
ಭೋಪಾಲ್(ಡಿ.19) ನನಗೆ ಅವಕಾಶ ನೀಡಿದರೆ ಬೆಳಗಾವಿ ಸುವರ್ಣ ಸೌಧದಲ್ಲಿರುವ ವೀರ್ ಸಾವರ್ಕರ್ ಫೋಟೋವನ್ನು ತೆಗೆದುಹಾಕುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಡಿದ ಮಾತು ಕರ್ನಾಟಕದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಬಳಿಕ ಸಾವರ್ಕರ್ ಪರ ವಿರೋಧ ಪ್ರತಿಭಟನೆಗಳು ನಡೆದಿತ್ತು. ಇದೀಗ ಮಧ್ಯಪ್ರದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಮಧ್ಯಪ್ರದೇಶದಲ್ಲಿ ನೂತನ ಸರ್ಕಾರ ರಚಿಸಿರುವ ಮೋಹನ್ ಯಾದವ್ ನೇತೃತ್ವದ ಬಿಜೆಪಿ, ವಿಧಾನಸಭೆಯಲ್ಲಿದ್ದ ಜವಾಹರ್‌ಲಾಲ್ ನೆಹರೂ ಫೋಟೋವನ್ನು ತೆಗೆದು ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋವನ್ನು ಹಾಕಿದೆ. ಇದು ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ.
ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ತೆಗೆದುಕೊಂಡ ಈ ನಿರ್ಧಾರ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಮಾಜಿ ಪ್ರಧಾನಿ ಫೋಟೋವನ್ನು ತೆಗೆದು ಹಾಕಿ, ಅಂಬೇಡ್ಕರ್ ಫೋಟೋ ಹಾಕಿರುವುದಕ್ಕೆ ಕಾಂಗ್ರೆಸ್ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. ಮಧ್ಯಪ್ರದೇಶ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯನ ನಾಯಕ ದಿಗ್ವಿಜಯ್ ಸಿಂಗ್ ಪುತ್ರ ಜಯವರ್ಧನ್ ಸಿಂಗ್ ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವೀರ್ ಸಾವರ್ಕರ್‌ಗೆ ಯಾಕಿಷ್ಟು ವಿರೋಧ..? ಅವರು ಗಾಂಧೀಜಿ ಹತ್ಯೆ ಆರೋಪಿಯಾಗಿದ್ರಾ ?
ಭಾರತದ ಸಂವಿಧಾನದ ಅಡಿಪಾಯ ಗಟ್ಟಿಯಾಗಿದೆ ಅಂದರೆ ಅದಕ್ಕೆ ಜವಾಹರ್ ಲಾಲ್ ನೆಹರೂ ಕಾರಣ. ಆದರೆ ಬಿಜೆಪಿ ನೆಹರೂ ಫೋಟೋವನ್ನು ತೆಗೆದುಹಾಕಿದೆ. ಇದು ಅತೀ ದೊಡ್ಡ ತಪ್ಪು. ಈ ಕುರಿತು ಸಭಾಪತಿಗಳಿಗೆ ದೂರು ನೀಡುತ್ತೇವೆ ಎಂದು ಜಯವರ್ಧನ್ ಸಿಂಗ್ ಹೇಳಿದ್ದಾರೆ. ಇತ್ತ ವಿರೋಧ ಪಕ್ಷದ ನಾಯಕ ಉಮಂಗ್ ಸಿಂಗ್ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಸದ್ಯ ನೆಹರೂ ಪೋಟೋ ತೆಗೆದು ಅಂಬೇಡ್ಕರ್ ಫೋಟೋ ಹಾಕಿದೆ. ಕೆಲ ದಿನಗಳ ಬಳಿಕ ಅಂಬೇಡ್ಕರ್ ಫೋಟೋವನ್ನು ತೆಗೆದು ನಾಥುರಾಮ್ ಗೋಡ್ಸ್ ಫೋಟೋ ಹಾಕಲಿದೆ. ಬಿಜೆಪಿ ನೆಹರೂ ಹಾಗೂ ಕಾಂಗ್ರೆಸ್ ವೈಚಾರಿಕತೆಯನ್ನು ಅಳಿಸಲು ಪ್ರಯತ್ನಿಸುತ್ತಿದೆ ಎಂದು ಉಮಂಗ್ ಸಿಂಗ್ ಹೇಳಿದ್ದಾರೆ.
ಮಧ್ಯಪ್ರೇದಶ ನೂತನ ಸಿಎಂ ಮೋಹನ್ ಯಾದವ್ ಈಗಾಗಲೇ ಹಲವು ಮಹತ್ವದ ನಿರ್ಧಾರ ತೆಗೆದುಕೊಂಡು ಸಂಚಲನ ಸೃಷ್ಟಿಸಿದ್ದಾರೆ. ಬಿಜಪಿ ನಾಯಕ ಕೈಕತ್ತರಿಸಿದ ಆರೋಪಿ ಮನೆಯನ್ನು ಬುಲ್ಡೋಜರ್ ಹತ್ತಿಸಿ ಧ್ವಂಸ ಮಾಡಲಾಗಿದೆ. ಇನ್ನು ಸಾರ್ವಜನಿಕ ಪ್ರದೇಶದಲ್ಲಿ ಧಾರ್ಮಿಕ ಧ್ವನಿವರ್ಧ ನಿಷೇಧ ಸೇರಿದಂತೆ ಕ್ರಾಂತಿಕಾರಿಕ ನಿರ್ಧಾರ ಕೈಗೊಂಡಿದ್ದರು. ಇದೀಗ ನೆಹರೂ ಫೋಟೋ ಕೂಡ ಬದಲಾಗಿರುವುದು ಕಾಂಗ್ರೆಸ್ ಆಕ್ರೋಶದ ಜ್ವಾಲೆ ಹೆಚ್ಚಿಸಿದೆ.
ಸಾವರ್ಕರ್ ಫೋಟೋ ತೆಗೆಸುವ ಪ್ರಿಯಾಂಕ್ ಹೇಳಿಕೆಗೆ ಸ್ಪೀಕರ್ ಬೇಸರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ