
ಡೆಲ್ಲಿ ಮಂಜು
ನವದೆಹಲಿ (ಆ. 19) : ಬಹುಶಃ `ತಾಲಿಬಾನರ ಆಟ ನಡೆಯೋದಿಲ್ಲ' ಅಂಥ ಹೇಳೋದು ಇಲ್ಲಿ ಮಾತ್ರ ಅನ್ನಿಸುತ್ತೆ..! ಇದರ ಹೆಸರು ಪಂಚ ಸಿಂಹಗಳ ನಾಡು ಪಂಜ್‌ಶೀರ್. ಡೆಮಾಕ್ರೆಸಿ ಅನ್ನೋ ಪ್ರಾಜೆಕ್ಟ್ ಅನ್ನು 20 ವರ್ಷಗಳ ಅವಧಿಯಲ್ಲಿ ಮುಗಿಸಿದೆ ಅಂಥ ಬೀಗಿದ ಅಮೆರಿಕಾ, ಕೊನೆಗೆ ಅದೇ ರಕ್ತಬೀಜಾಸುರರಿಗೆ ಒಪ್ಪಿಸಿದ ಅಫ್ಘನ್ ನಾಡಿನ ಒಂದು ಪ್ರಾಂತ್ಯ ಈ ಪಂಜ್‌ಶೀರ್. ಪಂಜ್‌ಶೀರ್ ಅಂದರೆ ಐದು ಸಿಂಹಗಳು ಅಂಥ ಅರ್ಥ. ಕಾಬೂಲಿಗೆ ಈಶಾನ್ಯ ದಿಕ್ಕಿನಲ್ಲಿ ಬರುವ ಈ ಪ್ರಾಂತ್ಯ, ಹೆಚ್ಚು ಕಡಿಮೆ 100 ಕಿಲೋಮೀಟರ್ ದೂರದಲ್ಲಿ ಇದೆ. ಯುಎಸ್‌ನಿಂದ ಸೈನ್ಯ ತೆರವು ಮಾಡಿದ ಅಫ್ಘನಿಸ್ತಾನ್‌ವನ್ನು ತಾಲಿಬಾನರು ವಶಪಡಿಸಿಕೊಂಡರೂ, ಈ ಪ್ರಾಂತ್ಯವನ್ನು ಮುಟ್ಟಲು ಹಿಂದೆಯೂ ಆಗಿರಲಿಲ್ಲ. ಈಗಲೂ ಆಗುತ್ತಿಲ್ಲ.
ಅಪ್ಘನ್ ನಲ್ಲಿ 34 ಪ್ರಾಂತ್ಯಗಳು ಇವೆ. ಇದರಲ್ಲಿ ಪಂಜ್‌ಶೀರ್ ಪ್ರಾಂತ್ಯವೂ ಕೂಡ ಒಂದು. 7 ಜಿಲ್ಲೆ, 517 ಗ್ರಾಮಗಳಿರುವ ಈ ಪ್ರದೇಶದಲ್ಲಿ 1.72 ಲಕ್ಷ ಜನಸಂಖ್ಯೆ ಇದೆ. ಇಲ್ಲಿನ ಜನಪದ ಕಥೆಗಳು ಹೇಳುವಂತೆ ಮಹಾಭಾರತದವೂ ಕೂಡ ಈ ಇಲ್ಲಿ ಹಾದುಹೋಗುತ್ತದೆ. ಪಾಂಡವರ ಮಹಾಪ್ರಸ್ತಾನದ ಉಲ್ಲೇಖಗಳು ಇಲ್ಲಿ ಸಿಗುತ್ತವೆ.
ಡೆಲ್ಲಿ ರಾಜಕೀಯ ಕಟ್ಟೆಗೆ ಪಿಕೆ.. ಏನಾಗಲಿದೆ ಮುಂದೆ?
ರೆಬಲ್ ನಾಡು : ಇದು ಒಂದು ರೀತಿಯಲ್ಲಿ ರೆಬಲ್ ನಾಡು. 70ರ ದಶಕದಿಂದಲೂ ರೆಬಲ್ ಆಗಿರುವ ಬಗ್ಗೆ ಇತಿಹಾಸದ ಪುಟಗಳು ಹೇಳುತ್ತವೆ. ಈ ಪ್ರಾಂತ್ಯ ಆಫ್ಘನ್-ಸೋವಿಯತ್ ರಷ್ಯಾ ಶೀತಲ ಸಮರದಲ್ಲೂ ಅಫ್ಘನ್ ವಿರುದ್ಧ ರೆಬಲ್ ಆಗಿತ್ತು. ನಂತರ ತಾಲಿಬಾನ್ ಪ್ರವೇಶದ ಬಳಿಕವೂ ನಾಥ್ರನ್ ಅಲೆಯನ್ಸ್ ಮೂಲಕ ಪ್ರತಿರೋಧ ತೋರಿತ್ತು.
ತಾಲಿಬಾನ್‌ಗಳ ವಿರುದ್ಧ ಈಗಲೂ ಅದೇ ರೀತಿಯ ಸಮರ ಸಾರಿದೆ. ನಮ್ಮ ಪ್ರಾಂತ್ಯ ಪ್ರವೇಶಿಸುವಂತಿಲ್ಲ ಅಂಥ ಕೇವಲ ಹೇಳಿಕೆ ಮಾತ್ರ ಸೀಮಿತವಾಗಿಲ್ಲ ಪಂಜ್‌ಶೀರ್, ತಾಲಿಬಾನ್ ವಶದಿಂದ ಮುಕ್ತವಾಗಿದೆ. ಒಂದು ರೀತಿಯಲ್ಲಿ ತಾಲಿಬಾನ್‌ಗಳು ಕೂಡ ಇದನ್ನು ಮುಟ್ಟುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಯಾಕೆಂದರೆ ಕಣಿವೆ, ಗಿರಿಕಂದರಗಳು ಹೆಚ್ಚಾಗಿರುವ ಕಾರಣಕ್ಕೆ ವಿರೋಧಿಗಳಿಗೆ ಭೌಗೋಳಿಕವಾಗಿಯೂ ಕೂಡ ಅಸಹಕಾರ ಇದೆ.
ಪಂಜ್‌ಶೀರ್ ಎಂಥವರ ವಿರುದ್ಧ ಬೇಕಾದರೂ ಹೋರಾಟಕ್ಕೆ ಸಿದ್ದವಿದೆ. ನಾವು ತಾಲಿಬಾನಿಗಳ ಆಡಳಿತಕ್ಕೆ ಬಿಟ್ಟು ಕೊಟ್ಟಿಲ್ಲ ಅಂಥ ಅಫ್ಘನಿಸ್ತಾನ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಹೇಳಿದ್ದಾರೆ. ಪಂಜ್‌ಶೀರ್ ಕಣಿವೆ ತಾಲಿಬಾನ್ ವಿರೋಧಿ ಹೋರಾಟ ಪ್ರಮುಖ ಕೇಂದ್ರವಾಗಿದ್ದು, ಅಮೆರಿಕಾದ ಬೆಂಬಲದಿಂದ 2001 ರಲ್ಲಿ ತಾಲಿಬಾನಿಗಳನ್ನು ಹೊರಹಾಕಲು ಸಾಥ್ ನೀಡಿತ್ತು.
ಪಂಜ್‌ಶೀರ್ ಬಗ್ಗೆ ಈ ವಿಷಯಗಳು ಗೊತ್ತಿರಲಿ :
1. ಇದು ನೈಸರ್ಗಿಕವಾಗಿಯೇ ದುರ್ಗಮ ಕಣಿವೆಗಳಿರುವ ಪ್ರಾಂತ್ಯ
2. ಅಮ್ರುಲ್ಲಾ ಸಲೇಹ ಹುಟ್ಟಿದ್ದು, ತರಬೇತಿ ಪಡೆದಿರುವುದು ಇದೇ ಪಂಜ್‌ಶೀರ್ ಪ್ರಾಂತ್ಯದಲ್ಲಿ
3.ವಿದೇಶಿಯರು ಅಥವಾ ತಾಲಿಬಾನಿಗಳು ಈತನಕ ಈ ಪ್ರಾಂತ್ಯವನ್ನು ವಶಪಡಿಸಿಕೊಂಡಿಲ್ಲ
4. ಪಂಜ್‌ಶೀರ್ ಅಂದರೆ ಐದು ಸಿಂಹಗಳು ಅಂಥ ಅರ್ಥ. 10 ನೇ ಶತಮಾನದಲ್ಲಿ ಐವರು ಸಹೋದರರು ಪ್ರವಾಹ ತಡೆದು ಡ್ಯಾಮ್ ನಿರ್ಮಾಣ ಮಾಡಿದ್ದರು.
5. ಈ ಕಣಿವೆಯಲ್ಲಿ 1.75 ಲಕ್ಷ ಮಂದಿ ಇದ್ದು, ಇದರಲ್ಲಿ ಬಹುತೇಕರು ತಜಕಿಗಳು. ಅದರಲ್ಲೂ ಕಟ್ಟರ್ ತಜಕಿಗಳು ಇಲ್ಲಿ ಹೆಚ್ಚು ವಾಸ ಮಾಡುತ್ತಿದ್ದಾರೆ.
6. ನ್ಯಾಷನಲ್ ರೆಜಿಸ್ಟೆಂಟೆನ್ಸ್ ಫ್ರಂಟ್ ಆಫ್ ಅಫ್ಘನಿಸ್ತಾನ್ ಸಂಘಟನೆಯ ಪ್ರಮುಖ ಕೇಂದ್ರ ಇದು. ಅಹಮದ್ ಮಸೂದ್, ಅಮ್ರುಲ್ಲಾ ಸಲೇಹ, ಬಿಸ್ಮಿಲ್ಲಾ ಖಾನ್ ಮೊಹಮದಿ ಈ ಪಡೆಯ ಪ್ರಮುಖ ನಾಯಕರು
7. ಈ ಗ್ರೂಪನ್ನು ನಾಥ್ರನ್ ಅಲೈನ್ಸ್ ಅಂತಲೇ ಕರೆಯಲಾಗುತ್ತೆ. ಇದು ತಾಲಿಬಾನಿಗಳ ವಿರೋಧಿ ಗುಂಪು. 1996ರಿಂದ 2001ರ ನಡುವೆ ಹುಟ್ಟಿಕೊಂಡಿದ್ದ ಗುಂಪು. ಅಮ್ರುಲ್ಲಾ ಸಲೇಹ್ ಈ ಗುಂಪಿಗೆ ಕರೀಮ್ ಖಲೀಲ್, ಅಬ್ದುಲ್ ರಶೀದ್ ದೋಸ್ತುಮ್, ಅಬ್ದುಲ್ಲಾ ಅಬ್ದುಲ್ಲಾ, ಅಬ್ದುಲ್ ಖಾದ್ರಿ ಮುಂತಾದವರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ