4 ದಿನದಲ್ಲಿ 2ನೇ ಬಾರಿಗೆ ಗ್ಯಾಸ್ ಬೆಲೆ ಏರಿಕೆ; ಜನಸಾಮಾನ್ಯರಿಗೆ ಮತ್ತೆ ಹೊರೆ!

By Suvarna NewsFirst Published Mar 1, 2021, 2:40 PM IST
Highlights

ಜನಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ದಿನದಿಂದ ದಿನಕ್ಕೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಇತ್ತ ಎಲ್‌ಪಿಜಿ ಸಿಲಿಂಡರ್ ಬೆಲೆ ಕೂಡ ಕೈಗೆಟುಕದಂತಾಗಿದೆ. ಇದೀಗ ಕೇವಲ ನಾಲ್ಕೇ ದಿನಕ್ಕೆ ಎಲ್‌ಪಿಜಿ ಬೆಲೆ ಮತ್ತೆ ಏರಿಕೆಯಾಗಿದೆ.

ನವದೆಹಲಿ(ಮಾ.01): ಮತ್ತೆ ಎಲ್‌ಪಿಜಿ ಬೆಲೆ ಏರಿಕೆಯಾಗಿದೆ. ಹೌದು, ಇದೀಗ 25 ರೂಪಾಯಿ ಮತ್ತೆ ಹೆಚ್ಚಾಗಿದೆ. ಮಾರ್ಚ್ 1 ರಿಂದ ಪರಿಷ್ಕೃತ ದರ ಜಾರಿಯಾಗಿದೆ. ಹೀಗಾಗಿ ಇಂದಿನಿಂದ ಸಿಲಿಂಡರ್ ಗ್ಯಾಸ್ ಖರೀದಿಸುವವರ 797 ರೂಪಾಯಿ ಬದಲು, ಇದೀಗ 822 ರೂಪಾಯಿ ನೀಡಬೇಕಿದೆ.

ಗ್ಯಾಸ್ ಸಿಲಿಂಡರ್ ದರ ಇಂದು 25 ರೂ ಏರಿಕೆ, ಗ್ರಾಹಕರಿಗೆ ಬರೆ ಮೇಲೆ ಬರೆ!.

ಫೆಬ್ರವರಿ 25 ರಂದು ಸಿಲಿಂಡರ್ ಬಲೆ 25 ರೂಪಾಯಿ ಏರಿಕೆಯಾಗಿದೆ. ಮಾರ್ಚ್ ಮೊದಲ ದಿನವೇ ಏರಿಕೆಯಾಗಿದ್ದು, ಈ ತಿಂಗಳಲ್ಲಿ ಇನ್ನೆಷ್ಟು ದಿನ ಏರಿಕೆಯಾಗಲಿದೆ. ಈ ತಿಂಗಳಲ್ಲೇ 1000 ರೂಪಾಯಿ ಆಗಲಿದೆ ಅನ್ನೋ ಆತಂಕ ಜನರಲ್ಲಿ ಮಡುಗಿದೆ. ಫೆಬ್ರವರಿ ತಿಂಗಳಲ್ಲಿ 3 ಬಾರಿ ಗ್ಯಾಸ್ ಬೆಲೆ ಏರಿಕೆಯಾಗಿತ್ತು. ಫೆಬ್ರವರಿ 4, 14 ಹಾಗೂ 25ಕ್ಕೆ ಏರಿಕೆಯಾಗಿತ್ತು. ಈ ಮೂಲಕ ಫೆಬ್ರವರಿಯಲ್ಲಿ 100 ರೂಪಾಯಿ ಹೆಚ್ಚಳವಾಗಿದೆ.

ಡಿಸೆಂಬರ್ ತಿಂಗಳಲ್ಲಿ 594 ರೂಪಾಯಿ ಇದ್ದ ಬೆಲೆ 644 ರೂಪಾಯಿಗೆ ಏರಿಕೆಯಾಗಿತ್ತು. ಇನ್ನು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 96 ರೂಪಾಯಿ ಏರಿಕೆಯಾಗಿದೆ. ಇದೀಗ ಕಮರ್ಷಿಯಲ್ ಸಿಲಿಂಡರ್ ದರ 1,666 ರೂಪಾಯಿ ಆಗಿದೆ.  ಇನ್ನು ಪೆಟ್ರೋಲ್ ಡಿಸೆಲ್ ಬೆಲೆ ಕಳೆದ 2 ದಿನದಿಂದ  ಸ್ಥಿರವಾಗಿದೆ. 

click me!