
ನವದೆಹಲಿ(ಜೂ.01): ಭಾರತದಲ್ಲಿ ವೈದ್ಯಕೀಯ ಸಲಕರಣೆ ಸಾಗಾಣೆ, ತುರ್ತು ಅಗತ್ಯ ಪೂರೈಕೆ ಅತೀ ದೊಡ್ಡ ಸವಾಲು. ಸಾರಿಗೆ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪೂರೈಕೆ ಮಾಡಲು ಅತೀ ಹೆಚ್ಚು ಸಮಯವೂ ತೆಗೆದುಕೊಳ್ಳುತ್ತದೆ. ಹೀಗಾಗಿ ಲಸಿಕೆ, ಅಂಗಾಂಗ, ರಕ್ತ ಸಾಗಾಣಿಕೆ ವಿಳಂಬವಾದಲ್ಲಿ ಹಾಳಾಗಲಿದೆ. ಹೀಗಾಗಿ ಈ ವಸ್ತುಗಳ ಸುರಕ್ಷಿತ ಸಾಗಾಣೆಗೆ IIT ರೋಪರ್ ಆ್ಯಂಬಿಟ್ಯಾಗ್ ಅನ್ನೋ ಹೊಸ ಸಾಧನ ಅಭಿವೃದ್ಧಿ ಪಡಿಸಿದೆ.
ತೀವ್ರ ಸಂಕಷ್ಟದಲ್ಲಿ ಭಾರತದ ಲಸಿಕೆ ಅವಲಂಬಿಸಿದ 91 ರಾಷ್ಟ್ರ; ವಿಶ್ವ ಆರೋಗ್ಯ ಸಂಸ್ಥೆ!.
ಐಐಟಿ-ರೋಪರ್ ಟೆಕ್ನಾಲಜಿ ಇನ್ನೋವೇಶನ್ ಹಬ್ - ಅಗ್ರಿಕಲ್ಚರ್ ಮತ್ತು ವಾಟರ್ ಟೆಕ್ನಾಲಜಿ ಡೆವಲಪ್‌ಮೆಂಟ್ ಹಬ್ (AWaDH)ಹಾಗೂ ಸಂಸ್ಥೆಯ ನಾಲ್ಕು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಈ ಸಾಧನವು ಪ್ರಸ್ತುತ ಸಂದರ್ಭದಲ್ಲಿ ಅತೀ ಅವಶ್ಯಕ ಹಾಗೂ ಪೂರೈಕೆಯಲ್ಲಿ ಯಾವುದೇ ಹಾನಿ ಸಂಭವಿಸದಂತೆ ನೋಡಿಕೊಳ್ಳಲಿದೆ.
ಅಂಬಿಟ್ಯಾಗ್ ಸಾಧನದಿಂದ ಲಸಿಕೆಗಳು, ಔಷಧಿಗಳು, ರಕ್ತದ ಮಾದರಿಗಳು, ಆಹಾರ ಮತ್ತು ಡೈರಿ ಉತ್ಪನ್ನಗಳು, ಮಾಂಸ ಉತ್ಪನ್ನಗಳು ಮತ್ತು ಪ್ರಾಣಿಗಳ ವೀರ್ಯ ಸಾಗಣೆಯ ಸಮಯದಲ್ಲಿ ತಾಪಮಾನದಿಂದ ಈ ವಸ್ತುಗಳ ಹಾಳಾಗಲಿದೆ. ಹೀಗಾಗಿ ಈ ತಾಪಮಾನದ ಮೇಲ್ವಿಚಾರಣೆ ಆ್ಯಂಬಿಟ್ಯಾಗ್ ನೋಡಿಕೊಳ್ಳಲಿದೆ.
ಲಸಿಕೆ ವಿತರಣೆ: ದ. ಭಾರತಕ್ಕೇ ಕರ್ನಾಟಕ ನಂ.1!
ಇದುವರೆಗೆ ಈ ರೀತಿಯ ಸಾಧನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ IIT ರೋಪರ್ ನೂತನ ಸಾಧನ ಇದೀಗ ಭಾರತದ ತುರ್ತು ಸಂದರ್ಭಕ್ಕೆ ಅತೀ ಅವಶ್ಯಕವಾಗಿದೆ. ಸಾಗಣಿಕೆ ವೇಳೆ ನಿಗದಿತ ಮಿತಿಯನ್ನು ತಾಪಮಾನ ಮೀರಿದರೆ ಈ ಆ್ಯಂಬಿಟ್ಯಾಗ್ ಎಚ್ಚರಿಕೆ ನೀಡಲಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ