'ನೀನೇ ಹಿಂಗಿದ್ದೀಯಾ ಅಂದ್ಮೆಲೇ, ನಿನ್ನ ಮಗಳು ಹೇಗಿರಬೇಡ..10 ಸಾವಿರ ಕೊಡ್ತೆನೆ ಅವಳ ಕಳಿಸು' ASI ಕಾಮದಾಸೆಗೆ ಬೆಚ್ಚಿಬಿದ್ದ ಮಹಿಳೆ

Published : Apr 01, 2026, 10:10 PM IST
Akola ASI

ಸಾರಾಂಶ

ಮಹಾರಾಷ್ಟ್ರದ ಅಕೋಲಾದಲ್ಲಿ, ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಜೇಶ್ ಜಾಧವ್ ಅವರು ವಶದಲ್ಲಿದ್ದ ಮಹಿಳೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಘಟನೆಯ ನಂತರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. 

ಅಕೋಲಾ (ಮಹಾರಾಷ್ಟ್ರ): ರಕ್ಷಕನೇ ಭಕ್ಷಕನಾದ ಎಂಬ ಮಾತಿಗೆ ಅನ್ವರ್ಥವೆಂಬಂತೆ, ಮಹಾರಾಷ್ಟ್ರದ ಅಕೋಲಾದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರೊಬ್ಬರು (ASI) ವಶದಲ್ಲಿದ್ದ ಮಹಿಳೆಯ ಬಳಿ ಆಕೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ತನ್ನ ಮನೆಗೆ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಸದ್ಯ ಅವರು ತಲೆಮರೆಸಿಕೊಂಡಿದ್ದಾರೆ.

ಆರೋಪಿ ಪೊಲೀಸ್ ಅಧಿಕಾರಿಯನ್ನು ರಾಜೇಶ್ ಜಾಧವ್ ಎಂದು ಗುರುತಿಸಲಾಗಿದೆ. 80 ಲಕ್ಷ ರೂಪಾಯಿ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಒಬ್ಬ ಮಹಿಳೆಯನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ರಾಜೇಶ್ ಜಾಧವ್, ಆ ಮಹಿಳೆಯ ಬಳಿ ಅಸಭ್ಯವಾಗಿ ಮಾತನಾಡಿದ್ದಾರೆ.

"ನೀನು ನೋಡಲು ತುಂಬಾ ಸುಂದರವಾಗಿದ್ದೀಯಾ, ನಿನ್ನ ಮಗಳು ಕೂಡ ಸುಂದರವಾಗಿಯೇ ಇರಬೇಕು. ಆಕೆಯನ್ನು ನನ್ನ ಮನೆಗೆ ಕಳುಹಿಸಿಕೊಡು, ನಾನು ನಿನಗೆ 10,000 ರೂಪಾಯಿ ಹಣ ನೀಡುತ್ತೇನೆ" ಎಂದು ಹಣದ ಆಮಿಷವೊಡ್ಡಿ ಲೈಂಗಿಕ ಸುಖಕ್ಕಾಗಿ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಎಎಸ್ಐ ಮಾತಿನಿಂದ ಬೆಚ್ಚಿಬಿದ್ದ ಮಹಿಳೆ, ತಕ್ಷಣವೇ ಪೊಲೀಸ್ ಠಾಣೆಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ದೂರು ನೀಡಿದ್ದಾರೆ. ದೂರಿನ ಗಂಭೀರತೆಯನ್ನು ಅರಿತ ಅಕೋಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರ್ಚಿತ್ ಚಂದಕ್ ಅವರು ರಾಜೇಶ್ ಜಾಧವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ.

ತಲೆಮರೆಸಿಕೊಂಡ ಆರೋಪಿ

ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ರಾಜೇಶ್ ಜಾಧವ್ ಪರಾರಿಯಾಗಿದ್ದಾರೆ. ಅವರನ್ನು ಪತ್ತೆಹಚ್ಚಿ ಬಂಧಿಸಲು ಮೂರು ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ತನಿಖೆಯ ನೇತೃತ್ವ ವಹಿಸಿರುವ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ಜುಮ್ಲೆ ತಿಳಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಡಾ. ಆಶಾ ಮಿರ್ಗೆ ಅವರ ಪ್ರಕಾರ, ಈ ಅಧಿಕಾರಿಯ ವಿರುದ್ಧ ಈ ಹಿಂದೆಯೂ ಇಂತಹ ದೂರುಗಳು ಕೇಳಿಬಂದಿದ್ದವು. ಸುಮಾರು 10 ವರ್ಷಗಳ ಹಿಂದೆ ಕೌಟುಂಬಿಕ ಕಲಹ ಮತ್ತು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಜೊತೆ ಅಸಭ್ಯ ವರ್ತನೆ ತೋರಿದ ಆರೋಪಗಳು ಇವರ ಮೇಲಿತ್ತು ಎನ್ನಲಾಗಿದೆ. "ರಕ್ಷಣೆ ನೀಡಬೇಕಾದವರೇ ಇಂತಹ ಕ್ರೂರಿಗಳಾದಾಗ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಅಕೋಲಾ ಪೊಲೀಸರು ತೆಗೆದುಕೊಂಡಿರುವ ತ್ವರಿತ ಕ್ರಮ ಶ್ಲಾಘನೀಯ" ಎಂದು ಅವರು ಹೇಳಿದ್ದಾರೆ. ಸದ್ಯ ಇಡೀ ರಾಜ್ಯದ ಪೊಲೀಸ್ ಇಲಾಖೆಗೆ ಮುಜುಗರ ತಂದಿರುವ ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹಾರ ಹಾಕಲು ಮದುಮಗಳನ್ನು ಮೇಲೆತ್ತಿದವನ ಕೆನ್ನೆಗೆ ಬಾರಿಸಿದ ವಧು; ಅವನೇಕೆ ಪಕ್ಕದಲ್ಲಿದ್ದವಳಿಗೆ ಹೊಡೆದ? ವಿಡಿಯೋ ವೈರಲ್!
ಆಹಾರ ಕದ್ದಿದ್ದಕ್ಕಾಗಿ ಪುಟ್ಟ ಹುಡುಗನನ್ನು 5 ಗಂಟೆಗಳ ಕಾಲ ಡೀಪ್‌ ಫ್ರೀಜರ್‌ನಲ್ಲಿ ಲಾಕ್‌ ಮಾಡಿದ ಅಂಗಡಿ ಮಾಲೀಕ!