ವೇಶ್ಯಾವಾಟಿಕೆಗೆ ಭದ್ರತೆ ಕೋರಿ ವಕೀಲರ ಅರ್ಜಿ, ಮದ್ರಾಸ್‌ ಹೈಕೋರ್ಟ್‌ ಶಾಕ್‌!

By Santosh Naik  |  First Published Jul 25, 2024, 9:25 PM IST

ಅರ್ಜಿಯಿಂದ ಕೆರಳಿದ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು 'ಪ್ರತಿಷ್ಠಿತ' ಕಾನೂನು ಕಾಲೇಜುಗಳ ಪದವೀಧರರನ್ನು ಮಾತ್ರ ವಕೀಲರಾಗಿ ನೋಂದಾಯಿಸಿಕೊಳ್ಳುವಂತೆ ಬಾರ್ ಕೌನ್ಸಿಲ್‌ಗೆ ತಿಳಿಸಿದೆ.


ಚೆನ್ನೈ (ಜು.25): ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ ನಡೆಸುವುದಕ್ಕೆ ರಕ್ಷಣೆ ನೀಡುವಂತೆ ವಕೀಲರೆಂದು ಹೇಳಿಕೊಂಡ ಅರ್ಜಿದಾರರೊಬ್ಬರು ಸಲ್ಲಿಸಿದ ಅರ್ಜಿಗೆ ಮದ್ರಾಸ್‌ ಹೈಕೋರ್ಟ್‌ ಕೆರಳಿ ಕೆಂಡವಾಗಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ವಕೀಲರು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಬಿ ಪುಗಲೇಂಧಿ ಅವರ ಪೀಠವು ವಯಸ್ಕ ಸಮ್ಮತಿಯ ಲೈಂಗಿಕ ಹಕ್ಕುಗಳ ಆಧಾರದ ಮೇಲೆ ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾನೆ. ಈ ಬಗ್ಗೆ ಅರ್ಜಿದಾರರ ವಿರುದ್ಧ ತೀವ್ರ ಅಸಮ್ಮತಿಯನ್ನು ಹೈಕೋರ್ಟ್‌ ವ್ಯಕ್ತಪಡಿಸಿದೆ. 'ಪ್ರತಿಷ್ಠಿತ' ಕಾನೂನು ಕಾಲೇಜುಗಳ ಪದವೀಧರರನ್ನು ಮಾತ್ರ ವಕೀಲರಾಗಿ ನೋಂದಾಯಿಸಿಕೊಳ್ಳುವಂತೆ ಬಾರ್ ಕೌನ್ಸಿಲ್‌ಗೆ ತಿಳಿಸಿದೆ ಎಂದು ವರದಿಯಾಗಿದೆ. "ಸಮಾಜದಲ್ಲಿ ವಕೀಲರ ಪ್ರತಿಷ್ಠೆ ಕಡಿಮೆಯಾಗುತ್ತಿದೆ ಎಂಬುದನ್ನು ಬಾರ್ ಕೌನ್ಸಿಲ್ ಅರಿತುಕೊಳ್ಳಲು ಇದು ಸಮಯ. ಇನ್ನು ಮುಂದೆ ಬಾರ್ ಕೌನ್ಸಿಲ್ ಪ್ರತಿಷ್ಠಿತ ಸಂಸ್ಥೆಗಳಿಂದ ಮಾತ್ರ ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು. ಆಂಧ್ರ ಪ್ರದೇಶ ಆಗೂ ಕರ್ನಾಟಕದಂಥ ಇತರ ರಾಜ್ಯಗಳ ಸಣ್ಣಪುಟ್ಟ ಕಾಲೇಜುಗಳಿಂದ ವಕೀಲಿಕೆ ಕಲಿತು ಬಂದವರ ದಾಖಲಾತಿಯನ್ನು ನಿರ್ಬಂಧಿಸಬೇಕು' ಎಂದು ಹೇಳಿದೆ.

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಹಾಗೂ ತಮ್ಮ ವ್ಯವಹಾರದಲ್ಲಿ ಪೊಲೀಸರ ಹಸ್ತಕ್ಷೇಪವನ್ನು ತಡೆಯುವ ಆದೇಶ ಹೊರಡಿಸುವಂತೆ ಕೋರಿ ವಕೀಲ ರಾಜಾ ಮುರುಗನ್‌ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ವಯಸ್ಕರ ನಡುವೆ ಸಮ್ಮತಿಯ ಲೈಂಗಿಕತೆ, ಸಮಾಲೋಚನೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಆಯಿಲ್‌ ಮಸಾಜ್‌ ಸೇವೆಗಳನ್ನು ನೀಡುವ ಟ್ರಸ್ಟ್ ಅನ್ನು ತಾನು ನಿರ್ವಹಿಸುತ್ತಿದ್ದೇನೆ ಎಂದು ಮುರುಗನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

Tap to resize

Latest Videos

ಅರ್ಜಿಗಳಿಗೆ ಪ್ರತಿಕ್ರಿಯಿಸಿದ ಹೈಕೋರ್ಟ್, ಬುಧದೇವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಸಂದರ್ಭವನ್ನು ಮುರುಗನ್ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಕಳ್ಳಸಾಗಾಣಿಕೆಯನ್ನು ತಡೆಗಟ್ಟಲು ಮತ್ತು ಲೈಂಗಿಕ ಕಾರ್ಯಕರ್ತರ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ಬುಧದೇವ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ ಎಂದು ಅದು ಒತ್ತಿಹೇಳಿತು. ಇದಕ್ಕೆ ವ್ಯತಿರಿಕ್ತವಾಗಿ ಮುರುಗನ್ ಅಪ್ರಾಪ್ತ ಬಾಲಕಿಯ ಬಡತನದ ಲಾಭ ಪಡೆದು ಶೋಷಣೆ ಮಾಡಿದ್ದ. ಅರ್ಜಿಯಿಂದ ಕೋಪಗೊಂಡ ನ್ಯಾಯಾಲಯವು ಮುರುಗನ್ ಅವರ ಕಾನೂನು ಶಿಕ್ಷಣ ಮತ್ತು ವಕೀಲರ ಸಂಘದ ಸದಸ್ಯತ್ವವನ್ನು ಪರಿಶೀಲಿಸಲು ಅವರ ದಾಖಲಾತಿ ಪ್ರಮಾಣಪತ್ರ ಮತ್ತು ಕಾನೂನು ಪದವಿಯನ್ನು ಹಾಜರುಪಡಿಸುವಂತೆ ಒತ್ತಾಯ ಮಾಡಿದೆ.

'ನೀವ್‌ ಕ್ಯಾಮೆರಾ ಇಡೋ ರೀತಿನೇ ಸರಿ ಇಲ್ಲ..' ಕಾಲೇಜಿನಲ್ಲಿ 'ಮಿನಿ ಡ್ರೆಸ್‌' ಟೀಕೆಗೆ ಅಮಲಾ ಪೌಲ್‌ ಉತ್ತರ!

ಮುರುಗನ್ ಬಿ-ಟೆಕ್ ಪದವೀಧರರಾಗಿದ್ದು, ದಾಖಲಾತಿ ಸಂಖ್ಯೆಯೊಂದಿಗೆ ಬಾರ್ ಕೌನ್ಸಿಲ್ ಗುರುತನ್ನು ಹೊಂದಿದ್ದಾರೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ನ್ಯಾಯಾಲಯಕ್ಕೆ ತಿಳಿಸಿದರು. ಆದಾಗ್ಯೂ, ಮುರುಗನ್ ನಿಜವಾಗಿ ಕಾನೂನು ಅಧ್ಯಯನ ಮಾಡಿದ್ದಾರೆಯೇ ಎಂದು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಎಪಿಪಿ ಉಲ್ಲೇಖಿಸಿದೆ.

'ಇವತ್ತಿನ ರಾತ್ರಿ..' ಎಂದ್ಕೊಂಡು ಮತ್ತಷ್ಟು ಹಾಟ್‌ ಆಗಿ ಬಂದ ತಮನ್ನಾ!

click me!