ಜೊಮ್ಯಾಟೋ ಕಚೇರಿ ದುಬಾರಿ ಕಾರು, 6 ರೂ ಪ್ಲಾಟ್‌ಫಾರ್ಮ್ ಫೀನಿಂದ ಖರೀದಿ ಎಂದ ನೆಟ್ಟಿಗರು!

By Chethan Kumar  |  First Published Sep 16, 2024, 8:37 PM IST

ಜೋಮ್ಯಾಟೋ ಕಚೇರಿ ಮುಂದೆ ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಪಾರ್ಕ್ ಮಾಡಿದ ವಿಡಿಯೋ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಎಲ್ಲಾ ಕಾರುಗಳನ್ನು ಡೆಲಿವರಿ ವೇಳೆ ಹಾಕುವ 6 ರೂಪಾಯಿ ಪ್ಲಾಟ್‌ಫಾರ್ಮ್ ಫೀ ನಿಂದ ಖರೀದಿಸಿದ್ದಾರೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
 


ಗುರುಗಾಂವ್(ಸೆ.16) ಡೆಲಿವರಿ ಸ್ಟಾರ್ಟ್ಅಪ್‌ಗಳಾದ ಜೊಮ್ಯಾಟೋ ಹಾಗೂ ಬ್ಲಿಂಕಿಟ್ ಕಚೇರಿ ಮುಂದೆ ಕೋಟಿ ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ಕಾರುಗಳನ್ನು ಪಾರ್ಕ್ ಮಾಡಿದ ವಿಡಿಯೋ ಒಂದು ಹಲವರ ಕುತೂಹಲಕ್ಕೆ ಕಾರಣವಾಗಿದೆ. ಸರಿಸುಮಾರು 5 ಕೋಟಿ ರೂ ಆ್ಯಸ್ಟನ್ ಮಾರ್ಟಿನ್, ಲ್ಯಾಂಬೋರ್ಗಿನಿ, ಬೆಂಜ್, ಫೆರಾರಿ ಸೇರಿದಂತೆ ಹಲವು ಕಾರುಗಳು ಕಚೇರಿ ಮುಂದೆ ಪಾರ್ಕ್ ಮಾಡಲಾಗಿದೆ. ಇದು ಕಾರುಗಳು ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಅವರ ಕಾರುಗಳು. ಈ ವಿಡಿಯೋ ಹರಿದಾಡುತ್ತಿದ್ದಂತೆ, ಡೆಲಿವರಿ ವೇಳೆ 6 ಹಾಕುವ 6 ರೂಪಾಯಿ ಪ್ಲಾಟ್‌ಫಾರ್ಮ್ ಫೀ ನಿಂದಲೇ ಈ ಕಾರುಗಳನ್ನು ಖರೀದಿಸಲಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಜೊಮ್ಯಾಟೋ ಕೇಂದ್ರ ಕಚೇರಿ ಗುರುಗಾಂವ್‌ಲ್ಲಿ ಈ ಕಾರುಗಳನ್ನು ಪಾರ್ಕ್ ಮಾಡಲಾಗಿದೆ. ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಕಳೆದ ವರ್ಷ ಆ್ಯಸ್ಟನ್ ಮಾರ್ಟಿನ್ DB12 ಕಾರು ಖರೀದಿಸಿದ್ದರು. ಈ ಸ್ಪೋರ್ಟ್ಸ್ ಕಾರು ಖರೀದಿಸಿದ ಭಾರತದ ಮೊದಲಿಗೆ ಅನ್ನೋ ಹೆಗ್ಗಳಿಕೆಗೂ ಗೋಯಲ್ ಪಾತ್ರರಾಗಿದ್ದಾರೆ. ಇದರ ಬೆಲೆ 4.5 ಕೋಟಿ ರೂಪಾಯಿ. ಇದರ ಜೊತೆಗೆ ಗೋಯಲ್ ಬಳಿ ಪೋರ್ಶೆ 911 ಚರ್ಬೋ ಎಸ್, ಲ್ಯಾಂಬೋರ್ಗಿನಿ ಉರುಸ್, ಫೆರಾರಿ ರೊಮಾ ಕಾರುಗಳ ಮಾಲೀಕರಾಗಿದ್ದಾರೆ. ಈ ಕಾರುಗಳು ವೈರಲ್ ವಿಡಿಯೋದಲ್ಲಿ ಜೊಮ್ಯಾಟೋ ಕಚೇರಿ ಮುಂದೆ ಪಾರ್ಕ್ ಮಾಡಲಾಗಿದೆ.

Tap to resize

Latest Videos

ರೈಲು ಪ್ರಯಾಣದಲ್ಲಿ ಇನ್ನು ಊಟ-ತಿಂಡಿ ತಲೆ ಬಿಸಿ ಇಲ್ಲ; ಕುಳಿತಲ್ಲಿಗೆ ಜೊಮ್ಯಾಟೋ ಡೆಲಿವರಿ!

ಇನ್ನು ಬ್ಲಿಂಕಿಟ್ ಸಿಇಒ ಅಲ್ಬಿಂದರ್ ದಿಂದ್ಸಾ ಅವರ ಆಡಿ, ಮರ್ಸಿಡೀಸ್ ಬೆಂಜ್, BMW Z4 M40i ಸೇರಿದಂತೆ ಇತರ ಕಾರುಗಳನ್ನು ಕಚೇರಿ ಮುಂದೆ ಪಾರ್ಕ್ ಮಾಡಲಾಗಿದೆ. ಜೊಮ್ಯಾಟೋ, ಬ್ಲಿಂಕಿಟ್ ಕಚೇರಿ ಮುಂದೆ ಸಾಲು ಸಾಲಾಗಿ ದುಬಾರಿ ಕಾರುಗಳು ನಿಂತಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೊತೆಗೆ ಅಷ್ಟೇ ಭಿನ್ನ ಕಮೆಂಟ್‌ಗಳು ವ್ಯಕ್ತವಾಗಿದೆ.

 

 
 
 
 
 
 
 
 
 
 
 
 
 
 
 

A post shared by DekhBhai ®️ (@dekhbhai)

 

ಮನ ಕಲುಕಿದ ಡೆಲಿವರಿ ಬಾಯ್ ಪರಿಸ್ಥಿತಿ: 2 ವರ್ಷದ ಮಗಳ ಕೂರಿಸಿಕೊಂಡೆ ಎಲ್ಲೆಡೆ ಡೆಲವರಿ!

ಜೊಮ್ಯಾಟೋ ಫುಡ್ ಡೆಲಿವರಿ ವೇಳೆ ಪ್ಲಾಟ್‌ಫಾರ್ಮ್ ಫಿ ವಿಧಿಸುತ್ತದೆ. ಇತ್ತೀಚೆಗೆ ಪ್ಲಾಟ್‌ಪಾರ್ಮ್ ಶುಲ್ಕವನ್ನು 5 ರೂಪಾಯಿಯಿಂದ 6 ರೂಪಾಯಿ ಹೆಚ್ಚಿಸಲಾಗಿದೆ. ಇದೀಗ ನೆಟ್ಟಿದರು ಈ ಪ್ಲಾಟ್‌ಫಾರ್ಮ್ ಸರಿಯಾಗಿ ಕೆಲಸ ಮಾಡಿದೆ. ಇದೇ ಪ್ಲಾಟ್ಫಾರ್ಮ್ ಶುಲ್ಕದಿಂದ ಈ ಕಾರುಗಳನ್ನು ಖರೀದಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಗ್ರಾಹಕರ ವಿಧಿಸುವ ಪ್ಲಾಟ್‌ಫಾರ್ಮ್ ಶುಲ್ಕ ಯಾಕೆ ಎಂದು ಇಂದು ಅರ್ಥವಾಯಿತು. ಈ ಕಾರುಗಳ ಪ್ಲಾಟ್‌ಫಾರ್ಮ್ ಶುಲ್ಕಕವನ್ನು ಗ್ರಾಹಕರ ಮೇಲೆ ಹಾಕಿದ್ದಾರೆ. ನಮ್ಮ ದುಡ್ಡು, ಅವರಿಗೆ ಫ್ರೀ ಕಾರು ಎಂದ ಕೆಲವರು  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 

click me!