* ದೆಹಲಿಯಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ
* ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪ್ರತಿಭಟನೆ
* ದೆಹಲಿ ದಂಗೆ ಆರೋಪಿಗಳಿಗೆ ಬೇಲ್, ಜೈಲಿನಿಂದ ರಿಲೀಸ್!
ನವದೆಹಲಿ(ಜೂ.17): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ಆರೋಪಿಗಳಾದ ನತಾಶಾ ನರ್ವಾಲ್, ಆಸಿಫ್ ಇಕ್ಬಾಲ್ ತನ್ಹಾ ಹಾಗೂ ದೇವಾಂಗನಾ ಕಾಲಿತಾ ಈ ಮೂವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಕೋರ್ಟ್ ಆದೇಶದಂತೆ ಇವರನ್ನು ಇಂದು ಗುರುವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಈ ಮೂವರ ಮೇಲೆ UAPA ಹೇರಲಾಗಿದೆ.
ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟ ಆರೋಪ
undefined
ಫೆಬ್ರವರಿ 24, 2020 ರಂದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಹಿಂಸಾಚಾರ ನಡೆದಿತ್ತು. ಇದರಲ್ಲಿ, ಒಂದು ಬಣ ಸಿಎಎಗೆ ಬೆಂಬಲ ಸೂಚಿಸಿದರೆ, ಇನ್ನೊಂದು ಬಣ ವಿರೋಧ ವ್ಯಕ್ತಪಡಿಸಿತ್ತು. ಹಿಂಸಾಚಾರ ಪ್ರಚೋದಿಸುವ ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್ ಜೂನ್ 15 ರಂದು ಕೇಜ್ ಬ್ರೇಕ್ ಅಭಿಯಾನದ ಕಾರ್ಯಕರ್ತೆ ನತಾಶಾ ನರ್ವಾಲ್‌ಗೆ, 50,000 ರೂ. ದಂಡ ವಿಧಿಸಿ ಮೂರು ವಾರಗಳಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅವರ ವಕೀಲರು ತಂದೆಯ ಸಾವಿನ ಆಧಾರದ ಮೇಲೆ ಜಾಮೀನು ಕೋರಿದ್ದರು. ನತಾಶಾ ತಂದೆ ಮಹಾವೀರ್ ನಾರ್ವಾಲ್ ಕೊರೋನಾದಿಂದ ನಿಧನರಾಗಿದ್ದಾರೆ.
ಇತರ ಇಬ್ಬರು ಆರೋಪಿಗಳಿಗೂ ಜಾಮೀನು
ನತಾಶಾ ಹೊರತುಡಪಸಿ ದೆಹಲಿ ಹೈಕೋರ್ಟ್ ಆಸಿಫ್ ಇಕ್ಬಾಲ್ ತನ್ಹಾ ಮತ್ತು ದೇವಂಗನಾ ಕಾಲಿತಾಗೆ ಅವರಿಗೂ ಜಾಮೀನು ನೀಡಿದೆ. ಈ ವೇಳೆ ಕಾನೂನುಬಾಹಿರ ಚಟುವಟಿಕೆಗಳನ್ನು (ತಡೆಗಟ್ಟುವಿಕೆ ಕಾಯ್ದೆ-ಯುಎಪಿಎ) ಅವರ ಮೇಲೆ ಹೇರಲಾಗಿದೆ.
ದೀರ್ಘ ಕಾಲದಿಂದ ನ್ಯಾಯಾಂಗ ಬಂಧನದಲ್ಲಿದ್ದರು
ದೆಹಲಿಯ ಕೋಮು ಗಲಭೆಯಲ್ಲಿ, 53 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಖಾಲಿದ್, ಇಶ್ರತ್ ಜಹಾನ್, ತಾಹಿರ್ ಹುಸೇನ್, ಮೀರನ್ ಹೈದರ್, ನತಾಶಾ ನರ್ವಾಲ್, ದೇವಂಗಾನಾ ಕಲಿತಾ, ಆಸಿಫ್ ಇಕ್ಬಾಲ್ ತನ್ಹಾ ಮತ್ತು ಶಿಫಾ ಉರ್ ರೆಹಮಾನ್ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.