
ಗುಜರಾತ್(ಮೇ.24): ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಗುಜರಾತ್‌ನಲ್ಲಿ 5 ಬಾರಿ ಕಾಂಗ್ರೆಸ್ ಶಾಸಕ ಅನಿಲ್ ಜೋಶಿಯಾರ ಪುತ್ರ ಕೇವಲ್ ಜೋಶಿಯಾರಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇವಲ್ ಜೊಶಿಯಾರಾ ಬರೋಬ್ಬರಿ 1,300 ಬೆಂಬಲಿಗರ ಜೊತೆ ಬಿಜೆಪಿ ಸೇರಿಕೊಂಡಿದ್ದಾರೆ.
ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕ ಕೇವಲ್ ಜೋಶಿಯರಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಉತ್ತರ ಗುಜರಾತ್‌ನಿಂದ 5 ಬಾರಿ ಆಯ್ಕೆಯಾದ್ದ ಅನಿಲ್ ಜೋಶಿಯಾರಾ ಇದೇ ಮಾರ್ಚ್ ತಿಂಗಳಲ್ಲಿ ಕೋವಿಡ್‌ಗೆ ಬಲಿಯಾಗಿದ್ದರು. ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.
ಬೀದಿ ಫೋಕರಿಯೊಬ್ಬ ಮಕ್ಕಳ ಶಿಕ್ಷಣ ನಿರ್ಧರಿಸುವುದು ರಾಜ್ಯದ ದೌರ್ಭಾಗ್ಯವೆಂದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿದ್ದ ತಂದೆ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದರೆ ರಾಜಕೀಯ ಹಿನ್ನಲೆ, ಪರಿವಾರ ಕುಟುಂಬದಲ್ಲಿ ಇಲ್ಲದ ಕಾರಣ ತಂದೆಗೆ ಒಂದು ಬಾರಿಯೂ ಅವಕಾಶ ಸಿಗಲಿಲ್ಲ. ಪಕ್ಷದಲ್ಲಿ ಉತ್ತಮ ಸ್ಥಾನಮಾನವೂ ಸಿಗಲಿಲ್ಲ. ತಂದೆಯ ಸಾವಿನಿಂದ ತೆರವಾಗಿರುವ ಸ್ಥಾನವನ್ನು ತುಂಬಲು ನಾನು ಬಿಜೆಪಿ ಸೇರಿಕೊಂಡಿದ್ದೇನೆ ಎಂದು ಕೇವಲ್ ಜೋಶಿಯಾರಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಿಂದ ಪ್ರಭಾವಿತನಾಗಿದ್ದೇನೆ. ಸಾಮಾನ್ಯ ಕಾರ್ಯಕರ್ತನಾಗಿ, ಉತ್ತಮ ಕೆಲಸ ಮಾಡಿದರೆ ಅವಕಾಶ ಸಿಗಲಿದೆ ಅನ್ನೋದು ಮೋದಿಯಿಂದ ತಿಳಿದುಕೊಂಡಿದ್ದೇನೆ. ಬಿಜೆಪಿಯಲ್ಲಿ ಸ್ಥಾನ ಪಡೆಯಲು ಅರ್ಹತೆ ಇದ್ದರೆ ಸಾಕು, ಪರಿವಾರ, ರಾಜಕೀಯ ಹಿನ್ನಲೆ ಬೇಕಿಲ್ಲ ಎಂದು ಕೇವಲ್ ಹೇಳಿದ್ದಾರೆ.
ಹಿಮಾಚಲ, ಗುಜರಾತಲ್ಲಿ ಕಾಂಗ್ರೆಸ್ ಧೂಳಿಪಟ: ಪ್ರಶಾಂತ್ ಕಿಶೋರ್
ಬಿಜೆಪಿ ಆಡಳಿತದಲ್ಲಿವ ರಾಜ್ಯಗಳಾದ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ನಡೆಸಿದ ಚಿಂತನಾ ಶಿಬಿರದ ನಂತರವೂ ಪಕ್ಷ ಏನನ್ನು ಸಾಧಿಸಿಲ್ಲ ಎಂದು ಅವರು ಹೇಳಿದರು.
ಪರಿಷತ್ ಟಿಕೆಟ್ ಗಿಟ್ಟಿಸಿಕೊಂಡ ಗಟ್ಟಿಗಿತ್ತಿ ಹೇಮಲತಾ ನಾಯಕ ಯಾರು? ಹೈಕಮಾಂಡ್ ಗುರುತಿಸಿದ್ದೇಗೆ?
‘ರಾಜಸ್ಥಾನದ ಉದಯಪುರದಲ್ಲಿ ನಡೆದ ಚಿಂತನಾ ಶಿಬಿರ ಫಲಿತಾಂಶದ ಬಗ್ಗೆ ಹೇಳಲು ನನ್ನನ್ನು ಪದೇ ಪದೇ ಕೇಳಲಾಗಿದೆ. ನನ್ನ ಪ್ರಕಾರ ಪಕ್ಷದ ನಾಯಕತ್ವ ಬದಲಾವಣೆಗೆ ಮತ್ತಷ್ಟುಸಮಯ ನೀಡುವುದನ್ನು ಬಿಟ್ಟರೆ ಈ ಚಿಂತನಾ ಶಿಬಿರದಲ್ಲಿ ಕಾಂಗ್ರೆಸ್ ಮತ್ತೇನನ್ನು ಸಾಧಿಸಿಲ್ಲ. ಮುಂದಿನ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಸೋಲುವವರೆಗೆ ಈಗಿನ ನಾಯಕತ್ವಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರುವ ಆಫರ್‌ನ್ನು ಪ್ರಶಾಂತ್ ಕಿಶೋರ್ ತಿರಸ್ಕರಿಸಿದ್ದರು.
ಕಾಂಗ್ರೆಸ್ ಚಿಂತನ ಶಿಬಿರದ ನಿರ್ಣಯ ಗುಜರಾತಲ್ಲಿ ಜಾರಿ
ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ ನಡೆದ ‘ಚಿಂತನ ಶಿಬಿರ’ದಲ್ಲಿ ಕೈಗೊಂಡ ನಿರ್ಣಯಗಳು ಇದೇ ವರ್ಷಾಂತ್ಯಕ್ಕೆ ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಜಾರಿಗೆ ಬರಲಿವೆ. ಈ ಮೂಲಕ ಚಿಂತನ ಶಿಬಿರದ ಚಿಂತನೆಗಳು ಕಾರ‍್ಯರೂಪಕ್ಕೆ ಬರಲಿರುವ ಮೊದಲ ರಾಜ್ಯ ಗುಜರಾತ್ ಎನ್ನಿಸಿಕೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.ಶಿಬಿರದಲ್ಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್, 50 ವರ್ಷದ ಕೆಳಗಿನ ವ್ಯಕ್ತಿಗಳಿಗೆ ಶೇ.50ರಷ್ಟುಟಿಕೆಟ್- ಮುಂತಾದ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ