com/Q38jJL7lVI

— Rinku Hooda (@RinkuHooda001)

ಪ್ಯಾರಾಲಿಂಪಿಯನ್ ರಿಂಕೂ ಹೂಡಾ ಟ್ವಿಟರ್‌ನಲ್ಲಿ ಈ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಫೋಟೋ ಶೇರ್ ಮಾಡಿಕೊಂಡಿರುವ ರಿಂಕೂ ಪೊಲೀಸರ ಒಂದು ಮುಖ ಹೀಗೂ ಇರುತ್ತದೆ ಎಂದು ಬರೆದಿದ್ದಾರೆ. ಸದ್ಯ ಇದು ವೈರಲ್ ಆಗಿದೆ.

Tap to resize

Latest Videos

ಹೀಗೆವೆ ಕಮೆಂಟ್ಸ್

ಈ ಫೋಟೋ ಕೆಳಗಿನ ಕಮೆಂಟ್‌ ವಿಭಾಗದಲ್ಲಿ ಪೊಲೀಸ್‌ ಸಿಬ್ಬಂದಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಒಬ್ಬಾತ ಈ ಅಧಿಕಾರಿಗೊಂದು ಸಲಾಂ ಎಂದರೆ, ಮತ್ತೊಬ್‌ಬ ಬಳಕೆದಾರ ಒಳ್ಳೆಯ ಕೆಲಸ ಸರ್ ಎಂದಿದ್ದಾರೆ. ಇನ್ನೊಬ್ಬಾತ ನಾವು ಬದುಕಿತ್ತೇವೆ ಯಾಕೆಂದರೆ ಮಾನವೀಯತೆ ಬದುಕಿದೆ ಎಂದು ಬರೆದಿದ್ದರೆ, ಮತ್ತೊಬ್ಬಾತ ನಿಮ್ಮ ಮೇಲೆ ನಮಗೆ ಹೆಮ್ಮೆ ಇದೆ ಎಂದಿದ್ದಾರೆ. ಇನ್ನು ಕೆಲವರು ಶಹಬ್ಬಾಸ್ ಹರ್ಯಾಣ ಪೊಲೀಸ್‌ ಎಂದಿದ್ದಾರೆ.

ಸಾಮಾನ್ಯವಾಗಿ ಜನ ಸಾಮಾನ್ಯರ ಮನದಲ್ಲಿ ಪೊಲೀಸರೆಂದರೆ ಕಠೋರ ಹೃದಯದವರು, ನಿರ್ದಯಿಗಳು ಎಂಬ ಭಾವನೆ ಇದೆ. ಆಧರೆ ಪೊಲೀಸರಿಗೂ ಮನಸ್ಸಿದೆ, ಮಾನವೀಯತೆ ತೋರುತ್ತಾರೆ ಎಂಬುವುದಕ್ಕೆ ಇಂತಹ ಹಲವಾರು ಫೋಟೋಗಳೇ ಸಾಕ್ಷಿ.

click me!