ಕರ್ನಾಟಕದಲ್ಲಿ 'ಕೈ' ದಿಗ್ವಿಜಯ ಬೆನ್ನಲ್ಲೇ ಮಧ್ಯ ಪ್ರದೇಶದಲ್ಲೂ ಗೆಲುವಿಗೆ ಪ್ಲ್ಯಾನ್‌: ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಚಾಲನೆ

By BK Ashwin  |  First Published Jun 12, 2023, 1:52 PM IST

ಮಧ್ಯ ಪ್ರದೇಶದ ಜಬಲ್‌ಪುರ ನಗರದ ಗ್ವಾರಿಘಾಟ್‌ನಲ್ಲಿ ಪ್ರಿಯಾಂಕಾ ಗಾಂಧಿ ನರ್ಮದಾ ನದಿಯಲ್ಲಿ ಪೂಜೆ ನೆರವೇರಿಸುವ ಮೂಲಕ ಪಕ್ಷದ ಪ್ರಚಾರ ಆರಂಭಿಸಿದ್ದಾರೆ.


ನವದೆಹಲಿ (ಜೂನ್ 12, 2023): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಭರ್ಜರಿ ಬಹುಮತ ಗಳಿಸಿರುವ ಕಾಂಗ್ರೆಸ್‌ ಇದೇ ರೀತಿ ಮಧ್ಯ ಪ್ರದೇಶದಲ್ಲೂ ಅಧಿಕಾರಕ್ಕೆ ಹಿಡಿಯಲು ಭರ್ಜರಿ ಪ್ಲ್ಯಾನ್‌ ಮಾಡ್ತಿದೆ. ರಾಜ್ಯದಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಹೆಚ್ಚಿನ ಪ್ರಚಾರ ನಡೆಸಿದಂತೆ ಮಧ್ಯ ಪ್ರದೇಶದಲ್ಲೂ ‘ಕೈ’ ಪಕ್ಷದ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ಚಾಲನೆ ನೀಡಿದ್ದಾರೆ.

ಸೋಮವಾರ ಮಧ್ಯಪ್ರದೇಶದ ಜಬಲ್‌ಪುರಕ್ಕೆ ಆಗಮಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಲ್ಲಿಂದಲೇ ರ‍್ಯಾಲಿಯೊಂದಿಗೆ ರಾಜ್ಯ ವಿಧಾನಸಭೆ ಚುನಾವಣೆಗೆ ಪಕ್ಷದ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ವರ್ಷಾಂತ್ಯಕ್ಕೆ ಮಧ್ಯ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

Tap to resize

Latest Videos

ಇದನ್ನು ಓದಿ: ಮುಳುಗುವ ಪರಿಸ್ಥಿತಿಯಲ್ಲಿದ್ದ ಕಾಂಗ್ರೆಸ್‌ ‘ಕೈ’ ಹಿಡಿದ ಕರ್ನಾಟಕ ಮತದಾರ: ಲೋಕಸಭೆ ಚುನಾವಣೆಗೂ ಬೂಸ್ಟರ್ ಡೋಸ್‌!

ಜಬಲ್‌ಪುರ ನಗರದ ಗ್ವಾರಿಘಾಟ್‌ನಲ್ಲಿ ಪ್ರಿಯಾಂಕಾ ಗಾಂಧಿ ನರ್ಮದಾ ನದಿಯಲ್ಲಿ ಪೂಜೆ ನೆರವೇರಿಸುವ ಮೂಲಕ ಪ್ರಚಾರ ಆರಂಭಿಸಿದ್ದಾರೆ. ಅವರೊಂದಿಗೆ ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಿಎಂ ಕಮಲ್ ನಾಥ್, ಪಕ್ಷದ ರಾಜ್ಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೆ.ಪಿ ಅಗರವಾಲ್ ಮತ್ತು ರಾಜ್ಯಸಭಾ ಸಂಸದ ವಿವೇಕ್ ತಂಖಾ ಇದ್ದರು. ಇನ್ನು, ಸ್ಥಳೀಯ ಶಾಸಕ ತರುಣ್ ಭಾನೋಟ್ ಅವರು ಪ್ರಿಯಾಂಕಾ ಗಾಂಧಿ ವಾದ್ರಾಗೆ ಗಣೇಶ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮಧ್ಯಪ್ರದೇಶದ ಜೀವನಾಡಿ ಎನಿಸಿರುವ ನರ್ಮದಾವನ್ನು ಸ್ವಚ್ಛವಾಗಿಡಲು ಸಹ ಕಾಂಗ್ರೆಸ್‌ ನಾಯಕರು ಈ ವೇಳೆ ಪಣ ತೊಟ್ಟಿದ್ದಾರೆ. ಜಬಲ್ಪುರ್ ಮಹಾಕೋಶಲ್ ಪ್ರದೇಶದ ಮಧ್ಯ ಭಾಗದಲ್ಲಿದ್ದು, ಇದು ಗಮನಾರ್ಹ ಸಂಖ್ಯೆಯ ಬುಡಕಟ್ಟು ಮತದಾರರನ್ನು ಹೊಂದಿದೆ. 2018 ರ ಅಸೆಂಬ್ಲಿ ಚುನಾವಣೆಯಲ್ಲಿ, ಈ ಭಾಗದಲ್ಲಿ 13 ಪರಿಶಿಷ್ಟ ಪಂಗಡದ ಮೀಸಲು ಸ್ಥಾನಗಳಲ್ಲಿ 11 ರಲ್ಲಿ ಕಾಂಗ್ರೆಸ್ ಗೆದ್ದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಉಳಿದ ಎರಡನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: Karnataka Election Result 2023: ಸರಳತೆ ಮೆರೆದ ರಾಹುಲ್‌, ಪ್ರಿಯಾಂಕಾ ಗಾಂಧಿಗೆ ಜೈ ಎಂದ ಕರ್ನಾಟಕ ಮತದಾರ

ಇನ್ನೊಂದೆಡೆ, ಶಾಹಿದ್ ಸ್ಮಾರಕದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಮೊದಲು, ಪ್ರಿಯಾಂಕಾ ಗಾಂಧಿ ಅವರು ಮೊಘಲರ ವಿರುದ್ಧ ಹೋರಾಡಿ ಹುತಾತ್ಮರಾದ ರಾಣಿ ದುರ್ಗಾವತಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಜಬಲ್‌ಪುರ ಮೇಯರ್ ಮತ್ತು ಕಾಂಗ್ರೆಸ್‌ನ ನಗರ ಮುಖ್ಯಸ್ಥ ಜಗತ್ ಬಹದ್ದೂರ್ ಈ ಹಿಂದೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದರು. ಈ ರ‍್ಯಾಲಿಯಲ್ಲಿ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದೂ ಅವರು ಹೇಳಿದರು.

“8 ಜಿಲ್ಲೆಗಳನ್ನು ಹೊಂದಿರುವ ಮಹಾಕೋಶಲ್ ಪ್ರದೇಶ ಅಥವಾ ಜಬಲ್‌ಪುರ ವಿಭಾಗದ ಜನರು ಬಿಜೆಪಿಯಿಂದ ನಿರ್ಲಕ್ಷಿಸಲ್ಪಟ್ಟಿದ್ದಾರೆ ಎಂದು ಭಾವಿಸುತ್ತಾರೆ. ನಾವು ಪ್ರದೇಶದಲ್ಲಿ (ಕಳೆದ ಬಾರಿ) ಉತ್ತಮವಾಗಿ ಕಾರ್ಯನಿರ್ವಹಿಸಿದ್ದೇವೆ. ಈ ಬಾರಿ ನಾವು ಚುನಾವಣೆಯನ್ನು ಸ್ವೀಪ್ ಮಾಡಲಿದ್ದೇವೆ’’ ಎಂದೂ ಅವರು ಹೇಳಿದರು.

ಇದನ್ನೂ ಓದಿ: ತೆಲಂಗಾಣದ ಮೇದಕ್‌ನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ? ಇಂದಿರಾ ಗಾಂಧಿ ಗೆದ್ದಿದ್ದ ಕ್ಷೇತ್ರದಿಂದ ಮೊಮ್ಮಗಳು?

click me!