ಒಂದೇ ಮಂಟಪದಲ್ಲಿ ಇಬ್ಬರು ಸಹೋದರಿಯರನ್ನು ವರಿಸಿದ| ಮದುವೆ ಬೆನ್ನಲ್ಲೇ ಕಾರಣವನ್ನೂ ಬಹಿರಂಗಪಡಿಸಿದ ವಧು| ಪತ್ನಿಯೇ, ತಂಗಿಯನ್ನು ಮದುವೆಯಾಗಲು ಹೇಳಿದ್ದಂತೆ!
ಭೋಪಾಲ್[ಡಿ.09]: ಮಧ್ಯಪ್ರದೇಶದ ಮದುವೆಯೊಂದು ಸದ್ಯ ಭಾರೀ ಚರ್ಚೆ ಹುಟ್ಟು ಹಾಕಿದೆ. ಇಲ್ಲೊಬ್ಬ ವರ ಒಂದೇ ಮಂಟಪದಲ್ಲಿ ಇಬ್ಬರು ಸಹೋದರಿಯರನ್ನು ವರಿಸಿದ್ದಾನೆ. ಇಲ್ಲಿನ ಭಿಂಡ್ ಜಿಲ್ಲೆಯಲ್ಲಿ ಈ ಮದುವೆ ನಡೆದಿದ್ದು, ಮದುಮಗ ತಾನು ಮದುವೆ ಮಾಡಿಕೊಳ್ಳಬೇಕಿದ್ದ ಯುವತಿಯ ತಂಗಿಯನ್ನೂ ಮದುವೆಯಾಗಿದ್ದಾನೆ. ಕಾರಣವೇನು? ಇಲ್ಲಿದೆ ವಿವರ
ಏನಿದು ಪ್ರಕರಣ?
ಭಿಂಡ್ ಜಿಲ್ಲೆಯ ಗುದಾವಲಿ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ನಾಯಕಿ ವಿನೀತಾರ ಗಂಡ ಆಕೆಯ ತಂಗಿ ರಚನಾರನ್ನೂ ಮದುವೆಯಾಗಿದ್ದಾರೆ. ದಿಲೀಪ್ ಹಾಗೂ ವಿನೀತಾ ಮದುವೆ 9 ವರ್ಷದ ಹಿಂದೆ ನಡೆದಿದ್ದು, ಇವರಿಗೆ ಮೂವರು ಮಕ್ಕಳಿದ್ದಾರೆ.
ಮದುವೆ ಕುರಿತಾಗಿ ಮಾತನಾಡಿದ ದಿಲೀಪ್ 'ಈ ಮದುವೆ ಆಗಲು ನನ್ನ ಹೆಂಡತಿ ವಿನೀತಾಳೇ ಒತ್ತಾಯಿಸಿದ್ದು. ಹೀಗಾಗಿಯೇ ನಾನು ಆಕೆಯ ತಂಗಿ ರಚನಾಳನ್ನು ಮದುವೆಯಾದೆ ಎಂದಿದ್ದಾರೆ'. ದಿಲೀಪ್ ಒಂದೇ ಮಂಟಪದಲ್ಲಿ ತನ್ನ ಹೆಂಡತಿ ವಿನೀತಾರನ್ನು ಎರಡನೇ ಬಾಋಇ ಮದುವೆಯಾಗಿದ್ದು, ಇದೇ ವೆಳೆ ಆಕೆಯ ತಂಗಿ ರಚನಾರನ್ನೂ ವರಿಸಿದ್ದಾರೆ.
ಈ ಮದುವೆಯ ಹಿಂದಿದೆ ಒಂದು ಕಾರಣ
ತನ್ನ ಹೆಂಡತಿ ಇದ್ದರೂ ದಿಲೀಪ್ ಯಾಕೆ ಈ ಮದುವೆಯಾದ ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ಹಿಂದಿನ ಕಾರಣವನ್ನೂ ದಿಲೀಪ್ ಬಹಿರಂಗಪಡಿಸಿದ್ದಾರೆ. 'ನನ್ನ ಮೊದಲ ಹೆಂಡತಿಗೆ ಅನಾರೋಗ್ಯ ಕಾಡುತ್ತಿದೆ. ಮಕ್ಕಳು ಕೂಡಾ ತುಂಬಾ ಚಿಕ್ಕವರು. ಅವರಿಗಾಗಿ ನಾನು ಈ ಎರಡನೇ ಮದುವೆಯಾಗಲು ಸಮ್ಮತಿ ಕೊಟ್ಟೆ. ಅಲ್ಲದೇ ನಾನು ರಚನಾಳನ್ನೂ ಬಹಳ ಇಷ್ಟ ಪಡುತ್ತಿದ್ದೇನೆ. ಮನೆಯಲ್ಲಿ ಎರಡನೇ ಮದುವೆ ವಿಚಾರ ಪ್ರಸ್ತಾಪವಾದಾಗ ನಾನು ಈ ವಿಚಾರವನ್ನು ನನ್ನ ಹೆಂಡತಿ ವಿನೀತಾಗೆ ತಿಳಿಸಿದೆ. ಆಕೆ ಸಮ್ಮತಿ ಕೊಟ್ಟ ಬಳಿಕವಷ್ಟೇ ಮದುವೆಯಾದೆ' ಎಂದಿದ್ದಾರೆ.