ಉಗ್ರರು, ಸೈನಿಕರು ಪರಸ್ಪರ ಶಾಮೀಲು: ಫಾರೂಖ್‌ ವಿವಾದಾತ್ಮಕ ಹೇಳಿಕೆ, ಬಿಜೆಪಿ ಕಿಡಿ

By Ravi JanekalFirst Published Aug 12, 2024, 10:48 AM IST
Highlights

ಭಾರತೀಯ ಸೇನಾ ಪಡೆಗಳು ಮತ್ತು ಉಗ್ರರು ಪರಸ್ಪರ ಶಾಮೀಲಾಗಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಫಾರೂಖ್‌ ಅಬ್ದುಲ್ಲಾ ವಿವಾದಿತ ಹೇಳಿಕೆ ನೀಡಿದ್ದಾರೆ.

ಶ್ರೀನಗರ (ಆ.12) ಭಾರತೀಯ ಸೇನಾ ಪಡೆಗಳು ಮತ್ತು ಉಗ್ರರು ಪರಸ್ಪರ ಶಾಮೀಲಾಗಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಫಾರೂಖ್‌ ಅಬ್ದುಲ್ಲಾ ವಿವಾದಿತ ಹೇಳಿಕೆ ನೀಡಿದ್ದಾರೆ.

ಕಾಶ್ಮೀರದಲ್ಲಿನ ಉಗ್ರರ ದಾಳಿ ಬಗ್ಗೆ ಭಾನುವಾರ ಅವರು ಮಾತನಾಡಿ, ‘ನಮ್ಮ ಗಡಿಗಳಲ್ಲಿ ಬೃಹತ್ ಸೈನಿಕ ನಿಯೋಜನೆ ಇದೆ, ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಸೇನೆಯ ಭಾರಿ ಉಪಸ್ಥಿತಿಯ ಹೊರತಾಗಿಯೂ, ಉಗ್ರರು ಭಾರತೀಯ ಭೂಪ್ರದೇಶದೊಳಗೆ ನುಸುಳುತ್ತಿದ್ದಾರೆ. ಯೇ ಸಬ್ ಮಿಲೇ ಹುಯೇ ಹೈ ... ಹಮಾರಿ ಬರ್ಬಾದಿ ಕೆ ಲಿಯೇ... (ನಮ್ಮನ್ನು ಹಾಳು ಮಾಡಲು ಸೈನಿಕರ ಮತ್ತು ಉಗ್ರರ ನಡುವೆ ಒಪ್ಪಂದವಿದೆ)’ ಎಂದು ಆರೋಪಿಸಿದ್ದಾರೆ.

Latest Videos

ಮೋದಿಯವರಿಗೆ ಸೀಟು ಕಡಿಮೆ ಬಂದಿದ್ದಕ್ಕೆ ಸಂಭ್ರಮಿಸಿದವರು; ಬಾಂಗ್ಲಾದೇಶದಿಂದ ಪಾಠ ಕಲಿಯಬೇಕು: ಉಮಾ ಭಾರತಿ

"ನಮ್ಮ ಗಡಿಯಲ್ಲಿ ಬೃಹತ್ ಸೈನಿಕ ನಿಯೋಜನೆ ಇದೆ,ಇಷ್ಟೊಂದು ಪ್ರಮಾಣದ ಸೈನಿಕ ನಿಯೋಜಿಸಿರುವುದು ವಿಶ್ವದಲ್ಲೇ ಅತಿ ದೊಡ್ಡದಾಗಿ, ಗಡಿಯಲ್ಲಿ ಇಷ್ಟು ಬಿಗಿ ಭದ್ರತೆ ಇರುವಾಗಲೂ ಉಗ್ರರು ಭಾರತದ ಭೂಪ್ರದೇಶದೊಳಗೆ ನುಸುಳುತ್ತಿದ್ದಾರೆ. ಮಾದಕ ವಸ್ತುಗಳ ಕಳ್ಳಸಾಗಣೆ ನಡೆಯುತ್ತಿದೆ. ಭದ್ರತಾ ಪಡೆಗಳಿದ್ದೂ ಇದೆಲ್ಲ ಹೇಗೆ ಸಾಧ್ಯ? ಉಗ್ರರೊಂದಿಗೆ ಸೇನೆಯೂ ಶಾಮಿಲಾಗಿದೆ ಎಂದು ಆರೋಪಿಸಿದ್ದಾರೆ.

ರಕ್ತ ಬೇಕಿದ್ರೆ ಕೊಟ್ಟೆವು ಆದ್ರೆ ಮತ್ತೆ ದೇಶ ಬಿಡೆವು: ತಾಯ್ನೆಲದಲ್ಲಿ ಉಳಿವಿಗೆ ಬಾಂಗ್ಲಾ ಹಿಂದೂಗಳ ಹೋರಾಟ

ಭದ್ರತಾ ಪಡೆಗಳ ಗಡಿ ರಕ್ಷಣೆ ಮಾಡುತ್ತಿರುವ ನಡುವೆಯೂ ಭಾರತದೊಳಗೆ 200-300 ರ ಆಸುಪಾಸಿನಷ್ಟು ಉಗ್ರಗಾಮಿಗಳು ಹೇಗೆ ಬಂದರು? ಅವರು ಎಲ್ಲಿಂದ ಬಂದರು? ಇದಕ್ಕೆಲ್ಲ ಯಾರು ಜವಾಬ್ದಾರರು? ಯಾರು ಡಬಲ್ ಕ್ರಾಸ್ ಮಾಡುತ್ತಿದ್ದಾರೆ? ಯಾರು ಸಾಯುತ್ತಿದ್ದಾರೆ - ನಮ್ಮ ಕರ್ನಲ್, ಮೇಜರ್ ಮತ್ತು ಸೈನಿಕರು. ಇದೆಲ್ಲ ಹೇಗೆ ನಡೆಯುತ್ತಿದೆ? ಕೇಂದ್ರ ಸರ್ಕಾರ ಇಡೀ ರಾಷ್ಟ್ರಕ್ಕೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

click me!