ಎಲ್‌ಇಟಿಗೆ ಉಗ್ರರ ನೇಮಕ ಮಾಡುತ್ತಿದ್ದ ಶಂಕಿತ ಉಗ್ರ ಸೆರೆ

Published : May 25, 2022, 07:35 AM IST
ಎಲ್‌ಇಟಿಗೆ ಉಗ್ರರ ನೇಮಕ ಮಾಡುತ್ತಿದ್ದ ಶಂಕಿತ ಉಗ್ರ ಸೆರೆ

ಸಾರಾಂಶ

* ಲಷ್ಕರ್‌-ಎ-ತೊಯ್ಬಾಗೆ ಉಗ್ರರನ್ನು ನೇಮಕಾತಿ ಮಾಡುತ್ತಿದ್ದಾತನ ಬಂಧನ * 28 ವರ್ಷದ ಜುನೈದ್‌ ಮೊಹಮ್ಮದ್‌ ಎಂಬ ವ್ಯಕ್ತಿ ಅರೆಸ್ಟ್‌ * ಪಾಕ್‌ ಮೂಲಕ ಎಲ್‌ಎಟಿ ಉಗ್ರ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದ ಮೊಹಮ್ಮದ್‌

ಮುಂಬೈ(ಮೇ.25): ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಮಂಗಳವಾರ ಲಷ್ಕರ್‌-ಎ-ತೊಯ್ಬಾಗೆ ಉಗ್ರರನ್ನು ನೇಮಕಾತಿ ಮಾಡುತ್ತಿದ್ದ 28 ವರ್ಷದ ಜುನೈದ್‌ ಮೊಹಮ್ಮದ್‌ ಎಂಬ ವ್ಯಕ್ತಿಯನ್ನು ಪುಣೆಯಲ್ಲಿ ಬಂಧಿಸಿದ್ದಾರೆ.

‘ಮೊಹಮ್ಮದ್‌ ಪಾಕ್‌ ಮೂಲಕ ಎಲ್‌ಎಟಿ ಉಗ್ರ ಸಂಸ್ಥೆಯೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಕ್ರಿಯ ಸಂಪರ್ಕ ಹೊಂದಿದ್ದನು. ಈತನು ದೇಶದ ವಿವಿಧ ರಾಜ್ಯಗಳಿಂದ ಉಗ್ರಸಂಸ್ಥೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದನು. ಅಲ್ಲದೇ ಹೊಸದಾಗಿ ನೇಮಕ ಮಾಡಿಕೊಂಡ ಯುವಕರನ್ನು ಕಾಶ್ಮೀರಕ್ಕೆ ಕರೆದೊಯ್ದ ಅಲ್ಲಿ ಅವರಿಗೆ ಭಯೋತ್ಪಾದನೆಯ ತರಬೇತಿ ನೀಡಿ, ದೇಶದಲ್ಲಿ ಉಗ್ರ ಕೃತ್ಯ ನಡೆಸಲು ಯೋಜಿಸಿದ್ದನು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜೂ.3 ರವರೆಗೆ ಆರೋಪಿಯನ್ನು ಎಟಿಎಸ್‌ ವಶದಲ್ಲಿ ಇರುವಂತೆ ಕೋರ್ಚ್‌ ಆದೇಶಿಸಿದೆ.

 ಲಷ್ಕರ್‌ನ ಐವರು ಹೈಬ್ರಿಡ್‌ ಉಗ್ರರ ಬಂಧನ

ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಐವರು ಹೈಬ್ರಿಡ್‌ ಉಗ್ರರನ್ನು 2 ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸೋಮವಾರ ಬಂಧಿಸಲಾಗಿದೆ. ಕಳೆದ ತಿಂಗಳು ಬಾರಾಮುಲ್ಲಾದಲ್ಲಿ ನಡೆದ ಸರಪಂಚ್‌ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಇದರಲ್ಲಿ ಸೇರಿದ್ದಾರೆ. ಈ ಉಗ್ರರ ಬಂಧನ ಪೊಲೀಸ್‌ ಇಲಾಖೆಗೆ ಸಿಕ್ಕ ದೊಡ್ಡ ಜಯ ಎಂದು ಕಾಶ್ಮೀರ ಐಜಿಪಿ ಹೇಳಿದ್ದಾರೆ.

ಬಂಧಿತರಿಂದ 15 ಪಿಸ್ತೂಲುಗಳು, 30 ಬುಲೆಟ್‌ ಮ್ಯಾಗಜಿನ್‌ಗಳು ಸೇರಿದಂತೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಉಗ್ರರು ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಏಕೆಂದರೆ ಇವರು ಉಗ್ರ ಚಟುವಟಿಕೆಗಳಿದ್ದಾಗ ಅವುಗಳನ್ನು ಪೂರೈಸಿ ನಂತರ ಸಾಮಾನ್ಯ ಜೀವನಕ್ಕೆ ಮರಳುತ್ತಾರೆ. ಹೀಗಾಗಿ ಇವರಿಗೆ ಹೈಬ್ರೀಡ್‌ ಭಯೋತ್ಪಾದಕರು ಎನ್ನುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?