ಸಣ್ಣ ಪಕ್ಷವಾಗಿದ್ದರೂ ನಮ್ಮನ್ನು ನೋಡಿ ಬಿಜೆಪಿ ಹೆದರುತ್ತಿದೆ: ಕೇಜ್ರಿವಾಲ್

Published : Mar 24, 2022, 06:01 PM IST
ಸಣ್ಣ ಪಕ್ಷವಾಗಿದ್ದರೂ ನಮ್ಮನ್ನು ನೋಡಿ ಬಿಜೆಪಿ ಹೆದರುತ್ತಿದೆ: ಕೇಜ್ರಿವಾಲ್

ಸಾರಾಂಶ

ಸಣ್ಣ ಪಕ್ಷ ನೋಡಿ ದೊಡ್ಡ ಪಕ್ಷ ಭಯಪಡುತ್ತಿದೆ ಧೈರ್ಯವಿದ್ದರೆ ಈಗಲೇ ಚುನಾವಣೆ ಮಾಡಿ ಮತ್ತೆ ಬಿಜೆಪಿ ಕಾಲೆಳೆದ ಕೇಜ್ರಿವಾಲ್

ನವದೆಹಲಿ(ಮಾ.24): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಭಾರತೀಯ ಜನತಾ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೆಹಲಿ ನಗರದ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಮಸೂದೆಗೆ ಕೇಂದ್ರ ಸಂಪುಟ ಹಸಿರು ನಿಶಾನೆ ತೋರಿತ್ತು. ಇದಾದ ನಂತರ ಪೌರ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್‌, ಮಗೆ ಧೈರ್ಯವಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸಿ' ಎಂದು ಬಿಜೆಪಿಗೆ ಹೇಳಿದರು. ಅಲ್ಲದೇ ದೊಡ್ಡ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿ ಚಿಕ್ಕ ಪಕ್ಷಕ್ಕೆ (ಆಮ್ ಆದ್ಮಿ ಪಕ್ಷ) ಹೆದರುತ್ತಿದೆ ಎಂದು ಲೇವಡಿ ಮಾಡಿದರು.

ಬಿಜೆಪಿಯವರು ಮಾಡುತ್ತಿರುವ ನಾಟಕವನ್ನು ದೇಶ ಸಹಿಸುವುದಿಲ್ಲ. ಅವರು ವಿಶ್ವದ ಅತಿದೊಡ್ಡ ಪಕ್ಷವೆಂದು ಅವರು ಹೇಳುತ್ತಾರೆ. ನಾವು ಚಿಕ್ಕವರು. ಆದರೂ, ಅವರು ಹೆದರಿದರು! ದೊಡ್ಡ ಪಕ್ಷವು ಚಿಕ್ಕ ಪಕ್ಷಕ್ಕೆ ಹೆದರುತ್ತದೆ. ಧೈರ್ಯವಿದ್ದರೆ ಚುನಾವಣೆಗೆ ಸ್ಪರ್ಧಿಸಿ ಎಂದು ಕೇಜ್ರಿವಾಲ್‌ ಸವಾಲು ಹಾಕಿದರು. 

ಬುಧವಾರವೂ ಬಿಜೆಪಿಗೆ ಚೂಚಿದ್ದ ಕೇಜ್ರಿವಾಲ್, ಧೈರ್ಯವಿದ್ದರೆ  ದೆಹಲಿ ಮುನ್ಸಿಪಲ್‌ ಕಾರ್ಪೋರೇಷನ್‌ ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸುವಂತೆ ಆಗ್ರಹಿಸಿದರು. ಅಲ್ಲದೇ ಈ ಸಮಯದಲ್ಲಿ ಚುನಾವಣೆಗಳು ನಡೆದರೆ ಮತ್ತು ಬಿಜೆಪಿ ಗೆದ್ದರೆ ನಾವು (ಎಎಪಿ) ರಾಜಕೀಯವನ್ನು ತೊರೆಯುತ್ತೇವೆ' ಎಂದು ಅವರು ಹೇಳಿದರು. ಏಪ್ರಿಲ್‌ನಲ್ಲಿ ನಡೆಯಲಿರುವ ಚುನಾವಣೆಯನ್ನು ವಿಳಂಬಗೊಳಿಸಲು ಬಿಜೆಪಿ ಈ ಪ್ರಸ್ತಾಪವನ್ನು ಬಳಸುತ್ತಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು. 

ಗೆದ್ದು ತೋರಿಸಿ, ರಾಜಕೀಯವನ್ನೇ ಬಿಡುತ್ತೇವೆ: ಬಿಜೆಪಿಗೆ ಕೇಜ್ರೀವಾಲ್ ಚಾಲೆಂಜ್

ನಾನು ಬಿಜೆಪಿಗೆ ಸವಾಲು ಹಾಕುತ್ತೇನೆ,  ನಿಮಗೆ ಧೈರ್ಯವಿದ್ದರೆ ತಕ್ಷಣವೇ ಎಂಸಿಡಿ ಚುನಾವಣೆ ನಡೆಸಿ. ನೀವು ಗೆದ್ದರೆ, ನಾವು ರಾಜಕೀಯವನ್ನು ಅಲ್ಲಿಗೆ ಬಿಡುತ್ತೇವೆ . ಬಿಜೆಪಿ ಮೊದಲು ಚುನಾವಣೆಯನ್ನು ಮುಂದೂಡಲು ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿತು ಮತ್ತು ಈಗ ತಿದ್ದುಪಡಿಯ ಮೂಲಕ ತಿಂಗಳುಗಟ್ಟಲೆ ವಿಳಂಬ ಮಾಡುವ ಹಾದಿಯಲ್ಲಿದೆ . ಇದರಿಂದ  ಪ್ರಜಾಪ್ರಭುತ್ವಕ್ಕೆ ಏನಾದರೂ ಪ್ರಯೋಜನವಿದೆಯೇ ಎಂದು ಅವರು ಕೇಳಿದರು.

ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ಮೂರು ಮುನ್ಸಿಪಲ್‌ ಕಾರ್ಪೋರೇಷನ್‌ಗಳು ಈ ಹಿಂದೆ ಒಂದೇ ಆಗಿದ್ದವು. ಆದರೆ 2012ರಲ್ಲಿ ಇದನ್ನು ಮೂರು ಭಾಗಗಳಾಗಿ ಮಾಡಲಾಯಿತು.

Arvind Kejriwal: ರೋಡ್‌ ಶೋ ಮೂಲಕ ಜನತೆಗೆ ಆಪ್‌ ಧನ್ಯವಾದ

ಎರಡು ವಾರಗಳ ಹಿಂದೆ ಈ ಮೂರು ಮುನ್ಸಪಲ್‌ ಕಾರ್ಪೋರೇಷನ್‌ ಅನ್ನು ಮತ್ತೆ ವಿಲೀನಗೊಳಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರದಿಂದ ಪ್ರಕಟಣೆಯನ್ನು ಸ್ವೀಕರಿಸಿದ ನಂತರ  ದೆಹಲಿಯ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಮುಂದೂಡಿತು. ಪ್ರಸ್ತುತ ಈ ಮುನ್ಸಿಪಲ್‌ಗಳ ಅಡಿಯಲ್ಲಿ 272 ವಾರ್ಡ್‌ಗಳಿವೆ. ಮೇ 18 ಮತ್ತು 22 ರ ನಡುವೆ ಇದರ ಅವಧಿ ಮುಕ್ತಾಯಗೊಳ್ಳಲಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!
ನಾವ್ಯಾರಿಗೂ ಕಮ್ಮಿ ಇಲ್ಲ ಬ್ರೋ... ಆಹಾ ಭಾರತೀಯ ನಾರಿ ಕುಡಿದು ರಾಪಿಡೋ ಏರಿ ಬಿದ್ದಳು ಕೆಳಗೆ ಜಾರಿ: ವೀಡಿಯೋ