NDA ಶಾಸಕರಿಗೆ ಮಂತ್ರಿಗಿರಿ ಆಫರ್; ಲಾಲೂ ಕುತಂತ್ರ ಬಯಲು ಮಾಡಿದ ಸುಶೀಲ್ ಮೋದಿ!

Published : Nov 24, 2020, 10:00 PM ISTUpdated : Nov 24, 2020, 10:01 PM IST
NDA ಶಾಸಕರಿಗೆ ಮಂತ್ರಿಗಿರಿ ಆಫರ್; ಲಾಲೂ ಕುತಂತ್ರ ಬಯಲು ಮಾಡಿದ ಸುಶೀಲ್ ಮೋದಿ!

ಸಾರಾಂಶ

ಬಿಹಾರ ಚುನಾವಣೆ ಮುಗಿದು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ರಾಜಕೀಯ ಗುದ್ದಾಟ, ಮೇಲಾಣ ಮುಗಿದಿಲ್ಲ. ಇದೀಗ ಜೈಲಿನಿಂದಲೇ ಲಾಲೂ ಪ್ರಸಾದ್ ಯಾದವ್ ಆಟ ಆರಂಭಿಸಿದ್ದಾರೆ. ಫೋನ್ ಕಾಲ್ ಮೂಲಕ ಬಿಜೆಪಿ ಶಾಸಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಬಿಹಾರ(ನ.24); ತಂತ್ರಜ್ಞಾನಗಳಂತೆ ರಾಜಕೀಯವೂ ಕೂಡ ಪ್ರತಿ ವರ್ಷ ಅಪ್‌ಗ್ರೇಡ್ ಆಗುತ್ತದೆ. ಹಿಂದೆ ಚುನಾವಣೆ ವರೆಗಿದ್ದ ರಾಜಕೀಯ ಮೇಲಾಟಗಳು, ಫಲಿತಾಂಶಕ್ಕೆ ಅಂತ್ಯಗೊಳ್ಳುತ್ತಿತ್ತು. ಬಳಿಕ ಫಲಿತಾಂಶ ಮುಗಿದು ಪ್ರಮಾಣವಚನದ ವರೆಗೂ ಅಧಿಕಾರಕ್ಕಾಗಿ ತಂತ್ರಗಳು ನಡೆಯುತ್ತಿತ್ತು. ಇದೀಗ ಅಧಿಕಾರ ವಹಿಸಿ ವರ್ಷ ಪೂರ್ತಿಗೊಳಿಸಿದರೂ ಅಧಿಕಾರಕ್ಕಾಗಿ ವಿರೋಧ ಪಕ್ಷಗಳು ನಿರಂತರ ಹೋರಾಟ ನಡೆಸುತ್ತಲೇ ಇರುತ್ತದೆ. ಇದೀಗ ಬಿಹಾರದಲ್ಲಿ  ರಾಜಕೀಯ ಚದುರಂಗದಾಟ ಶುರುವಾಗಿದೆ.

ಬಿಹಾರದಲ್ಲಿ ಅಚ್ಚರಿಯ ಬೆಳವಣಿಗೆ, ನಿತೀಶ್‌ಗೆ ‘ಮಹಾಗಠಬಂಧನ’ ಆಫರ್!.

ಎನ್‌ಡಿಎ ಕೂಟದ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಹಾರದ ರಾಜಕೀಯ ಚುರುಕುಕೊಂಡಿದೆ. ಇದೀಗ ರಂಗಕ್ಕೆ ಲಾಲೂ ಪ್ರಸಾದ್ ಯಾದವ್ ಸದ್ದಿಲ್ಲದೇ ಎಂಟ್ರಿಕೊಟ್ಟಿದ್ದಾರೆ. ಬಿಜೆಪಿ ನಾಯಕರಿಗೆ ಮಂತ್ರಿಗಿರಿ ಆಸೆ ತೋರಿಸಿ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಸ್ವತಃ ಲಾಲೂ ಪ್ರಸಾದ್ ಯಾದವ್ ಫೋನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಬಹಿರಂಗ ಪಡಿಸಿದ್ದಾರೆ.

ಸುಶೀಲ್ ಮೋದಿ ಅನುಪಸ್ಥಿತಿ ಕಾಡಲಿದೆ, ಆದರೆ ಇದು ಬಿಜೆಪಿ ನಿರ್ಧಾರ: ನಿತೀಶ್ ಕುಮಾರ್

ಲಾಲೂ ಪ್ರಸಾದ್ ಯಾದವ್ ರಾಂಚಿಯಿಂದ NDA ಶಾಸಕರಿಗೆ ಫೋನ್ ಕಾಲ್ ಮಾಡುತ್ತಿದ್ದಾರೆ (8051216302). ಪ್ರತಿಯೊಬ್ಬರಿಗೆ ಮಂತ್ರಿ ಸ್ಥಾನದ ಭರವಸೆ ನೀಡುತ್ತಿದ್ದಾರೆ.  NDA ಶಾಸಕರಿಗೆ ಕರೆ ಬಂದ ದೂರವಾಣಿ ಸಂಖ್ಯೆಗೆ ನಾನೇ ನೇರವಾಗಿ ಫೋನ್ ಮಾಡಿದಾಗ ಲಾಲೂ ಯಾದವ್ ಕರೆ ಸ್ವೀಕರಿಸಿದ್ದಾರೆ. ಈ ವೇಳೆ ಜೈಲಿನಿಂದ ಕೊಳಕು ರಾಜಕೀಯ ಮಾಡಬೇಡಿ, ಇದರಿಂದ ನಿಮಗೆ ಯಶಸ್ಸು ಸಿಗುವುದಿಲ್ಲ ಎಂದು ಸುಶೀಲ್ ಕುಮಾರ್ ಮೋದಿ ಟ್ವೀಟ್ ಮಾಡಿದ್ದಾರೆ.

 

ಬಿಹಾರದಲ್ಲಿ NDA ಅಧಿಕಾರಕ್ಕೇರಿದ್ದರೂ ರಾಜಕೀಯ ಇನ್ನು ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇದು ಹೊಸ ತಿರುವು ಪಡೆದರೂ ಅಚ್ಚರಿಯಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು