ಹುಲ್ಲಲ್ಲಾ ಹಾವು... ಹಾವು ತಿನ್ತಿರುವ ಜಿಂಕೆ :IFS ಅಧಿಕಾರಿಗಳನ್ನೆ ದಂಗುಬಡಿಸಿದ Viral Video

By Anusha Kb  |  First Published Jun 12, 2023, 12:31 PM IST

ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಕಂದು ಜಿಂಕೆಯೊಂದು ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿಯುತ್ತಿರುವ ದೃಶ್ಯ ಸೆರೆ ಆಗಿದ್ದು, ನಮ್ಮ ಕಣ್ಣನ್ನೇ ನಂಬದಂತೆ ಮಾಡಿದೆ. 


ನಾವು ಪಠ್ಯಗಳಲ್ಲಿ ಓದಿ ತಿಳಿದಂತೆ, ನಿಜವಾಗಿಯೂ ಇದುವರೆಗೆ ನೋಡಿದಂತೆ ಜಿಂಕೆಗಳು ಶುದ್ಧ ಸಸ್ಯಹಾರಿ ಪ್ರಾಣಿಗಳು, ಕಾಡುಗಳಲ್ಲಿ ಹಸಿರು ಹುಲ್ಲನ್ನು ಗಿಡ ಪೊದೆಗಳಲ್ಲಿ ಬೆಳೆದ ಹಸಿರು ಚಿಗುರೆಲೆಗಳನ್ನು ತಿಂದು ಇವುಗಳು ಸ್ವಚ್ಛಂದವಾಗಿ ಓಡಾಡುತ್ತಿರುತ್ತವೆ. ಆದರೆ ಇವುಗಳು ಮಾಂಸಾಹಾರ ತಿನ್ನುತ್ತವೆ ಎಂದರೆ ನಿಮಗೆ ಅಚ್ಚರಿಯಾಗಬಹುದು ಜೊತೆಗೆ ನಿಮಗೇನು ತಲೆಕಟ್ಟಿರಬೇಕು ಎಂದು ನೀವು ಬೈಯ್ಯಲು ಶುರು ಮಾಡಬಹುದು. ಆದರೆ ಇಲ್ಲೊಂದು ವೀಡಿಯೋ ವೈರಲ್ ಆಗಿದ್ದು, ಅದರಲ್ಲಿ ಕಂದು ಜಿಂಕೆಯೊಂದು ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿಯುತ್ತಿರುವ ದೃಶ್ಯ ಸೆರೆ ಆಗಿದ್ದು, ನಮ್ಮ ಕಣ್ಣನ್ನೇ ನಂಬದಂತೆ ಮಾಡಿದೆ. 

@TheFigen_ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನಾನು ಜಿಂಕೆಯೊಂದು ಹಾವನ್ನು ತಿನ್ನುತ್ತಿರುವುದನ್ನು ಮೊದಲ ಬಾರಿ ನೋಡುತ್ತಿದ್ದೇನೆ. ಇವುಗಳಿಗೆ ಹುಲ್ಲು ನೀಡುತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 21 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಹಾವನ್ನು ಜಿಂಕೆ ಬಬಲ್‌ಗಮ್ ತರ ಜಗಿಯುವುದನ್ನು ಕಾಣಬಹುದಾಗಿದೆ. ಈ ವೀಡಿಯೋ ನೋಡಿದ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

Latest Videos

undefined

ಅಪರೂಪದ ಅಲ್ಬಿನೋ ಜಿಂಕೆ ಪೋಟೋ ಸೆರೆ ಹಿಡಿದ ಎಂ.ಬಿ.ಪಾಟೀಲ್ ಮಗ ಧ್ರುವ ಪಾಟೀಲ್

ಇತ್ತ ಈ ವೀಡಿಯೋ ನೋಡಿದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಕೂಡ ಪ್ರತಿಕ್ರಿಯಿಸಿದ್ದು, ಇದು ಗೊಂದಲಕ್ಕೊಳಗಾದ ಜಿಂಕೆಯಂತೆ ತೋರುತ್ತಿದೆ. ಶಾಲೆಯಲ್ಲಿ ಪರಿಸರ ವಿಜ್ಞಾನವನ್ನು ಅಧ್ಯಯನ ಮಾಡಿಲ್ಲವೇ ಎಂದು ಕೇಳಿದ್ದಾರೆ. ಈ ವೀಡಿಯೋ ನೋಡಿ ನೆಟ್ಟಿಗರರು ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಂಕೆಗೆ ಬರೀ ಹುಲ್ಲು ತಿಂದು ಬೇಸರಗೊಂಡಿರಬೇಕು. ಹೊಸದೇನಾದರೂ ಟ್ರೈ ಮಾಡೋಣ ಅಂತ ಹೀಗೆ ಮಾಡ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಜಿಂಕೆ ಇದು ಒಣ ಹುಲ್ಲೆಂದು ಭಾವಿಸಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಬಹುಶಃ ಪ್ರೋಟೀನ್ ಕೊರತೆಯು ಜಿಂಕೆಗೆ ಆಕಸ್ಮಿಕವಾಗಿ ಕಂಡುಕೊಂಡ ಸತ್ತ ಹಾವನ್ನು ತಿನ್ನುವ ಪ್ರವೃತ್ತಿಯನ್ನು ಸೃಷ್ಟಿಸಿರಬಹುದು. ಜೀವ ವೈವಿಧ್ಯದ ವೈಚಿತ್ರವನ್ನು ಇದು ಹೀಗೆ ಎಂದು ಯಾರಿಗೂ ಹೇಳಲಾಗದು. ಏಕೆಂದರೆ ಅರಣ್ಯ ಸೇವೆಯಲ್ಲಿ ಇರುವವರು ಕೂಡ 24X7 ವನ್ಯಜೀವಿಗಳ ಒಡನಾಟದಲ್ಲಿ ಅವರಿರುವ ಪ್ರದೇಶದಲ್ಲಿ ಇರಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದುವರೆಗೆ ನಾನು ಇಂತಹ ದೃಶ್ಯವನ್ನು ಯಾವತ್ತು ನೋಡಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಿನಿಮಾದ ಕ್ಲೈಮ್ಯಾಕ್ಸ್ ಮೀರಿಸ್ತಿದೆ ಈ ದೃಶ್ಯ: ಮೊಸಳೆಯಿಂದ ಜಿಂಕೆ ಗ್ರೇಟ್ ಎಸ್ಕೇಪ್

ಮತ್ತೊಬ್ಬರು ಇನ್ನು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಜಿಂಕೆ ಸಸ್ಯಾಹಾರಿಯ ಮಾಂಸಹಾರಿಯ( herbivorous or Omnivorous) ಎಂದು ಪ್ರಶ್ನೆ ಕೇಳಿದರೆ ನಾನು ಗೊಂದಲಕ್ಕೊಗಾಗಬಹುದು ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.  ಒಟ್ಟಿನಲ್ಲಿ ಈ ವೀಡಿಯೋ ಜೀವ ವೈವಿಧ್ಯತೆಯ ವೈಚಿತ್ರ್ಯವನ್ನು ತೆರೆದಿಟ್ಟಿದ್ದು, ಈ ವೀಡಿಯೋವನ್ನು 10 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆದರೆ ಈ ದೃಶ್ಯ ಎಲ್ಲಿ ಸೆರೆ ಆಗಿದ್ದು ಎಂಬ ಮಾಹಿತಿ ಇಲ್ಲ.

Seems a confused, disoriented deer. Didn’t study ecology in school !! https://t.co/Sn1honNBnC

— Parveen Kaswan, IFS (@ParveenKaswan)

 

click me!