
ಅಹಮದಾಬಾದ್ (ಆ.20): ಬಲವಂತವಲ್ಲದ ಅಂತರ್ ಧರ್ಮೀಯ ವಿವಾಹಗಳ ಮೇಲೆ ಗುಜರಾತ್‌ನ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ)-2021ರ (ಲವ್ ಜಿಹಾದ್ ತಡೆ) ಕಾಯ್ದೆ ಅನ್ವಯಿಸುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.
ಹಾಗೂ ಕಾಯ್ದೆಯ 6 ಅಂಶಗಳಿಗೆ ತಡೆ ನೀಡಿದೆ. ಅಂತರ್ ಧರ್ಮೀಯ ವಿವಾಹದ ಕುರಿತಾಗಿ ಮಧ್ಯಂತರ ಆದೇಶ ಹೊರಡಿಸಿದ ಗುಜರಾತ್ ಕೋರ್ಟ್, ಈ ಪ್ರಕರಣದಲ್ಲಿ ಸಿಲುಕಿದ್ದ ನವ ಜೋಡಿಯ ನೆರವಿಗೆ ಬಂದಿದೆ.
ಹಿಂದು ಯುವಕ ಹಿಂದು ಯುವತಿಗೆ ಸುಳ್ಳು ಹೇಳಿದ್ರೂ ಅದು ಜಿಹಾದ್..!
ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಪೀಠ ಬಲವಂತವಲ್ಲದ, ಅನ್ಯಾಯ ಅಲ್ಲದ ರೀತಿ ಮದುವೆ ಆಗದ ಜೋಡಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಸಹಿಸುವುದಿಲ್ಲ ಎಂದಿದೆ.
ಅನೇಕ ಅಂತರ್‌ಧರ್ಮೀಯ ವಿವಾಹಗಳನ್ನು ಕೆಲವು ಸಂದರ್ಭದಲ್ಲಿ ಲವ್ ಜಿಹಾದ್ ಎಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆ ಈ ಮಹತ್ವದ ತೀರ್ಪು ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ