ಮಾಧುರಿ ದೀಕ್ಷಿತ್ ಸೆಕೆಂಡ್ ಗ್ರೇಡ್ ನಟಿ ಎಂದ ಕಾಂಗ್ರೆಸ್ ನಾಯಕ, ಒಂದೇ ತಿಂಗಳಲ್ಲಿ ಮತ್ತೊಂದು ವಿವಾದ

ರೋಹಿತ್ ಶರ್ಮಾ ಕುರಿತು ಕಾಂಗ್ರೆಸ್ ನಾಯಕಿ ಬಾಡಿ ಶೇಮಿಂಗ್ ಮಾಡಿ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕುರಿತು ಕಾಂಗ್ರೆಸ್ ನಾಯಕ ನಾಲಗೆ ಹರಿಬಿಟ್ಟಿದ್ದಾನೆ. ಮಾಧುರಿ ದೀಕ್ಷಿತ್ ಸಕೆಂಡ್ ಗ್ರೇಡ್ ನಟಿ ಎಂದು ಕರೆದಿದ್ದಾರೆ. ಇಷ್ಟೇ ಅಲ್ಲ ಕಾಂಗ್ರೆಸ್ ನಾಯಕನ ಮಾತುಗಳು ಇದೀಗ ಕೋಲಾಹಲ ಸೃಷ್ಟಿಸಿದೆ.

Madhuri Dixit 2nd grade actress says Congress leader after Rohit sharma body shame

ಜೈಪುರ(ಮಾ.13) ಕಾಂಗ್ರೆಸ್ ಇತ್ತೀಚೆಗೆ ರಾಜಕೀಯವನ್ನು ಇತರ ಕ್ಷೇತ್ರಗಳತ್ತ ಕೊಂಡೊಯ್ಯುತ್ತಿದೆ. ತನ್ನದಲ್ಲದ ಕ್ಷೇತ್ರದಲ್ಲಿ ಕಡ್ಡಿಯಾಡಿಸಿ ಕೈಸುಟ್ಟುಕೊಳ್ಳುತ್ತಿದೆ. ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಶಾಮಾ ಮೊಹಮ್ಮದ್, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕುರಿತು ಕಮೆಂಟ್ ಮಾಡಿ ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದರು. ರೋಹಿತ್ ಶರ್ಮಾ ಬಾಡಿ ಶೇಮಿಂಗ್ ಮಾಡಿದ ಶಾಮಾ ಮೊಹಮ್ಮದ್ ಬಳಿಕ ಟ್ವೀಟ್ ಡಿಲೀಟ್ ಮಾಡಿದರೂ ಆಕ್ರೋಶ ತಣ್ಣಗಾಗಿರಲಿಲ್ಲ. ಈ ಘಟನೆ ಬೆನ್ನಲ್ಲೇ ಇದೀಗ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕುರಿತು ಕಾಂಗ್ರೆಸ್ ನಾಯಕ ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಮಾಧುರಿ ದೀಕ್ಷಿತ್ ಎಡನೇ ದರ್ಜೆ ನಟಿ ಎಂದಿದ್ದಾರೆ. ಇಷ್ಟಕ್ಕೆ ಮಾತುಗಳನ್ನು ನಿಲ್ಲಿಸದೆ ಮತ್ತೆ ವಿವಾದ ಸೃಷ್ಟಿಸಿದ್ದಾರೆ.

ರಾಜಸ್ಥಾನ ಕಾಂಗ್ರೆಸ್ ನಾಯಕ ಟಿಕಾ ರಾಮ್ ಜುಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದ ಟಿಕಾ ರಾಮ್ ಜುಲಿ ಒಂದೊಂದೆ ವಿವಾದ ಮೈಮೇಲೇ ಎಳೆದಿದ್ದಾರೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಅಂತಾರಾಷ್ಟ್ರೀಯ ಭಾರತೀಯ ಸಿನಿಮಾ ಪ್ರಶಸ್ತಿ ಸಮಾರಂಭ( (IIFA) ಆಯೋಜನೆಗೊಂಡಿತ್ತು. ಈ ಸಮಾರಂಭಕ್ಕೆ ಬಿಜೆಪಿ ಸರ್ಕಾರ 100 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ಟಿಕಾ ರಾಮ್ ಆರೋಪಿಸಿದ್ದಾರೆ.  ಇಷ್ಟು ದುಬಾರಿ ಮೊತ್ತವನ್ನು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತು. ಆದರೆ ರಾಜಸ್ಥಾನ ಸರ್ಕಾರ 100 ಕೋಟಿ ರೂಪಾಯಿಯಲ್ಲಿ ಸಿನಿಮಾ ಜಾತ್ರೆ ಮಾಡಿತು. ಇಷ್ಟು ಖರ್ಚು ಮಾಡಿದ ಬಳಿಕ ಈ ಕಾರ್ಯಕ್ರಮಕ್ಕೆ ಪ್ರಮುಖ ನಟರು ಬರಲೇ ಇಲ್ಲ. ಶಾರುಖ್ ಖಾನ್ ಈ ಕಾರ್ಯಕ್ರಮಕ್ಕೆ ಬಂದಿದ್ರಾ? ಯಾವ ಪ್ರಮುಖ ನಟ ನಟಿಯರು ಅವಾರ್ಡ್ ಸೆರಮನಿಗೆ ಬರಲಿಲ್ಲ ಎಂದು ಟಿಕಾ ರಾಮ್ ಜುಲಿ ಆರೋಪಿಸಿದ್ದಾರೆ.

Latest Videos

ರಾಹುಲ್ ನಾಯಕತ್ವದಲ್ಲಿ 90 ಚುನಾವಣೆ ಸೋಲು, ರೋಹಿತ್ ಪ್ರಶ್ನಿಸಿದ ಕಾಂಗ್ರೆಸ್ ನಾಯಕಿಗೆ ಬಿಜೆಪಿ ಗೂಗ್ಲಿ

ಇದೇ ವೇಳೆ ಕೆಲವರು ಮಾಧುರಿ ದೀಕ್ಷಿತ್ ಆಗಮಿಸಿದ್ದರು ಎಂದಿದ್ದಾರೆ. ಇದಕ್ಕೆ ಉತ್ತರಿಸಿದ ಟಿಕಾ ರಾಮ್ ಜುಲಿ, ಮಾಧುರಿ ದೀಕ್ಷಿತ್ ಎರಡನೇ ದರ್ಜೆ ನಟಿ. ಆಕೆಯ ಸಮಯ ಮುಗಿದಿದೆ. ಯಾವುದೇ ಬಿಗ್ ಸ್ಟಾರ್ಸ್ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದಿದ್ದಾರೆ. ನಾಯಕನ ಈ ಮಾತುಗಳು ಇದೀಗ ವಿವಾದಕ್ಕೆ ಕಾರಣವಾಗಿದೆ. ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ನಟಿಯರ ಪೈಕಿ ಮಾಧುರಿ ದೀಕ್ಷಿತ್ ಮುಂಚೂಣಿಯಲ್ಲಿದ್ದಾರೆ. ಧಕ್ ಧಕ್ ಬೆಡಗಿ, ಸೌಂದರ್ದ ಖನಿ ಎಂದೇ ಜನಪ್ರಿಯರಾಗಿರುವ ಮಾಧುರಿ ದೀಕ್ಷಿತ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಟಿಕಾ ರಾಮ್, ನಟಿಯನ್ನು ಸೆಕೆಂಡ್ ಗ್ರೇಡ್ ನಟಿ ಎಂದು ಕರೆದಿದ್ದಾರೆ. 

ಕಾಂಗ್ರೆಸ್ ನಾಯಕ ಈ ಮಾತಗಳಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ.  ಮಾಧರಿ ದೀಕ್ಷಿತ್ ಸೆಕೆಂಡ್ ಗ್ರೇಡ್ ನಟಿ ಎಂದು ಕಾಂಗ್ರೆಸ್ ಹೇಳುತ್ತಿದೆ. ಕಾಂಗ್ರೆಸ್ ಲಾಜಿಕ್ ನೋಡಿದರೆ ರಾಹುಲ್ ಗಾಂಧಿ ಸಮಯ ಕೂಡ ಮುಗಿದಿದೆ. ಹಾಗಾದರೆ ರಾಹುಲ್ ಗಾಂಧಿ ಯಾವ ಗ್ರೇಡ್ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.

 

नेता प्रतिपक्ष टीकाराम जूली का शिक्षा मंत्री मदन दिलावर पर तंज।
जूली ने कहा- "हमारे शिक्षा मंत्री स्कूल बंद करने में लगे हुए हैं। pic.twitter.com/1wc4eCw5tr

— Dinesh Manzu Rawlani (@ManzuDinesh)

 

ಕಾಂಗ್ರೆಸ್ ಯಾವತ್ತೂ ಹೀಗೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಏನು ಬೇಕಾದರು ಮಾಡುತ್ತೆ. ತುರ್ತು ಪರಿಸ್ಥಿತಿ ತಂದಿದ್ದು, ತಮ್ಮ ರಾಜಕೀಯಕೋಸ್ಕರ, ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಯಾವತ್ತೂ ಬದಲಾಗಿಲ್ಲ. ಮೊನ್ನೆ ರೋಹಿತ್ ಶರ್ಮಾ ಅನ್‌ಫಿಟ್, ಫ್ಯಾಟಿ ಎಂದ್ರು, ಇದೀಗ ಮಾಧುರಿ ದೀಕ್ಷಿತ್ ಸೆಕೆಂಡ್ ಗ್ರೇಡ್ ಅಂತಿದ್ದಾರೆ. ಇದೇ ಕಾರಣಕ್ಕೆ ಕಾಂಗ್ರೆಸ್ ಈ ಸ್ಥಿತಿಯಲ್ಲಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. 

ವಿವಾಹಿತ ಮಹಿಳೆಯರಿಗೆ ಮಾಧುರಿ ದೀಕ್ಷಿತ್ ಸ್ಟೈಲಿಶ್ ಪಾರ್ಟಿ ಧಿರಿಸುಗಳು
 

click me!