ಅಮೆರಿಕದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಕ್ರಿಪ್ಟೋಕರೆನ್ಸಿ ವಂಚಕ ಲಿಥುವೇನಿಯಾದ ಅಲೆಕ್ಸೆಜ್ ಬೆಸಿಯೊಕೊವ್‌ನನ್ನು ಕೇರಳದಲ್ಲಿ ಬಂಧಿಸಲಾಗಿದೆ. ಈತ ಗ್ಯಾರಂಟೆಕ್ಸ್ ಮೂಲಕ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದ.
ನವದೆಹಲಿ: ಬಹುಕೋಟಿ ಮೊತ್ತದ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ತನಿಖಾ ಸಂಸ್ಥೆಗಳಿಗೆ ಬೇಕಾಗಿದ್ದ ಲಿಥುವೇನಿಯಾ ಮೂಲದ ವ್ಯಕ್ತಿಯನ್ನು 'ದೇವರ ನಾಡು' ಕೇರಳದಲ್ಲಿ ಪೊಲೀಸರು ಬಂಧಿಸಿದ್ದಾರೆ. ಲಿಥುವೇನಿಯಾದ ಅಲೆಕ್ಸೆಜ್ ಬೆಸಿಯೊಕೊವ್ ಬಂಧಿತ ಆರೋಪಿ. ಈತ ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಮಾದಕವಸ್ತು ವಹಿವಾಟುಗಳಂತಹ ಅಪರಾಧ ಚಟುವಟಿಕೆಗಳ ಆದಾಯವನ್ನು ಅಕ್ರಮವಾಗಿ ವರ್ಗಾಯಿಸಲು ಗ್ಯಾರಂಟೆಕ್ಸ್' ಎಂಬ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವನ್ನು ಸ್ಥಾಪಿಸಿದ್ದ ಎಂಬ ಆರೋಪವಿದೆ.
ಈತ ದೇಶ ಬಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದಾಗ ಬಂಧನ
ಕೇರಳದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಈತ ದೇಶ ಬಿಟ್ಟು ಓಡಿ ಹೋಗಲು ಯತ್ನಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಕೇರಳ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಮೆರಿಕಾದ ಸೀಕ್ರೆಟ್ ಸರ್ವಿಸ್ ದಾಖಲೆಗಳ ಪ್ರಕಾರ, ಬಂಧಿತ ಆರೋಪಿ ಅಲೆಕ್ಸೆಜ್ ಬೆಸ್ಸಿಯೊಕೊವ್ ಸುಮಾರು ಆರು ವರ್ಷಗಳ ಕಾಲ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರ ಗ್ಯಾರಂಟೆಕ್ಸ್ ಅನ್ನು ನಿಯಂತ್ರಿಸುತ್ತಾ ವ್ಯವಹಾರ ನಿರ್ವಹಿಸುತ್ತಿದ್ದ ಎಂಬ ಆರೋಪವಿದೆ. ಈ ಗ್ಯಾರಂಟೆಕ್ಸ್ ಸಂಸ್ಥೆಯೂ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳಿಗೆ (ಭಯೋತ್ಪಾದಕ ಸಂಘಟನೆಗಳು ಸೇರಿದಂತೆ) ಕನಿಷ್ಠ $96 ಬಿಲಿಯನ್ (ಭಾರತೀಯ ರೂ. 8 ಲಕ್ಷ ಕೋಟಿಗೂ ಹೆಚ್ಚು) ಹಣವನ್ನು ಕ್ರಿಪ್ಟೋಕರೆನ್ಸಿ ವಹಿವಾಟಿನಲ್ಲಿ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟಿತು ಮತ್ತು ಇದಕ್ಕಾಗಿ ಎಲ್ಲಾ ನಿರ್ಬಂಧಗಳನ್ನು ಉಲ್ಲಂಘಿಸಿದೆ ಎಂದು ತಿಳಿದು ಬಂದಿದೆ.
ಗ್ಯಾರಂಟೆಕ್ಸ್‌ನಿಂದ ಭಾರೀ ಗಳಿಕೆ
ಈ ಗ್ಯಾರಂಟೆಕ್ಸ್ ಕ್ರಿಪ್ಟೋಕರೆನ್ಸಿ ವಿನಿಮಯ ಕೇಂದ್ರವೂ ತನ್ನ ಈ ಕ್ರಿಮಿನಲ್ ಕೆಲಸದಿಂದ ನೂರಾರು ಮಿಲಿಯನ್ ಆದಾಯವನ್ನು ಪಡೆದುಕೊಂಡಿತು ಮತ್ತು ಹ್ಯಾಕಿಂಗ್, ರಾನ್ಸಮ್‌ವೇರ್, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧಗಳನ್ನು ಸುಗಮಗೊಳಿಸಲು ಇದು ಸಹಾಯಕವಾಗಿತ್ತು. ಇದು ಅಮೆರಿಕಾದ ಸಂತ್ರಸ್ತರ ಮೇಲೆ ಗಣನೀಯ ಪರಿಣಾಮ ಬೀರುತ್ತಿದೆ ಎಂದು ಅಮೆರಿಕಾದ ಸೀಕ್ರೆಟ್ ಸರ್ವಿಸ್ ಹೇಳಿದೆ.
ಇದು ಸೈಬರ್ ವಂಚಕರ ತಂತ್ರ; ಉದ್ಯೋಗಾಕಾಂಕ್ಷಿಗಳೇ ಎಚ್ಚರ, ಲಿಂಕ್ಡ್‌ಇನ್‌ನಲ್ಲಿ ಹೇಗೆ ವಂಚಿಸುತ್ತಾರೆ ಗೊತ್ತಾ?
ಈಗ ಕೇರಳದಲ್ಲಿ ಬಂಧಿತನಾಗಿರು ಅಲೆಕ್ಸೆಜ್ ಬೆಸ್ಸಿಯೊಕೊವ್ ಗ್ಯಾರೆಂಟೆಕ್ಸ್‌ನ ಪ್ರಾಥಮಿಕ ತಾಂತ್ರಿಕ ನಿರ್ವಾಹಕನಾಗಿದ್ದ ಮತ್ತು ವೇದಿಕೆಯ ನಿರ್ಣಾಯಕ ಮೂಲಸೌಕರ್ಯವನ್ನು ಪಡೆಯುವುದು ಮತ್ತು ನಿರ್ವಹಿಸುವುದು ಹಾಗೂ ವಹಿವಾಟುಗಳನ್ನು ಪರಿಶೀಲಿಸುವುದು ಮತ್ತು ಅನುಮೋದಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಸ್ ಕೋಡ್‌ನ ಶೀರ್ಷಿಕೆ 18 ಅನ್ನು ಉಲ್ಲಂಘಿಸಿ ಹಣ ವರ್ಗಾವಣೆ ಮಾಡುವ ಪಿತೂರಿ, ಯುಎಸ್ ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆಯನ್ನು ಉಲ್ಲಂಘಿಸುವ ಪಿತೂರಿ ಮತ್ತು ಪರವಾನಗಿ ಪಡೆಯದ ಹಣ ಸೇವೆಗಳ ವ್ಯವಹಾರವನ್ನು ನಡೆಸುವ ಪಿತೂರಿ ಸೇರಿದಂತೆ ಹಲವು ಆರೋಪಗಳ ಮೇಲೆ ಆತ ಅಮೆರಿಕಾಗೆ ಬೇಕಾಗಿದ್ದ. ಹೀಗಾಗಿ 2022ರಲ್ಲಿ ಈತ ಅಮೆರಿಕಾದಲ್ಲಿ ಶಿಕ್ಷೆಗೆ ಗುರಿಯಾಗಿದ್ದ.
ಟ್ರಂಪ್ ಕ್ರಿಪ್ಟೋಗೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಬಿಟ್‌ಕಾಯಿನ್ ಮೈನಿಂಗ್ ಷೇರುಗಳು ಏರಿಕೆ
ಈ ವಾರದ ಆರಂಭದಲ್ಲಿ, ಅಮೆರಿಕದ ಅಧಿಕಾರಿಗಳ ಕೋರಿಕೆಯ ಮೇರೆಗೆ ಭಾರತದ ವಿದೇಶಾಂಗ ಸಚಿವಾಲಯವು ತಾತ್ಕಾಲಿಕ ಬಂಧನ ವಾರಂಟ್ ಅನ್ನು ಸ್ವೀಕರಿಸಿತು. ಇದಾದ ನಂತರ, ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಕೇರಳ ಪೊಲೀಸರ ಜಂಟಿ ಸಹಯೋಗದಲ್ಲಿ ಕೇರಳದ ತಿರುವನಂತಪುರಂನಲ್ಲಿ ಬೆಸ್ಸಿಯೊಕೊನನ್ನು ಬಂಧಿಸಲಾಗಿದೆ.