Praveen Kumar Sobti Passed Away: 'ಮಹಾಭಾರತ'ದ ಭೀಮ, ಪ್ರವೀಣ್ ಕುಮಾರ್ ಸೋಬ್ತಿ ವಿಧಿವಶ!

Published : Feb 08, 2022, 10:29 AM ISTUpdated : Feb 08, 2022, 12:43 PM IST
Praveen Kumar Sobti Passed Away: 'ಮಹಾಭಾರತ'ದ ಭೀಮ, ಪ್ರವೀಣ್ ಕುಮಾರ್ ಸೋಬ್ತಿ ವಿಧಿವಶ!

ಸಾರಾಂಶ

* ಭೀಮನ ಪಾತ್ರ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಸೋಬ್ತಿ ವಿಧಿವಶ * ಪ್ರವೀಣ್ ಕುಮಾರ್ ಅನೇಕ ಬಾಲಿವುಡ್ ಚಿತ್ರಗಳಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ * ಬಿಎಸ್‌ಎಫ್‌ನಲ್ಲಿ ಕೆಲಸ ಸಿಕ್ಕಿತ್ತು

ನವದೆಹಲಿ(ಫೆ.08): ಬಾಲಿವುಡ್‌ಗೆ ಮತ್ತೊಂದು ಆಘಾತಕಾರಿ ಸುದ್ದಿ ಲಭಿಸಿದೆ. ಹೌದು ಲತಾ ಮಂಗೇಶ್ಕರ್ ನಂತರ ಇದೀಗ ಮಹಾಭಾರತ ಕಿರುತೆರೆ ಧಾರಾವಾಹಿಯಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಸೋಬ್ತಿ (Praveen Kumar Sobti ) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯ ಮತ್ತು ಆರ್ಥಿಕ ಅಡಚಣೆಗಳಿಂದ ಹೋರಾಡುತ್ತಿದ್ದ ಅವರು ತಮ್ಮ ದೊಡ್ಡ ನಿಲುವಿಗೆ ಹೆಸರುವಾಸಿಯಾಗಿದ್ದರು.

ಪ್ರವೀಣ್ ಕುಮಾರ್ ಅನೇಕ ಬಾಲಿವುಡ್ (Bollywood) ಚಿತ್ರಗಳಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಆರೂವರೆ ಅಡಿಯ ಪ್ರವೀಣ್ ಕುಮಾರ್ 1960 ಮತ್ತು 1970ರಲ್ಲಿ ಭಾರತದ ಸ್ಟಾರ್ ಅಥ್ಲೀಟ್ ಆಗಿದ್ದರು. ಅವರ ಎತ್ತರದಿಂದಾಗಿ, ಅವರು ವರ್ಷಗಳ ಕಾಲ ಹ್ಯಾಮರ್ ಥ್ರೋ ಮತ್ತು ಡಿಸ್ಕಸ್ ಥ್ರೋ ಆಟಗಾರರಾಗಿದ್ದರು. 1966 ಮತ್ತು 1970ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ (Asian Games) ಡಿಸ್ಕಸ್ ಎಸೆತದಲ್ಲಿ ಪ್ರವೀಣ್ ಚಿನ್ನದ ಪದಕ (Gold Medal) ಗೆದ್ದಿದ್ದರು. ಪ್ರವೀಣ್ 1966ರಲ್ಲಿಯೇ ಹ್ಯಾಮರ್ ಥ್ರೋನಲ್ಲಿ ಕಂಚಿನ ಪದಕ ಪಡೆದಿದ್ದರು. 1974ರಲ್ಲಿ ಟೆಹ್ರಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಡಿಸ್ಕಸ್ ಎಸೆತದಲ್ಲಿ ಪ್ರವೀಣ್ ಬೆಳ್ಳಿ ಪದಕ ಗೆದ್ದಿದ್ದರು.

ಪರ್ವತದ ಮೇಲಿಂದ ಬಿದ್ದು ಸಾವನ್ನಪ್ಪಿದಳೇ ದ್ರೌಪದಿ? ಪಾಂಚಾಲಿಯ ಕುರಿತ Amazing Facts

ಬಿಎಸ್‌ಎಫ್‌ನಲ್ಲಿ ಕೆಲಸ ಸಿಕ್ಕಿತ್ತು

ಪ್ರವೀಣ್‌ ಕುಮಾರ್‌ಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ಡೆಪ್ಯುಟಿ ಕಮಾಂಡೆಂಟ್‌ ಹುದ್ದೆ ಸಿಕ್ಕಿದ್ದು ಆಟದಿಂದಲೇ ಆದರೆ ವಿಧಿಯಲ್ಲಿ ಬೇರೇನೋ ಬರೆದಿತ್ತು. 1986 ರಲ್ಲಿ ಒಂದು ದಿನ, ಒಬ್ಬ ಪಂಜಾಬಿ ಸ್ನೇಹಿತ ಪ್ರವೀಣ್ ಬಳಿಗೆ ಬಂದು ಬಿಆರ್ ಚೋಪ್ರಾ ಮಹಾಭಾರತವನ್ನು ನಿರ್ಮಿಸುತ್ತಿದ್ದಾರೆ ಹಾಗೂ ಅದರಲ್ಲಿ ಭೀಮನ ಪಾತ್ರವನ್ನು ಮಾಡಲು ಶಕ್ತಿಶಾಲಿ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ. ನೀವು ಒಮ್ಮೆ ಬಂದು ಭೇಟಿಯಾಗಬೇಕೆಂದು ಅವರು ಬಯಸುತ್ತಾರೆ  ಎಂದು ಹೇಳಿದರು. ಇದರ ನಂತರ, 1988 ರವರೆಗೆ ಸುಮಾರು 30 ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ಪ್ರವೀಣ್ ಕುಮಾರ್ ಬಿಆರ್ ಚೋಪ್ರಾ ಅವರನ್ನು ಭೇಟಿಯಾದರು. ನಂತರ ಪ್ರವೀಣ್ ಕುಮಾರ್ ಸೋಬ್ತಿ ಮಹಾಭಾರತದಲ್ಲಿ ಭೀಮನ ಪಾತ್ರವನ್ನು ನಿರ್ವಹಿಸುತ್ತಾರೆಂದು ನಿರ್ಧರಿಸಲಾಯಿತು. ಈ ಪಾತ್ರ ಎಷ್ಟು ಜನಪ್ರಿಯವಾಯಿತು ಎಂದರೆ, ಬಸ್ಸು, ರೈಲು, ಹಡಗಿನಲ್ಲಿ ಪ್ರಯಾಣಿಸುವಾಗ ಅನೇಕ ಬಾರಿ ಜನರು ತನ್ನನ್ನು ಸುತ್ತುವರಿಯುತ್ತಿದ್ದರು ಎಂದು ಪ್ರವೀಣ್ ಅವರೇ ಹಲವು ಸಂದರ್ಶನಗಳಲ್ಲಿ ಹೇಳಿದ್ದರು.

ಪ್ರವೀಣ್ ಕುಮಾರ್ 1981 ರ ರಕ್ಷಾ ಚಿತ್ರದೊಂದಿಗೆ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಅವರ ಎರಡನೇ ಚಿತ್ರ ಮೇರಿ ಆವಾಜ್ ಸುನೋ ಕೂಡ ಹೊರಬಂದಿತು. ಈ ಎರಡೂ ಚಿತ್ರಗಳಲ್ಲಿ ಜಿತೇಂದ್ರ ಅವರ ಜೊತೆಗಿದ್ದರು. ಅವರು ಅಮಿತಾಬ್ ಬಚ್ಚನ್ ಅವರ ಸೂಪರ್ಹಿಟ್ ಚಿತ್ರ 'ಶಾಹೆನ್ಶಾ' ನಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಚಿತ್ರದಲ್ಲಿ ಮುಖ್ತಾರ್ ಸಿಂಗ್ ಪಾತ್ರದಲ್ಲಿದ್ದರು. ಪ್ರವೀಣ್ ಕೂಡ ಚಾಚಾ ಚೌಧರಿ ಧಾರಾವಾಹಿಯಲ್ಲಿ ಸಾಬು ಪಾತ್ರವನ್ನು ನಿರ್ವಹಿಸಿದ್ದಾರೆ.

Budget Speechನಲ್ಲಿ ಸೀತಾರಾಮನ್ ಹೇಳಿದ ಮಹಾಭಾರತ ಕಾವ್ಯದ ಅರ್ಥವೇನು?

ಚಲನಚಿತ್ರಗಳಲ್ಲಿ ವಿಲನ್ ಪಾತ್ರ

ಪ್ರವೀಣ್‌ಕುಮಾರ್ ಚಿತ್ರಗಳಲ್ಲಿ, ಅವರು ಖಳನಾಯಕ ಮತ್ತು ಅಂಗರಕ್ಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು 1987 ರಲ್ಲಿ ಅಮಿತಾಭ್ ಬಚ್ಚನ್ ಅವರ ಚಿತ್ರ ಶಾಹೆನ್ಶಾದಲ್ಲಿ ಕಾಣಿಸಿಕೊಂಡರು. ಪ್ರವೀಣ್ ಕುಮಾರ್ 2013 ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಮತ್ತು ವಜೀರ್‌ಪುರದಿಂದ ದೆಹಲಿ ವಿಧಾನಸಭೆಗೆ ಚುನಾವಣೆಗೆ ಸ್ಪರ್ಧಿಸಿದರು ಆದರೆ ಸೋತರು. ಇದಾದ ಬಳಿಕ 2014ರಲ್ಲಿ ಬಿಜೆಪಿ ಸೇರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್