ಮದುವೆಯಾಗಿ ಮೊದಲ ಬಾರಿ ಊರಿಗೆ ಬಂದಿದ್ದ ಅಳಿಯನನ್ನ ಕೊಂದೇ ಬಿಟ್ರು!

Published : Aug 27, 2025, 09:37 AM IST
friendship marriage rising trend urban youth india

ಸಾರಾಂಶ

ಪ್ರೇಮ ವಿವಾಹದ ಬಳಿಕ ಊರಿಗೆ ಬಂದಿದ್ದ ಅಳಿಯನನ್ನು ಪತ್ನಿಯ ಕುಟುಂಬಸ್ಥರು ಥಳಿಸಿ ಕೊ*ಲೆ ಮಾಡಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿ, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಗ್ವಾಲಿಯರ್: ಮದುವೆಯಾಗಿ ಮೊದಲ ಬಾರಿ ಊರಿಗೆ ಬಂದಿದ್ದ ಅಳಿಯನನ್ನು (Son In Law) ಕೊ*ಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (Gwalior,  Madhya Pradesh) ನಡೆದಿದೆ. ಯುವಕನನ್ನು ಹುಡುಗಿಯ ಕುಟುಂಬಸ್ಥರು ಥಳಿಸಿ ಕೊಂದಿದ್ದಾರೆ. ಕುಟುಂಬಸ್ಥರ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದು (Love Marriage) ಆ ಯುವಕ ಮಾಡಿದ ತಪ್ಪಾಗಿತ್ತು. ಮರ್ಯದಾ ಹ*ತ್ಯೆಯಿಂದಾಗಿ (Honor Killing) ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜನರು ಹೊರಗೆ ಬರಲು ಹೆದರುವಂತಾಗಿದೆ. ಈ ಮರ್ಯದಾ ಹ*ತ್ಯೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಒಟ್ಟು 12 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬೆಳಗಧ್ ಪೊಲೀಸ್ ಠಾಣಾ ವ್ಯಾಪ್ತಿಯ ಹರ್ಸಿ ಗ್ರಾಮದಲ್ಲಿ ನಡೆದಿದೆ. ಓಂ ಪ್ರಕಾಶ್ ಬಾಥಮ್ ಕೊ*ಲೆಯಾದ ಯುವಕ. ಒಂದು ವರ್ಷದ ಹಿಂದೆ ತನ್ನದೇ ಗ್ರಾಮದ ಮೇಲ್ಜಾತಿಯ ಶಿವಾನಿ ಝಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದನು. ಮದುವೆ ಬಳಿಕ ಓಂಪ್ರಕಾಶ್ ಮತ್ತು ಶಿವಾನಿ ಜೊತೆಯಾಗಿ ದಾಬ್ರಾ ಎಂಬಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಮದುವೆ ನಂತರ ಓಂಪ್ರಕಾಶ್ ಮತ್ತು ಶಿವಾನಿ ಗ್ರಾಮಕ್ಕೆ ಬಂದಿರಲಿಲ್ಲ.

ಪತ್ನಿ ಕುಟುಂಬಸ್ಥರಿಂದ ಕೋಲುಗಳಿಂದ ಮಾರಣಾಂತಿಕ ಹಲ್ಲೆ

ಮದುವೆಯಾದ ಒಂದು ವರ್ಷದ ಬಳಿಕ ಅಂದ್ರೆ ಆಗಸ್ಟ್ 19ರಂದು ಓಂಪ್ರಕಾಶ್ ಗ್ರಾಮಕ್ಕೆ ಬಂದಿದ್ದನು. ಈ ವಿಷಯ ತಿಳಿದ ಶಿವಾನಿ ಕುಟುಂಬ ಕೆರಳಿ ಕೆಂಡವಾಗಿತ್ತು. ಶಿವಾನಿ ತಂದೆ ದ್ವಾರಿಕಾ ಅಲಿಯಾಸ್ ಬಂಟಿ ಜಾ, ಸೋದರ ರಾಜು ಜಾ ಮತ್ತು ತಾಯಿ ಉಮಾ ಜಾ ಮತ್ತು ಸ್ಥಳೀಯ ನಿವಾಸಿ ಸಂದೀಪ್ ಶರ್ಮಾ ಎಲ್ಲರೂ ಊರಿಗೆ ಬಂದಿದ್ದ ಓಂ ಪ್ರಕಾಶ್ ಮೇಲೆ ಕೋಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓಂ ಪ್ರಕಾಶ್ ಅವರನನ್ನು ಗ್ವಾಲಿಯರ್ ನಗರದ ಜಯರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಓಂಪ್ರಕಾಶ್ ಆಸ್ಪತ್ರೆಗೆ ದಾಖಲಾದ ಆರು ದಿನದ ನಂತರ ಸಾವನ್ನಪ್ಪಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ್ರು ಓಂಪ್ರಕಾಶ್

ನನ್ನ ತಂದೆ, ಸೋದರ ಮತ್ತು ತಾಯಿಯೇ ಗಂಡನ ಮೇಲೆ ಕೋಲುಗಳಿಂದ ಹೊಡೆದು ಕೊಂದಿದ್ದಾರೆ. ನನ್ನ ಮುಂದೆಯೇ ಗಂಡನನ್ನು ಕೊ*ಲೆ ಮಾಡಲಾಯ್ತು. ನನ್ನ ಪತಿಯನ್ನು ಕೊಂದವರನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಿವಾನಿ ಜಾ ಆಗ್ರಹಿಸಿದ್ದಾರೆ. ಮೃತ ಓಂಪ್ರಕಾಶ್ ದಲಿತ ಸಮುದಾಯಕ್ಕೆ ಸೇರಿದ್ದರು. ಇದರಿಂದ ಶಿವಾನಿ ಕುಟುಂಬಸ್ಥರು ಪ್ರೇಮವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:  ರಸ್ತೆ ದಾಟುತ್ತಿದ್ದ ಯುವತಿಯ ಸ್ಕರ್ಟ್ ಎಳೆದ ಬೈಕ್ ಸವಾರನ ವಿಡಿಯೋ ವೈರಲ್, ಘಟನೆ ನಂತ್ರದ  ವಿಡಿಯೋ ಶೇರ್  ಮಾಡಿಕೊಂಡ ಪೊಲೀಸರು

ಮೂವರ ಬಂಧನ, ಎಫ್‌ಐಆರ್ ದಾಖಲು

ಇನ್ನು ಓಂಪ್ರಕಾಶ್ ತಾಯಿ ಮಾತನಾಡಿ, ನನ್ನ ಮಗನ ಪ್ರಾಣ ತೆಗೆದವರನ್ನು ಗಲ್ಲಿಗೇರಿಸಬೇಕು. ಶಿವಾನಿ ಮತ್ತು ಮಗ ಇಬ್ಬರು ಪರಸ್ಪರರ ಒಪ್ಪಿಗೆ ಮೇರೆಹೆ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗನನ್ನು ಕೊಲ್ಲಲಾಗಿದೆ ಎಂದು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದ್ವಾರಿಕಾ, ಉಮಾ ಮತ್ತು ರಾಜು ಎಂಬವರನ್ನು ಬಂಧಿಸಿದ್ದಾರೆ. ಮೃತನ ಪತ್ನಿ ಶಿವಾನಿ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಮೂವರನ್ನು ಬಂಧಿಸಲಾಗಿದ್ದು, ಇನ್ನುಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮದ್ವೆಯಾಗಿದ್ರೂ ಸಂಬಂಧಿ ಜೊತೆ ಅಕ್ರಮ ಸಂಬಂಧ; ಲಾಡ್ಜ್‌ಗೆ ಕರೆಸಿ ಬಾಯಿಗೆ ಸ್ಪೋಟಕ ತುರುಕಿ ಕೊಂದ ಪ್ರೇಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್