ರೈಲು ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಬ್ರೆಡ್ ಪಕೋಡಾ ಜೊತೆ ಕಳಪೆ ಗುಣಮಟ್ಟದ ಟೊಮ್ಯಾಟೋ ಸಾಸ್ ನೀಡುತ್ತಿದ್ದ ರೈಲು ವೆಂಡರ್‌ಗೆ ಬರೋಬ್ಬರಿ 10 ವರ್ಷದ ಬಳಿಕ ಶಿಕ್ಷೆ ಪ್ರಕಟವಾಗಿದೆ.
ಚಂಡೀಘಡ(ಸೆ.15) ರೈಲಿನಲ್ಲಿ ನೀಡುವ ಆಹಾರ ಗುಣಮಟ್ಟದ ಬಗ್ಗೆ ಪದೇ ಪದೇ ದೂರುಗಳು ದಾಖಲಾಗುತ್ತಲೇ ಇರುತ್ತದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲೂ ಕಳಪೆ ಆಹಾರ ಕುರಿತು ಭಾರಿ ಆಕ್ರೋಶಗಳು ವ್ಯಕ್ತವಾಗಿತ್ತು. ಆದರೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಬಹುತೇಕ ಸಮಯದಲ್ಲಿ ತಿಳಿಯುದಿಲ್ಲ. ಇದೀಗ 10 ವರ್ಷಗಳ ಹಿಂದೆ ಕಳಪೆ ಗುಣಮುಟ್ಟದ ಟೊಮ್ಯಾಟೋ ಸಾಸ್ ನೀಡಿದ್ದ ಚಂಡೀಘಡದ ರೈಲು ವೆಂಡರ್‌ಗೆ ಇದೀಗ ಶಿಕ್ಷೆ ಪ್ರಕಟವಾಗಿದೆ. ಬ್ರೆಡ್ ಪಕೋಡಾ ಜೊತೆ ನೀಡುತ್ತಿದ್ದ ಟೊಮ್ಯಾಟೋ ಸಾಸ್ ತಿನ್ನಲು ಯೋಗ್ಯವಾಗಿಲ್ಲ ಅನ್ನೋದು ಸಾಬೀತಾದ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಚಂಡೀಘಡ ರೈಲು ನಿಲ್ದಾಣದ ಕ್ಲಾಸಿಕ್ ಕ್ಯಾಟರ್ಸ್ ವೆಂಡರ್ ಸುಶೀಲ್ ಕುಮಾರ್ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಲಯ ತೀರ್ಪು ಪ್ರಕಟಿಸಿದೆ. ಸುಶೀಲ್ ಕುಮಾರ್ ಕಳಪೆ ಗುಣಟ್ಟದ ಸಾಸ್ ನೀಡಿರುವುದು ಸಾಬೀತಾಗಿದೆ. ಹೀಗಾಗಿ 30,000 ರೂಪಾಯಿ ದಂಡ ಕಟ್ಟುವಂತೆ ಕೋರ್ಟ್ ಆದೇಶಿಸಿದೆ. ಕಳೆದ 10 ವರ್ಷದಿಂದ ಕೋರ್ಟ್‌ಗೆ ಅಲೆದು ದುಪ್ಪಟ್ಟು ಖರ್ಚು ಮಾಡಿರುವ ಸುಶೀಲ್ ಕುಮಾರ್ ಇದೀಗ ನಿಟ್ಟುಸಿರು ಬಿಟ್ಟಿದ್ದಾನೆ
undefined
.ರೈಲು ಪ್ರಯಾಣದಲ್ಲಿ ಇನ್ನು ಊಟ-ತಿಂಡಿ ತಲೆ ಬಿಸಿ ಇಲ್ಲ; ಕುಳಿತಲ್ಲಿಗೆ ಜೊಮ್ಯಾಟೋ ಡೆಲಿವರಿ!
2014ರಲ್ಲಿ ಚಂಡೀಘಡ ರೈಲು ನಿಲ್ದಾಣ ಪ್ಲಾಟ್‍ಫಾರ್ಮ್ 2ರಲ್ಲಿ ಸುಶೀಲ್ ಕುಮಾರ್ ಬ್ರೆಡ್ ಪಕೋಡಾ ಜೊತೆಗೆ ಟಮ್ಯಾಟೋ ಸಾಸ್ ಮಾರಾಟ ಮಾಡುತ್ತಿದ್ದ. ರೈಲು ಬಂದಾಗ, ಹೊರಡುವಾಗ ರೈಲಿನ ಬೋಗಿಗೆ ತೆರಳಿ ಬ್ರೆಡ್ ಪಕೋಡಾ ಇದರ ಜೊತೆಗೆ ಸಾಸ್ ಮಾರಾಟ ಮಾಡುತ್ತಿದ್ದ. ಚಂಡೀಘಡ ಫುಡ್ ಸೇಫ್ಟಿ ಅಧಿಕಾರಿ ತಪಾಸಣೆ ವೇಳೆ ಸುಶೀಲ್ ಕುಮಾರ್ ಟೋಮ್ಯಾಟೋ ಸಾಸ್ ತೀರ ಕಳಪೆ ಗುಣಮಟ್ಟದ್ದಾಗಿದೆ ಅನ್ನೋದು ಗೊತ್ತಾಗಿದೆ. ಇದಕ್ಕೂ ಮೊದಲು ಹಲವು ದೂರುಗಳು ಬಂದಿತ್ತು.
5 ಲೀಟರ್ ಪ್ಲಾಸ್ಟಿಕ್ ಡಬ್ಬದಲ್ಲಿ ಶೇಖರಿಸಿಟ್ಟಿದ್ದ ಟೊಮ್ಯಾಟೋ ಸಾಸ್‌ಗೆ ಯಾವುದೇ ಲೇಬಲ್ ಇರಲಿಲ್ಲ. ಈ ಟೊಮ್ಯಾಟೋ ಸಾಸ್ ಖರೀದಿಸಿದ್ದತ್ತೆ ಬಿಲ್ಲಿಂಗ್ ಕೂಡ ಇರಲಿಲ್ಲ. ಈ ಉತ್ಪನ್ನ ಎಲ್ಲಿ ತಯಾರಾಗುತ್ತಿದೆ ಅನ್ನೋ ಯಾವದೇ ಮಾಹಿತಿ ಈ ಡಬ್ಬದಲ್ಲಿ ಇರಲಿಲ್ಲ. ಈ ಕುರಿತು ಸುಶೀಲ್ ಕುಮಾರ್, ಮಾರುಕಟ್ಟೆಯಿಂದ ಖರೀದಿಸಿರುವುದಾಗಿ ಹೇಳಿದ್ದರು.
ಸಾಸ್ ಮಾದರಿಗಳನ್ನು ಸಂಗ್ರಹಿಸಿದ ಅಧಿಕಾರಿಗಳು ಪರಿಶೀಲನೆಗೆ ಲ್ಯಾಬ್‌ಗೆ ಕಳುಹಿಸಿದ್ದಾರೆ. ಆಗಸ್ಟ್ 7, 2014ರಲ್ಲಿ ಈ ಸಾಸ್ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಇದರ ವರದಿ ಆಗಸ್ಟ್ 19, 2024ರಲ್ಲಿ ಬಂದಿದೆ. ಈ ಸಾಸ್ ಬಳಕೆಗೆ ಯೋಗ್ಯವಲ್ಲ ಎಂದು ವರದಿ ಬಂದಿದೆ. ಹೀಗಾಗಿ ಕಳೆದ 10 ವರ್ಷದಿಂದ ನ್ಯಾಯಲಯದಲ್ಲಿದ್ದ ಈ ಪ್ರಕರಣದ ತೀರ್ಪು ಇದೀಗ ಹೊರಬಿದ್ದಿದೆ. ಯೋಗ್ಯವಲ್ಲ, ರಾಸಾಯನಿಕ ಹಾಗೂ ಕೆಲ ವಿಷಕಾರಕ ವಸ್ತುಗಳ ಬಳಸಿ ತಯಾರಿಸುತ್ತಿದ್ದ ಈ ಸಾಸ್ ಮನುಷ್ಯನಿಗೆ ಅತ್ಯಂತ ಅಪಯಾಕಾರಿ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಸುಶೀಲ್ ಕುಮಾರ್‌ಗೆ 30,000ರೂಪಾಯಿ ದಂಡ ಕಟ್ಟುವಂತೆ ಆದೇಶ ನೀಡಿದೆ.
ಚೆನ್ನೈ ಬೀದಿಯಲ್ಲಿ ಚಿಕನ್ ಕಬಾಬ್ ಮಾರುತ್ತಿರುವ ಪಿಹೆಚ್‌ಡಿ ಸ್ಕಾಲರ್ ಪತ್ತೆ ಹಚ್ಚಿದ ಅಮೆರಿಕ ವ್ಲೋಗರ್!