ಮಹಾಕುಂಭ ಮೇಳದಲ್ಲಿ ವೈರಲ್ ಆದ ಸುಂದರಿ ಮೊನಾಲಿಸಾ ಸದ್ಯದ ಪಾಡು ಯಾರಿಗೂ ಬೇಡ!

Published : Jan 19, 2025, 08:52 PM IST
ಮಹಾಕುಂಭ ಮೇಳದಲ್ಲಿ ವೈರಲ್ ಆದ ಸುಂದರಿ ಮೊನಾಲಿಸಾ ಸದ್ಯದ ಪಾಡು ಯಾರಿಗೂ ಬೇಡ!

ಸಾರಾಂಶ

ಮಹಾಕುಂಭ ಮೇಳದಲ್ಲಿ ಮಣಿ, ಸರ, ಮಾಲೆ ಮಾರಾಟ ಮಾಡುತ್ತಿರುವ ಸುಂದರಿ ಮೊನಾಲಿಸಾ ಭಾರಿ ವೈರಲ್ ಆಗಿದ್ದಾಳೆ. ಈಕೆಯ ಕಣ್ಣು, ಸೌಂದರ್ಯಕ್ಕೆ ಜನ ಮನಸೋತಿದ್ದಾರೆ. ಆದರೆ ದೇಶಾದ್ಯಂತ ಜನಪ್ರಿಯವಾಗಿರುವ ವೈರಲ್ ಸುಂದರಿಯ ಈಗಿನ ಸ್ಥಿತಿ ಮಾತ್ರ ಯಾರಿಗೂ ಬೇಡ.

ಪ್ರಯಾಗರಾಜ್(ಜ.19) ಮಹಾಕುಂಭ ಮೇಳದಲ್ಲಿ ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಆದ ಸುಂದರಿ ಮೊನಾಲಿಸಾ ಭಾರತದ ಕ್ರಶ್ ಆಗಿದ್ದಾಳೆ. ಮಹಾಕುಂಭ ಮೇಳದಲ್ಲಿ ಮಣಿ, ಸರ ಮಾರಾಟ ಮಾಡುತ್ತಿರುವ ಮೊನಾಲಿಸಾ ಕುರಿತು ವ್ಲಾಗರ್ ಮಾಡಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಮೊನಾಲಿಸಾ ಸೌಂದರ್ಯ,ಕಣ್ಣಿಗೆ ಜನ ಮಾರು ಹೋಗಿದ್ದರು. ಮುಗ್ದ ನಗು, ಆಕರ್ಷಣೆ ತುಂಬಿದ ಮುಖ, ಮಿಂಚಿನ ಮಾತು ಎಲ್ಲರನ್ನುಮೋಡಿ ಮಾಡಿದೆ. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದಾಳೆ. ಆದರೆ ಭಾರಿ ಜನಪ್ರಿಯತೆ ಪಡೆದ ಮೊನಾಲಿಸಾ ಸದ್ಯದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಎಲ್ಲಿಗೂ ಹೋಗುವಂತಿಲ್ಲ. ಮನೆಯಲ್ಲಿ ಇರುವಂತಿಲ್ಲ. ಅತ್ತ ಪೋಷಕರು, ಸಹೋದರಿಯರಿಗೂ ಕಾಟ ತಾಳಲಾಗುತ್ತಿಲ್ಲ.  ಮೊನಾಲಿಸಾ ಸದ್ಯದ ಪರಿಸ್ಥಿತಿಯ ವಿಡಿಯೋ ಇದೀಗ ನೈಜ ಚಿತ್ರಣ ಬಿಚ್ಚಿಡುತ್ತಿದೆ.

ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ ಮಹಾಕುಂಭ ಮೇಳದ ತ್ರಿವೇಣಿ ಸಂಗಮದ ಬಳಿ ಮಣಿ, ಸರ , ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಭೋಸ್ಲೆ ಇಡೀ ಕುಟುಂಬ ಇದೇ ವ್ಯಾಪಾರದಲ್ಲಿ ತೊಡಗಿದೆ. ಅತೀ ದೊಡ್ಡ ಜಾತ್ರೆಗಳು ಎಲ್ಲೇ ಇದ್ದರೂ ತೆರಳಿ ವ್ಯಾಪಾರ ಮಾಡುತ್ತಾರೆ. ಮೈಸೂರಿನ ದಸರಾ ಹಬ್ಬಕ್ಕೂ ಆಗಮಿಸಿ ವ್ಯಾಪಾರ ಮಾಡಿದ್ದಾರೆ. 16ರ ಹರೆಯದ ಮೊನಾಲಿಸಾ ಇದೀಗ ಸೆಲೆಬ್ರೆಟಿಯಾಗಿದ್ದಾಳೆ. ಇದು ಮೊನಾಲಿಸಾ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಮುಳುವಾಗಿದೆ.

ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾಗೆ ಉಂಟು ಮೈಸೂರಿನ ನಂಟು!

ವಿಡಿಯೋ ವೈರಲ್ ಬೆನ್ನಲ್ಲೇ ಇದೀಗ ಮಹಾಕುಂಭ ಮೇಳಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಮಂದಿ ಮೊನಾಲಿಸಾ ಭೇಟಿಯಾಗಿ ಫೋಟೋ ಕ್ಲಿಕ್ಕಿಸಲು ಬಯಸುತ್ತಿದ್ದಾರೆ. ಮೊನಾಲಿಸಾ ಎಲ್ಲಿದ್ದರೂ ತೆರಳಿ ಫೋಟೋ ಕ್ಲಿಕ್ಕಿಸುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದಾರೆ. ಇತ್ತ ಯೂಟ್ಯೂಬರ್, ವ್ಲಾಗರ್, ಸುದ್ದಿ ವಾಹಿನಿ, ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಲವರು ಇದೀಗ ಮೊನಾಲಿಸಾಳ ಸಂದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆ ಕವರ್ ಮಾಡಿ ಗುರುತು ಸಿಗದಂತೆ ಸಾಗಿದರೂ ಮೊನಾಲಿಸಾಳನ್ನು ಜನರು ಬಿಡುತ್ತಿಲ್ಲ. ಈ ಕುರಿತು ವಿಡಿಯೋ ವೈರಲ್ ಆಗಿದೆ.

 

 

ಮೊನಾಲಿಸಾಳಿಗೆ ಸಂಕಷ್ಟ ಎದುರಾಗುತ್ತಿದ್ದಂತೆ ಪೋಷಕರು ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಮನೆಯಿಂದ ಹೊರಬರದಂತೆ ಸೂಚಿಸಿದ್ದರು. ಆದರೆ ಸಾವಿರಾರು ಮಂದಿ ಮನೆ ಹುಡುಕಿಕೊಂಡು ತೆರಳುತ್ತಿದ್ದಾರೆ. ಮನೆಗೆ ತೆರಳಿ ಕಾಟ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ. 

ಜನಪ್ರಿಯಳಾಗಿರುವ ಕಾರಣ ಮೊನಾಲಿಸಾ ಹಿಂದೆ ಸಾವಿರಾರು ಮಂದಿ ಫೋಟೋಗಾಗಿ ಹಿಂದೆ ಬಿದ್ದಿದ್ದಾರೆ. ಮೊನಾಲಿಸಾಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಅಲ್ಲ ಕೆಲವರು ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮೊನಾಲಿಸಾ ಪೋಷಕರು ಆಕೆಯನ್ನು ಇಂದೋರ್‌ಗೆ ಕಳುಹಿಸಿದ್ದಾರೆ. ಸದ್ಯ ಮಹಾಕುಂಭಮೇಳದಲ್ಲಿಇದ್ದರೆ ಅಪಾಯ ಸಾಧ್ಯತೆ ಹೆಚ್ಚು ಅನ್ನೋ ಕಾರಣಕ್ಕೆ ತವರಿಗೆ ಕಳುಹಿಸಿದ್ದಾರೆ ಎಂದು ಮೊನಾಲಿಸಾ ತಂಗಿ ವಿದ್ಯಾ ಭೋಸ್ಲೆ ಹೇಳಿದ್ದಾರೆ. ಮೊನಾಲಿಸಾ ಹಾಗೂ ಆಕೆಯ ಮತ್ತಿಬ್ಬರು ಮರಳಿದ್ದಾರೆ. ಸದ್ಯ ಮೊನಾಲಿಸಾ ಮಹಾಕುಂಭ ಮೇಳದಲ್ಲಿಲ್ಲ. 

ಮಹಾಕುಂಭಮೇಳದಲ್ಲಿ ಸಖತ್ ವೈರಲ್ ಆಗಿರುವ ಈ ಕೃಷ್ಣ ಸುಂದರಿ ಯಾರು?


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಸೆಂಬರ್‌ 31ರ ಒಳಗೆ ಈ ಇಂಪಾರ್ಟೆಂಟ್‌ ಕೆಲಸ ಪೂರ್ತಿ ಮಾಡಿ, ಮತ್ತೆ ಸರ್ಕಾರ ಈ ಅವಕಾಶ ನೀಡಲ್ಲ..!
ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ