ಕೋವಿಡ್ ವಿರುದ್ಧ ಭಾರತದ ಬಯೋಲಾಜಿಕಲ್ E ಲಸಿಕೆ ಶೇ.90 ರಷ್ಟು ಪರಿಣಾಮಕಾರಿ!

By Suvarna NewsFirst Published Jun 17, 2021, 5:51 PM IST
Highlights
  • ಮೇಡ್ ಇನ್ ಇಂಡಿಯಾ ಲಸಿಕೆ ಬಯೋಲಾಜಿಕಲ್ ಇ
  • ಕೊರೋನಾ ವಿರುದ್ಧ ಶೇಕಡಾ 90 ರಷ್ಟು ಪರಿಣಾಮಕಾರಿ 
  • ಭಾರತದ ಕೊರೋನಾ ಹೋರಾಟಕ್ಕೆ ಮತ್ತಷ್ಟು ಬಲ

ನವದೆಹಲಿ(ಜೂ.17): ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಸದ್ಯ ಭಾರತದಲ್ಲಿ ಮೇಡ್ ಇನ್ ಇಂಡಿಯಾದ 2 ಲಸಿಕೆಗಳಾದ ಕೋವಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗುತ್ತಿದೆ. ಇದರ ಜೊತೆಗೆ ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ನೀಡಲಾಗುತ್ತಿದೆ. ಇದೀಗ ಮತ್ತೊಂದು ಭಾರತದ ಲಸಿಕೆ ಸಜ್ಜಾಗಿದೆ. ಇದು ಹೈದರಾಬಾದ್ ಮೂಲದ ಬಯೋಲಾಜಿಕಲ್ E ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆ. ಇದು ಶೇಕಡಾ 90 ರಷ್ಟು ಪರಿಣಾಮಕಾರಿ ಅನ್ನೋದು ಬಹಿರಂಗವಾಗಿದೆ.

ಹೊಸ ಲಸಿಕೆ ನೋವಾವಾಕ್ಸ್ ಶೇ.90 ರಷ್ಟು ಪರಿಣಾಮಕಾರಿ: ಕ್ಲಿನಿಕಲ್ ವರದಿ!

ಭಾರತದಲ್ಲಿನ ಕೊರೋನಾ ವಿರುದ್ಧದ ಹೋರಾಟದಲ್ಲಿ ಬಯೋಲಾಜಿಕಲ್ ಇ ಲಸಿಕೆ ಪ್ರಮುಖವಾಗಲಿದೆ. ಇದು ಶೇಕಡಾ 90 ರಷ್ಟು ಪರಿಣಾಮಕಾರಿ ಎಂದು ಭಾರತದ ಕೋವಿಡ್ ಸಲಹಾ ಸಮಿತಿ ಸದಸ್ಯ ಹಾಗೂ ವಿಶ್ವ ಕೊರೋನಾ ವರ್ಕಿಂಗ್ ಕಮಿಟಿ ಮುಖ್ಯಸ್ಥ ಎನ್‌ಕೆ ಆರೋರ ಹೇಳಿದ್ದಾರೆ.

ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಸಂಸ್ಥೆಯ ಲಸಿಕೆಗೆ ಕೋರ್ಬಿವ್ಯಾಕ್ಸ್ ಎಂದು ಹೆಸರಿಡಲಾಗಿದೆ. ಸದ್ಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇಲ್ಲಿಯವರಿಗೆನ ಪ್ರಯೋಗದಲ್ಲಿ ಯಾವುದೇ ಅಡ್ಡ ಪರಿಣಾಮಗಳು ಗೋಚರಿಸಿಲ್ಲ. ಜೊತೆಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಕೋರ್ಬಿವ್ಯಾಕ್ಸ್ ಲಭ್ಯವಾಗಲಿದೆ ಎಂದು ಅರೋರ ಹೇಳಿದ್ದಾರೆ.

ಕೋರ್ಬಿವ್ಯಾಕ್ಸ್, ಅಮೆರಿಕ ನೋವಾಕ್ಸ್ ಲಸಿಕೆಯಷ್ಟೇ ಪರಿಣಾಮಕಾರಿಯಾಗಿದೆ. ನೋವಾಕ್ಸ್ ಶೇಕಡಾ 90ರಷ್ಟು ಪರಿಣಾಮಕಾರಿ ಅನ್ನೋ ಅಧ್ಯಯನ ವರದಿ ಬಹಿರಂಗವಾಗಿದೆ. ಆಕ್ಸ್‌ಫರ್ಡ್‌ನ ನೋವಾಕ್ಸ್ ಲಸಿಕೆಯನ್ನು ಭಾರತದಲ್ಲಿ ಸೀರಂ ಸಂಸ್ಥೆ ಉತ್ಪಾದನೆ ಮಾಡಲಿದೆ ಎಂದು ಆರೋರ ಹೇಳಿದ್ದಾರೆ.

ಕೋವಿಡ್ ಗುಣಮುಖರಿಗೆ ಒಂದು ಡೋಸ್ ಲಸಿಕೆ ಸಾಕು; ಅಧ್ಯಯನ ವರದಿ ಬಹಿರಂಗ!.

ಮೇಡ್ ಇನ್ ಇಂಡಿಯಾ ಕೊರ್ಬಿವ್ಯಾಕ್ಸ್ ಲಸಿಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಎರಡು ಡೋಸ್‌ಗೆ ಕೇವಲ 250 ರೂಪಾಯಿ.  ಇದರ ಜೊತೆಗೆ ಇನ್ನೆರಡು ಲಸಿಕೆಗಳಾದ ಜೈಡಸ್ ಕ್ಯಾಡಿಲಾ ಹಾಗೂ mRNA ಲಸಿಕೆ ಕೂಡ ಅಕ್ಟೋಬರ್- ಸೆಪ್ಟೆಂಬರ್ ತಿಂಗಳಲ್ಲಿ ಲಭ್ಯವಾಗಲಿದೆ ಎಂದು ಅರೋರ ಮಾಹಿತಿ ನೀಡಿದ್ದಾರೆ.

click me!