Breaking: ಮಧ್ಯಪ್ರದೇಶದಲ್ಲಿ ಮತ್ತೊಂದು ಚೀತಾ ಮರಣ ಈವರೆಗೂ 9 ಸಾವು!

By Santosh Naik  |  First Published Aug 2, 2023, 1:38 PM IST

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಬುಧವಾರ ಮತ್ತೊಂದು ಹೆಣ್ಣು ಚೀತಾ ಸಾವು ಕಂಡಿದೆ. ಮಾರ್ಚ್‌ ನಂತರ ಈವರೆಗೂ 9ನೇ ಚೀತಾ ಸಾವಿನ ಪ್ರಕರಣ ಇದಾಗಿದೆ.


ಭೋಪಾಲ್‌ (ಆ.2): ಮಧ್ಯಪ್ರದೇಶದಲ್ಲಿ ಚೀತಾಗಳ ಸಾವಿನ ಸರಣಿ ಮುಂದುವರಿದಿದೆ. ಬುಧವಾರ ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಹೆಣ್ಣು ಚೀತಾ ಮೃತಪಟ್ಟಿದೆ.  ಮಾರ್ಚ್‌ ಬಳಿಕ ಕುನೋ ಪಾರ್ಕ್‌ನಲ್ಲಿನ 9ನೇ ಚೀತಾ ಸಾವಿನ ಪ್ರಕರಣದ ಇದಾಗಿದೆ. ಬುಧವಾರ ಬೆಳಗ್ಗೆ ಚೀತಾ ಸಾವು ಕಂಡಿರುವ ಬಗ್ಗೆ ಪತ್ತೆಯಾಗಿದೆ. ಇದು ಒಟ್ಟಾರೆ ಕುನೋ ಪಾರ್ಕ್‌ನಲ್ಲಿಯೇ ಚೀತಾ ಸಾವು ಕಂಡ 9ನೇ ಪ್ರಕರಣವಾಗಿದೆ. 'ಧಾತ್ರಿ' (ಟಿಬಿಲಿಸಿ) ಹೆಸರಿನಿ ಹೆಣ್ಣು ಚೀತಾ ಇಂದು ಬೆಳಗ್ಗೆ ಸಾವು ಕಂಡಿದೆ. ಈಕೆಯ ಸಾವಿಗೆ ನಿಖರ ಕಾರಣ ಏನು ಅನ್ನೋದನ್ನು ಪತ್ತೆ ಮಾಡಲಾಗುತ್ತಿದೆ. ಚೀತಾದ ಮರಣೋತ್ತರ ಪರೀಕ್ಷೆಯನ್ನೂ ಮಾಡಲಾಗುತ್ತಿದೆ' ಎಂದು ಮಧ್ಯಪ್ರದೇಶದ ಕುನೋ ಪಾರ್ಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಅದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಪ್ರಾಜೆಕ್ಟ್‌ ಚೀತಾ ಯೋಜನೆಗೆ ಬಹುದೊಡ್ಡ ಹಿನ್ನಡೆಯಾಗಿದೆ.

ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿದ ಒಂಬತ್ತು ಚೀತಾಗಳಲ್ಲಿ ಮೂರು ಮರಿಗಳು ಸೇರಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಬಿಡಲಾಗಿತ್ತು. ಇಲ್ಲಿಗೆ ಬಂದ ಬಳಿಕ ಒಂದು ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಮೂರು ಮರಿಗಳು ಸಾವು ಕಂಡಿವೆ. ಕಳೆದ ತಿಂಗಳು ನಾಲ್ಕು ದಿನಗಳ ಅಂತರದಲ್ಲಿ ಎರಡು ಗಂಡು ಚಿರತೆಗಳು ಸಾವನ್ನಪ್ಪಿದ್ದು, ತೇಜಸ್ ಜುಲೈ 11 ರಂದು ಸಾವನ್ನಪ್ಪಿದ್ದು, ಜುಲೈ 14 ರಂದು ಸೂರಜ್ ಶವ ಪತ್ತೆಯಾಗಿತ್ತು.

Tap to resize

Latest Videos

ಸರಣಿ ಸಾವು ಹಿನ್ನೆಲೆ: ಚೀತಾಗಳ ರೇಡಿಯೋ ಕಾಲರ್‌ ತೆಗೆದು ಆರೋಗ್ಯ ತಪಾಸಣೆ

ಹೆಣ್ಣು ಚಿರತೆಯೊಂದಿಗಿನ ಹಿಂಸಾತ್ಮಕ ಕಾದಾಟದ ನಂತರ ತೇಜಸ್ ಚೀತಾ ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವು ಕಂಡಿತ್ತು ಎಂದು ಶವಪರೀಕ್ಷೆ ಬಹಿರಂಗಪಡಿಸಿದೆ.

ಗಂಡು ಚೀತಾದ ಆಕ್ರಮಣಕಾರಿ ಸಂಭೋಗ, ದಕ್ಷಿಣ ಆಫ್ರಿಕಾದಿಂದ ಬಂದಿದ್ದ 'ದಕ್ಷಾ' ಚೀತಾ ಸಾವು!

click me!