
ಭೋಪಾಲ್(ಆ.12) ಪಾತ್ರೆ ತೊಳೆಯುವಂತೆ ಪಿಸ್ತೂಲ್‌ಗಳನ್ನು ನೀರಿನಲ್ಲಿ ತೊಳೆಯುತ್ತಿರುವ ಈ ವಿಡಿಯೊದಿಂದ ಇದೀಗ ಭಾರಿ ಅಕ್ರಮವೊಂದು ಬಯಲಾಗಿದೆ. ಮಧ್ಯಪ್ರದೇಶದ ಪೊಲೀಸರು ಈ ವಿಡಿಯೋ ಆಧರಿಸಿ ದಾಳಿ ನಡೆಸಿ ಅಕ್ರಮ ಪಿಸ್ತೂಲ್ ಕಾರ್ಖಾನಗೆ ಬೀಗ ಹಾಕಿದ ಘಟನೆ ನಡೆದಿದೆ. ಕಾರ್ಖಾನೆಯಲ್ಲಿದ್ದ ಹಲವು ಪಿಸ್ತೂಲ್, ಮದ್ದುಗುಂಡು ಸೇರಿಂತೆ ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿದ್ದಾರೆ.
ಮಹಿಳೆಯೊಬ್ಬರು ಪಿಸ್ತೂಲ್‌ಗಳನ್ನು ಸೋಪಿನಲ್ಲಿ ಉಜ್ಜಿ ತೊಳೆಯುತ್ತಿರುವ ವಿಡಿಯೋ ಬಹಿರಂಗವಾಗಿತ್ತು. ಮಹಿಳೆಯ ಪತಿ ಶಕ್ತಿ ಕಪೂರ್ ಶಾಖಾವರ್ ಮಾವ ಬಿಹಾರಿಲಾಲ್ ಶಾಖಾವಾರ್ ಇಬ್ಬರು ಜೊತೆ ಸೇರಿ ಈ ಅಕ್ರಮ ಕಾರ್ಖಾನೆ ನಡೆಸುತ್ತಿದ್ದರು. ಇಲ್ಲಿ ಕಂಟ್ರಿಮೇಡ್ ಪಿಸ್ತೂಲ್‌ಗಲನ್ನು ತಯಾರಿಸಲಾಗುತಿತ್ತು. ಈ ಪಿಸ್ತೂಲ್‌ಗಳು ಅಕ್ರಮವಾಗಿ ಮಾರಾಟವಾಗುತ್ತಿತ್ತು. ಕಡಿಮೆ ಮೊತ್ತಕ್ಕ ಪಿಸ್ತೂಲ್ ಸಿಗುವ ಕಾರಣ ಇವರ ಪಿಸ್ತೂಲ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು.
ನಡೆದು ಬರುತ್ತಿದ್ದ ಶಿಕ್ಷಕಿಗೆ ಗನ್ ತೋರಿಸಿ ಮದುವೆಗೆ ಯತ್ನಿಸಿದ ಪಾಗಲ್ ಪ್ರೇಮಿ, ಬೆಚ್ಚಿ ಬೀಳಿಸುವ ವಿಡಿಯೋ!
ಅಕ್ರಮಗಳಿಗೆ ಇದೇ ಪಿಸ್ತೂಲ್‌ಗಳು ಬಳಕೆಯಾಗುತ್ತಿತ್ತು. ಯಾವುದೇ ರೀತಿ ಗುರುತು ಸಿಗದಂತೆ, ಎಲ್ಲಿ ತಯಾರಾಗಿದೆ ಅನ್ನೋ ಸುಳಿವು ಸಿಗದಂತೆ ಕಂಟ್ರಿ ಪಿಸ್ತೂಲ್‌ಗಳನ್ನು ಇಲ್ಲಿ ತಯಾರಿಸಲಾಗುತ್ತಿತ್ತು. ಶಕ್ತಿ ಕಪೂರ್ ಶಾಖಾವರ್ ಪತ್ನಿ ಕೂಡ ಇದೇ ಅಕ್ರಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಸ್ತೂಲ್‌ಗಳು ಪಳಪಳ ಹೊಳೆಯಲು ಬ್ರಶ್ ಬಳಸಿ ನೀರಿನಲ್ಲಿ ತೊಳೆಯುವುದು ಇಲ್ಲಿ ಸಾಮಮಾನ್ಯವಾಗಿದೆ.ಆದರೆ ಈ ವಿಡಿಯೋ ರಹಸ್ಯವಾಗಿ ಹೊರಬಂದಿದೆ.
ಈ ವಿಡಿಯೋ ಹೊರಬರುತ್ತಿದ್ದಂತೆ ಮಧುವಾ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಮೊದಲಿಗೆ ಈ ವಿಡಿಯೋ ಅಸಲಿಯೇ ಅನ್ನೋದು ಪರಿಶೀಲಿಸಿದ್ದಾರೆ. ಬಳಿಕ ಈ ವಿಡಿಯೋದ ಕುರಿತು ತನಿಖೆ ನಡೆಸಿ ನೇರವಾಗಿ ಅಕ್ರಮ ಕಾರ್ಖಾನೆಗೆ ದಾಳಿ ನಡೆಸಿದ್ದಾರೆ. ಮಧುವಾ ಪೊಲೀಸ್ ಇನ್ ಚಾರ್ಜ್ ಪವನ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. ದಾಳಿ ನಡೆಸಿ ಅಕ್ರಮ ಪಿಸ್ತೂಲ್‌ಗಳು, ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಕಳೆದ 6 ತಿಂಗಳಿನಿಂದ ಈ ಕಾರ್ಖಾನೆ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ಸಿಕ್ಕಿದೆ. ಈ ಪಿಸ್ತೂಲ್‌ಗಳನ್ನು ಎಲ್ಲಿಗೆ ಮಾರಾಟ ಮಾಡುತ್ತಿದ್ದರು, ಯಾರು ಈ ಪಿಸ್ತೂಲ್ ಬಳಸಿದ್ದಾರೆ? ಅಕ್ರಮಗಳು ಕುರಿತು ತನಿಖೆ ನಡೆಯುತ್ತಿದೆ ಎಂದು ಪವನ್ ಸಿಂಗ್ ಹೇಳಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೊಂದು ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಬಂಧಿತರ ವಿಚಾರಣೆ ಆರಂಭಗೊಂಡಿದ್ದು ಕೆಲ ಸ್ಫೋಟಕ ಮಾಹಿತಿಗಳು ಲಭ್ಯವಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇನ್‌ಸ್ಟಾ ರೀಲ್ಸ್‌ಗಾಗಿ ಸಿಮ್ರನ್ ಭರ್ಜರಿ ಡ್ಯಾನ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರಿಂದ ಆ್ಯಕ್ಷನ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ