ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ: ಎಲ್‌ಪಿಜಿ ವಿತರಕರ ಸಂಘ ಎಚ್ಚರಿಕೆ

Published : Apr 20, 2025, 08:48 PM ISTUpdated : Apr 20, 2025, 08:49 PM IST
ಬೇಡಿಕೆ ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ: ಎಲ್‌ಪಿಜಿ ವಿತರಕರ ಸಂಘ ಎಚ್ಚರಿಕೆ

ಸಾರಾಂಶ

ಮೂರು ತಿಂಗಳೊಳಗೆ ಕಮಿಷನ್ ಹೆಚ್ಚಳ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಲ್‌ಪಿಜಿ ವಿತರಕರ ಸಂಘ ಎಚ್ಚರಿಸಿದೆ. 

ಭೋಪಾಲ್‌: ಮೂರು ತಿಂಗಳೊಳಗೆ ಕಮಿಷನ್ ಹೆಚ್ಚಳ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸದಿದ್ದರೆ ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಲ್‌ಪಿಜಿ ವಿತರಕರ ಸಂಘ ಎಚ್ಚರಿಸಿದೆ. ಶನಿವಾರ ಭೋಪಾಲ್‌ನಲ್ಲಿ ನಡೆದ ಸಂಘದ ರಾಷ್ಟ್ರೀಯ ಸಮಾವೇಶದ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಭಾನುವಾರ ಬಿಡುಗಡೆಯಾದ ಹೇಳಿಕೆಯಲ್ಲಿ ಸಂಘದ ಅಧ್ಯಕ್ಷ ಬಿ.ಎಸ್. ಶರ್ಮಾ ಮಾತನಾಡಿ, ಬೇಡಿಕೆಗಳ ಚಾರ್ಟರ್ ಕುರಿತು ವಿವಿಧ ರಾಜ್ಯಗಳ ಸದಸ್ಯರು ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಎಲ್‌ಪಿಜಿ ವಿತರಕರ ಬೇಡಿಕೆಗಳ ಕುರಿತು ನಾವು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೂ ಪತ್ರ ಬರೆದಿದ್ದೇವೆ ಎಂದು ಹೇಳಿದರು.

ವಿತರಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಕಮಿಷನ್ ತುಂಬಾ ಕಡಿಮೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅವರು ಹೇಳಿದರು. ಪ್ರತಿ ಸಿಲಿಂಡರ್‌ಗೆ ಕನಿಷ್ಠ 150 ರೂ. ಕಮಿಷನ್ ಹೆಚ್ಚಿಸುವಂತೆ ಸಂಘವು ಸರ್ಕಾರವನ್ನು ಒತ್ತಾಯಿಸಿದೆ. ಬೇಡಿಕೆ ಇಲ್ಲದಿದ್ದರೂ ದೇಶೀಯವಲ್ಲದ ಸಿಲಿಂಡರ್‌ಗಳನ್ನು ಸ್ವೀಕರಿಸಲು ತೈಲ ಕಂಪನಿಗಳು ವಿತರಕರನ್ನು ಒತ್ತಾಯಿಸುತ್ತಿರುವ ಬಗ್ಗೆಯೂ ಪತ್ರವು ಕಳವಳ ವ್ಯಕ್ತಪಡಿಸಿದೆ. ಇದು ಕಾನೂನು ನಿಬಂಧನೆಗಳ ಉಲ್ಲಂಘನೆಯಾಗಿದೆ. ಹೆಚ್ಚುವರಿಯಾಗಿ, ಉಜ್ವಲ ಯೋಜನೆಯಡಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ಮತ್ತು ವಿತರಣೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳನ್ನು ವಿತರಕರು ಎತ್ತಿ ತೋರಿಸಿದ್ದಾರೆ. ಮೂರು ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ, ಎಲ್‌ಪಿಜಿ ವಿತರಕರ ಸಂಘವು ದೇಶಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದೆ ಎಂದು ಸಂಘವು ಪತ್ರದಲ್ಲಿ ಸರ್ಕಾರಕ್ಕೆ ಎಚ್ಚರಿಸಿದೆ.

ಇದನ್ನೂ ಓದಿ: 

ಮಗುವಿನೊಂದಿಗೆ ತವರಿಗೆ ಹೊರಟಿದ್ದ ತಾಯಿಯ ಕೊಲೆ:  50 ವರ್ಷ ಹಳೆಯ ಕೊಲೆ ಕೇಸ್‌ ಬೇಧಿಸಿದ ಪೊಲೀಸರು

ಸರಿಸುಮಾರು 50 ವರ್ಷಗಳಷ್ಟು ಹಿಂದಿನ ಕೊಲೆ ಪ್ರಕರಣವೊಂದನ್ನು ಇಂಡಿಯಾನಾದ ಪೊಲೀಸರು ಬೇಧಿಸಿದ್ದಾರೆ. ಆ ಬಗ್ಗೆ ಒಂದು ಡಿಟೇಲ್‌ ಸ್ಟೋರಿ ಇಲ್ಲಿದೆ.  ಸುಮಾರು 50 ವರ್ಷಗಳ ಹಿಂದೆ ಎಳೆಯ ವಯಸ್ಸಿನ ತಾಯಿಯೊಬ್ಬಳು ತನ್ನ ನವಜಾತ ಶಿಶುವಿನೊಂದಿಗೆ ಪ್ರಯಾಣಿಸುತ್ತಿದ್ದಾಗ ಬಲತ್ಕಾರಕ್ಕೊಳಗಾಗಿದ್ದಲ್ಲದೇ ಆಕೆಯನ್ನು ರಸ್ತೆ ಮಧ್ಯೆಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆ ನಡೆದು ಸರಿಸುಮಾರು 50 ವರ್ಷಗಳ ನಂತರ ಆಕೆಯನ್ನು ಹೀಗೆ ದಾರುಣವಾಗಿ ಕೊಂದ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. 

ಇಪ್ಪತ್ತಾರು ವರ್ಷದ ಫಿಲ್ಲಿಸ್ ಬೈಲರ್ (Phyllis Bailer)ಮತ್ತುಆಕೆಯ ಮೂರು ವರ್ಷದ ಮಗಳು 1972 ರ ಜುಲೈ 7ರಂದು ಇಂಡಿಯಾನಾಪೊಲಿಸ್‌ನಿಂದ ಈಶಾನ್ಯಕ್ಕೆ ಸುಮಾರು 100 ಮೈಲಿ ದೂರದಲ್ಲಿರುವ ಬ್ಲಫ್ಟನ್‌ಗೆ ತನ್ನ ಹೆತ್ತವರನ್ನು ಭೇಟಿ ಮಾಡಲು ಹೋಗುತ್ತಿದ್ದರು. ಆದರೆ ಅವರು ತಮ್ಮ ತವರನ್ನು ತಲುಪಲೇ ಇಲ್ಲ. ಮತ್ತು ಮರುದಿನ ಬೆಳಗ್ಗೆ 10.30 ರ ಸುಮಾರಿಗೆ ಫಿಲ್ಲಿಸ್ ಬೈಲರ್ ಅವರ ಕಾರು ಖಾಲಿಯಾಗಿ ರಸ್ತೆಬದಿ ನಿಂತಿರುವುದನ್ನು ಪೊಲೀಸರು ಗಮನಿಸಿದ್ದರು.

ಇದನ್ನೂ ಓದಿ: 

ಇಂಡಿಯಾನಾದ ಅಲೆನ್ ಕೌಂಟಿಯಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಬೈಲರ್ ಶವ ಕಾಣಲು ಸಿಕ್ಕರೆ ಆಕೆಯ ಮೂರು ವರ್ಷದ ಮಗಳು ಸರಿಸುಮಾರು ಒಂದು ಗಂಟೆಯ ನಂತರ ರಸ್ತೆಯ ಪಕ್ಕದಲ್ಲಿರುವ ಹಳ್ಳದಲ್ಲಿ ಸಿಕ್ಕಿತ್ತು. ಆದರೆ ಮಹಿಳೆಯ ಸಾವು ಹೇಗೆ ಸಂಭವಿಸಿತ್ತು ಎಂದು ತನಿಖೆಗಿಳಿದ ಪೊಲೀಸರಿಗೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಗುಂಡು ಹಾರಿಸಿ ಕೊಲ್ಲಲಾಗಿದೆ ಎಂಬುದು ಧೃಡವಾಯ್ತು. ಮಗುವಿಗೆ ಯಾವುದೇ ಹಾನಿಯಾಗಿರಲಿಲ್ಲ. ಆದರೆ ಕೊಲೆಗಾರನ ಸಣ್ಣ ಸುಳಿವು ಕೂಡ ಪೊಲೀಸರಿಗಿರಲಿಲ್ಲ, ಹೀಗಾಗಿ ಈ ಕೊಲೆ ಪ್ರಕರಣವನ್ನು ಬೇಧಿಸಲು ಸರಿಸುಮಾರು ಪೊಲೀಸರಿಗೆ 5 ದಶಕಗಳೇ ಬೇಕಾಯ್ತು. 
ಬೈಲರ್ ನಿಧನರಾದಾಗ, ಪೊಲೀಸರು ಡಿಎನ್ಎ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲಿಲ್ಲ, ಏಕೆಂದರೆ 1990 ರ ದಶಕದಲ್ಲಿ ಈ ಡಿಎನ್‌ಎ ಪರೀಕ್ಷೆಯ ಕಾನೂನು ಜಾರಿಗೆ ಬಂದಿತ್ತು. ಹಾಗೂ ಈ ಪರೀಕ್ಷೆಯ ಮಹತ್ವದ ಬಗ್ಗೆ ಸಮುದಾಯದಲ್ಲಿ ಪ್ರಾಮುಖ್ಯತೆ ಸಿಕ್ಕಿತ್ತು. ಆದರೆ ಬೈಲರ್‌ ಕೊಲೆಯ ನಂತರದ ವರ್ಷಗಳಲ್ಲಿ, ಪೊಲೀಸರು ಆಕೆಯ ಬಟ್ಟೆಯಿಂದ ವಶಪಡಿಸಿಕೊಂಡ ಕೆಲ ಸಾಕ್ಷ್ಯಗಳಿಂದ  ಡಿಎನ್ಎ ಪ್ರೊಫೈಲ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು ಹಾಗೂ  ಪ್ರಮುಖ ಶಂಕಿತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್
ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ