
ಛಿಂದ್ವಾರ(ಜ.1): ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಮಕ್ಕಳಿಗೋ, ಸಂಬಂಧಿಕರಿಗೋ, ಪ್ರೀತಿ ಪಾತ್ರರಿಗೋ ಉಯಿಲು ಬರೆದಿಡುವವರ ಬಗ್ಗೆ ಕೇಳಿರುತ್ತೀರಿ. ಆದರೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ಅರ್ಧ ಸ್ವತ್ತನ್ನು ಪ್ರೀತಿಯ ಶ್ವಾನದ ಹೆಸರಿಗೆ ವಿಲ್ ಬರೆದಿಟ್ಟಿದ್ದಾರೆ!
ಇಲ್ಲಿನ ಚಾಂದ್ ತಾಲೂಕಿನ ಬಡಿಬಾಬಾ ಹಳ್ಳಿಯ ಓಂ ನಾರಾಯಣ್ ವರ್ಮಾ ಎಂಬವರೇ ಈ ರೀತಿ ವಿಚಿತ್ರ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿದವರು. ನಾರಾಯಣ್ ಅವರ ಬಳಿ ಸ್ವಯಾರ್ಜಿತ 18 ಎಕರೆ ಭೂಮಿ ಇದ್ದು, ತಮ್ಮ ಮರಣಾನಂತರ ಈ ಆಸ್ತಿಯ ಅರ್ಧ ಪಾಲು ಪತ್ನಿಗೆ, ಉಳಿದರ್ಧ ನಾಯಿಗೆ ಎಂದು ಉಯಿಲಿನಲ್ಲಿ ಬರೆದಿಟ್ಟಿದ್ದಾರೆ.
32 ಲಕ್ಷ ಗ್ರಾಹಕರನ್ನು ವಂಚಿಸಿದ ಅಗ್ರಿಗೋಲ್ಡ್‌ನ 4109 ಕೋಟಿ ರು. ಆಸ್ತಿ ಜಪ್ತಿ
ನಾಯಿಯ ಕಾಳಜಿ ಮಾಡಿದವರಿಗೆ ಅದರ ಮರಣಾನಂತರ ಆ ಆಸ್ತಿ ಸೇರುವುದಾಗಿ ಬರೆದಿದ್ದಾರೆ. ನಾರಾಯಣ್ ಅವರಿಗೆ ನಾಲ್ವರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನೂ ಇದ್ದಾನೆ. ಆದರೆ ಮಕ್ಕಳಿಗೆ ತಮ್ಮ ಆಸ್ತಿಯಲ್ಲಿ ಪಾಲನ್ನು ನೀಡಲು ಇಷ್ಟವಿಲ್ಲದ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ‘ನನಗೆ ನನ್ನ ಮಕ್ಕಳಲ್ಲಿ ನಂಬಿಕೆ ಇಲ್ಲ. ಹಾಗಾಗಿ ನನ್ನ ಮರಣಾನಂತರ ಆಸ್ತಿಯನ್ನು ಪತ್ನಿ ಮತ್ತು ನಾಯಿಗೆ ಸಮವಾಗಿ ಹಂಚಿದ್ದೇನೆ’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ