ಯಮರಾಜನಾದ ಶ್ವಾನ: ಎರಡೆಮ್ಮೆಗಳ ಮೇಲೆ ನಿಂತು ಬಿಂದಾಸ್ ಪಯಣ: ವೈರಲ್ ವೀಡಿಯೋ

Published : Aug 02, 2023, 01:07 PM IST
ಯಮರಾಜನಾದ ಶ್ವಾನ: ಎರಡೆಮ್ಮೆಗಳ ಮೇಲೆ ನಿಂತು ಬಿಂದಾಸ್ ಪಯಣ: ವೈರಲ್ ವೀಡಿಯೋ

ಸಾರಾಂಶ

ಎಮ್ಮೆಯ ಮೇಲೆ ಶ್ವಾನದ ಜಾಲಿರೈಡ್ ಇಂಟರ್‌ನೆಟ್‌ನಲ್ಲಿ ನಗೆಯುಕ್ಕಿಸುತ್ತಿದೆ. ಸ್ವಲ್ಪವೂ ಅಂಜದೇ ಶ್ವಾನ ಬಹಳ ಗಾಂಭೀರ್ಯದಿಂದ ಎಮ್ಮೆಗಳ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಿಂತಿದೆ. 

ನಾಯಿಯೊಂದು ಎಮ್ಮೆ ಮೇಲೆ ಸವಾರಿ ಹೋಗುತ್ತಿರುವ ಹಳೆ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋ ನೋಡಿದ ಜನ ಅಬ್ಬಾ ನಾಯಿಗೂ ಎಂಥಾ ಕಾಲ ಬಂತು ನೋಡಿ ಎಂದು ಮಾತಾಡಿಕೊಳ್ತಿದ್ದಾರೆ. ಇದರ ಜೊತೆಗೆ ಇನ್ಸ್ಟಾಗ್ರಾಂನಲ್ಲಿರುವ ಮೀಮ್ಸ್ ಟ್ರೋಲ್ ಪೇಜ್‌ಗಳು ಈ ವೀಡಿಯೋವನ್ನು ಇನ್ನಷ್ಟು ಎಡಿಟ್ ಮಾಡಿ ಹೊಸ ಪ್ರಧಾನಿ ಬಂದ್ರು ಎಂದು ಟ್ರೋಲ್ ಮಾಡ್ತಿದ್ದಾರೆ.

ಸಾಮಾನ್ಯವಾಗಿ ಮನೆಯ ಸಾಕು ಪ್ರಾಣಿಗಳು ಪರಸ್ಪರ ಅನೋನ್ಯ ಸಂಬಂಧವನ್ನು ಹೊಂದಿರುತ್ತವೆ. ಬೆಕ್ಕು ನಾಯಿಗಳು ಜೊತೆಯಾಗಿ ಆಟವಾಡುವ ಹಸುವೊಂದು ನಾಯಿಗೆ ಹಾಲುಣಿಸುವ ಹೀಗೆ ಸಹಬಾಳ್ವೆಯಿಂದ ಹೀಗೆ ಪ್ರಾಣಿಗಳು ಪರಸ್ಪರ ಸಹಬಾಳ್ವೆಯಿಂದ ಬಾಳುವ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಇಲ್ಲೊಂದು ಕಡೆ ಎರಡು ಎಮ್ಮೆಗಳು ಜೊತೆಯಾಗಿ ರಸ್ತೆಯಲ್ಲಿ ಸಾಗುತ್ತಿದ್ದರೆ ಅದರಲ್ಲಿ ಒಂದು ಎಮ್ಮೆಯ ಮೇಲೆ ಶ್ವಾನವೊಂದು ನೇರವಾಗಿ ನಿಂತುಕೊಂಡು ಸವಾರಿ ಮಾಡುತ್ತಿದೆ. ಎಮ್ಮೆಯ ಮೇಲೆ ಶ್ವಾನದ ಜಾಲಿರೈಡ್ ಇಂಟರ್‌ನೆಟ್‌ನಲ್ಲಿ ನಗೆಯುಕ್ಕಿಸುತ್ತಿದೆ. ಸ್ವಲ್ಪವೂ ಅಂಜದೇ ಶ್ವಾನ ಬಹಳ ಗಾಂಭೀರ್ಯದಿಂದ ಎಮ್ಮೆಗಳ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ನಿಂತಿದೆ. 

ಅಪಾರ್ಟ್‌ಮೆಂಟ್‌ ಐದನೇ ಮಹಡಿ ಬಾಲ್ಕನಿಯಲ್ಲಿ 7 ಹಸುಗಳನ್ನು ಸಾಕಿದ ವ್ಯಕ್ತಿ: ಮುಂದಾಗಿದ್ದು ಅವಾಂತರ

ಈ ವೀಡಿಯೋವನ್ನು ನೋಡಿದ ಒಬ್ಬರು ನಾನು ಈ ವೀಡಿಯೋವನ್ನು ಇಡೀ ಕುಟುಂಬಕ್ಕೆ ತೋರಿಸಿದೆ ನಕ್ಕು ನಕ್ಕು ಸಾಕಾಯ್ತು ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ. ಕೆಲವರು ಶ್ವಾನವನ್ನು ಹೊಸ ಪ್ರಧಾನಿ ಎಂದಿದ್ದಾರೆ. ಹೀಗಾಗಿ ಇಲ್ಲಿ ರಾಜಕೀಯ ಎಂಟ್ರಿಯಾಗಿದ್ದು, ಕೆಲವರು ಶ್ವಾನವನ್ನು ಪ್ರಧಾನಿ ಮೋದಿಗೆ ಹೋಲಿಸಿದರೆ ಮತ್ತೆ ಕೆಲವರು ರಾಹುಲ್ ಗಾಂಧಿಗೆ ಹೋಲಿಸಿ ಹೊಸ ಪ್ರಧಾನಿ ಪಪ್ಪುಜೀ ಗೆ ಜೈ ಎಂದಿದ್ದಾರೆ. 

ಪತ್ನಿಗೆ ಮಾತ್ರವಲ್ಲ ಮೂರು ಸಾಕುನಾಯಿಗೂ ಜೀವನಾಂಶ ಕೊಡುವಂತೆ ಪತಿಗೆ ಸೂಚಿಸಿದ ಕೋರ್ಟ್‌

ಮತ್ತೆ ಕೆಲವರು ಈ ಶ್ವಾನವನ್ನು ಸಿನಿಮಾದ ಹೀರೋ ಎಂಟ್ರಿಗೆ ಹೋಲಿಕೆ ಮಾಡಿದ್ದಾರೆ. ಹಾಗೆಯೇ ಶ್ವಾನಕ್ಕೂ ಒಂದು ಕಾಲ ಬರುತ್ತೆ ಎಂದು ಇದಕ್ಕೆ ಹೇಳೋದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಶ್ವಾನ ಹಾಗೂ ಎಮ್ಮೆಗಳ ಈ ಜೋಡಿ ನೋಡುಗರು ಬಿದ್ದು ಬಿದ್ದು ನಗುವಂತೆ ಮಾಡಿರುವುದು ಸುಳ್ಳಲ್ಲ. ಅಂದಹಾಗೆ ಹಿಂದೂ ಪುರಾಣಗಳ ಪ್ರಕಾರ ಎಮ್ಮೆ ಯಮರಾಜನ ವಾಹನವಾದರೆ ನಾಯಿಯನ್ನು ನಾರಾಯಣನ ಸ್ವರೂಪ ಎನ್ನಲಾಗುತ್ತದೆ. ಶ್ವಾನ ಸ್ವರ್ಗಕ್ಕೆ ದಾರಿ ತೋರಿಸುತ್ತದೆ ಎಂದು ನಂಬಲಾಗುತ್ತದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಿಜೆಪಿಗರ ಬಳಿ 1 ಕೋಟಿ 2 ಕೋಟಿ ಮೊತ್ತದ ದುಬಾರಿ ವಾಚ್‌ಗಳಿವೆ ಚೆಕ್ ಮಾಡಿ: ಕಾಂಗ್ರೆಸ್ ಶಾಸಕ
ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು