ಜ್ಯೂಸ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ: ಚಾಲಕನ ನೆರವಿಗೆ ಧಾವಿಸದೇ ಬಿಟ್ಟಿಯಾಗಿ ಸಿಕ್ಕ ಜ್ಯೂಸ್‌ಗೆ ಮುಗಿಬಿದ್ದ ಜನ

Published : Apr 28, 2026, 03:07 PM IST
After Crash Crowd Loots Spilled Drinks

ಸಾರಾಂಶ

ತಂಪು ಪಾನೀಯ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದ್ದು ಚಾಲಕ ಸಹಾಯಕ್ಕಾಗಿ ಬೇಡಿದರೂ, ಜನ ಆತನನ್ನು ನಿರ್ಲ್ಷಕ್ಷಿಸಿ ತಮ್ಮ ವಾಹನಗಳಲ್ಲಿ ಬಂದು ರಸ್ತೆಗೆ ಬಿದ್ದ ಜ್ಯೂಸ್ ಬಾಟಲ್‌ಗಳನ್ನು ಹೊತ್ತೊಯ್ದಿದ್ದು ಜನರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಗಾಯಾಳುವಿಗೆ ನೆರವಾಗುವ ಬದಲು ಫ್ರೀ ಜ್ಯೂಸ್ ಲೂಟಿಗೆ ಮುಗಿಬಿದ್ದ ಜನ

ಜ್ಯೂಸ್ ಬಾಟಲ್‌ಗಳನ್ನು ಜನ ತಾಮುಂದು ನಾ ಮುಂದು ಎಂಬಂತೆ ಪೈಪೋಟಿಗೆ ಬಿದ್ದು ಎತ್ತಿಕೊಂಡು ಹೋದಂತಹ ಘಟನೆ ನಡೆದಿದೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈರಲ್ ಆದ ವೀಡಿಯೋದಲ್ಲಿ ಘಟನೆಯಲ್ಲಿ ಲಾರಿಯ ಚಾಲಕ ಗಾಯಗೊಂಡಿದ್ದು ಜನರಲ್ಲಿ ಸಹಾಯಕ್ಕಾಗಿ ಬೇಡಿದ್ದಾನೆ. ಆದರೆ ಜನ ಆತನಿಗೆ ಸಹಾಯ ಮಾಡುವ ಬದಲು ಲಾರಿಯಿಂದ ಕೆಳಗೆ ಬಿದ್ದ ಜ್ಯೂಸ್‌ಗೆ ಮುಗಿಬಿದ್ದಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಈ ವೀಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಲಕನ ಮನವಿಗೆ ಡೋಂಟ್ ಕೇರ್

ತಂಪು ಪಾನೀಯ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಜ್ಯೂಸ್‌ನ ಸಾವಿರಾರು ಬಾಟಲ್‌ಗಳು ರಸ್ತೆಗೆ ಬಿದ್ದಿದೆ. ಈ ವೇಳೆ ಜನ ಗಾಯಗೊಂಡ ಚಾಲಕನಿಗೆ ಸಹಾಯ ಮಾಡುವುದನ್ನು ಬಿಟ್ಟು ಲಾರಿಯಿಂದ ಕೆಳಗೆ ಬಿದ್ದ ಜ್ಯೂಸ್‌ ಬಾಟಲ್‌ಗಳನ್ನು ಹೆಕ್ಕುವುದರಲ್ಲಿ ಮಗ್ನರಾಗಿದ್ದಾರೆ. ಲಾರಿ ಮಗುಚಿ ಬಿದ್ದಿದೆ ಎಂಬ ವಿಚಾರ ತಿಳಿದ ಕೆಲವರು ದೂರ ದೂರದಿಂದ ತಮ್ಮ ಬೈಕ್ ಸೇರಿದಂತೆ ಇತರ ದ್ವಿಚಕ್ರ ವಾಹನಗಳಲ್ಲಿ ಬಂದು ಅಲ್ಲಿದ್ದ ಜ್ಯೂಸ್ ಬಾಟಲ್‌ಗಳ ದೊಡ್ಡ ದೊಡ್ಡ ಸೆಟ್‌ಗಳನ್ನೇ ಜೊತೆಗೆ ಹೊತ್ತೊಯ್ದಿದ್ದಾರೆ.

ಇದನ್ನೂ ಓದಿ: ನಾಸಿಕ್ ಟಿಸಿಎಸ್ ಜಿಹಾದ್ ಪ್ರಕರಣ: ಮತಾಂತರಕ್ಕೆ ಬುರ್ಖಾ, ಇಸ್ಲಾಮಿಕ್ ಪುಸ್ತಕ, ಹೆಸರು ಬದಲಿಸಲು ಸಂತ್ರಸ್ತರಿಗೆ ಒತ್ತಾಯ

ಜನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೇ ಗಾಯಗೊಂಡ ಚಾಲಕನ ನೆರವಿಗೆ ಧಾವಿಸದೇ ಫ್ರಿಯಾಗಿ ಸಿಕ್ಕ ಜ್ಯೂಸ್ ಬಾಟಲ್‌ಗಳನ್ನು ಸಾಗಿಸುವುದರಲ್ಲೇ ಬ್ಯುಸಿಯಾಗಿದ್ದಾರೆ. ಗಾಯಗೊಂಡ ಚಾಲಕ ಮಗುಚಿದ ಲಾರಿ ಪಕ್ಕದಲ್ಲೇ ಇದ್ದು ಜನರಿಗೆ ಹೀಗೆ ತಂಪು ಪಾನೀಯದ ಬಾಟಲ್‌ಗಳನ್ನು ಹೊತ್ತೊಯ್ಯುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾನೆ. ಆದರೆ ಯಾರು ಚಾಲಕನ ಮನವಿಗೆ ಕ್ಯಾರೆ ಅಂದಿಲ್ಲ.

ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಜನರ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಅಪಘಾತ ಸ್ಥಳದಲ್ಲಿಯೂ ನೀವು ಈ ರೀತಿ ಮಾಡುತ್ತಿರೆಂದರೆ ನಿಮಗೂ ಭ್ರಷ್ಟ ರಾಜಕಾರಣಿಗೂ ವ್ಯತ್ಯಾಸವಿಲ್ಲ ನೀವೊಬ್ಬ ಅಧಿಕಾರ ಇಲ್ಲದ ವ್ಯಕ್ತಿ ಅಷ್ಟೆ ಎಂದು ಒಬ್ಬರು ಕಿಡಿಕಾರಿದ್ದಾರೆ. ಇವರು ರಣಹದ್ದುಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ನಾಚಿಕೆ ಇಲ್ಲದ ಜನ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪೊಲೀಸರ ಕಿರುಕುಳಕ್ಕೆ ಬಲಿಯಾಯ್ತಾ ಯುವ ಜೀವ? ಗಾಂಜಾ ಪರೀಕ್ಷೆ ನೆಗೆಟಿವ್ ಬಂದರೂ ವಿದ್ಯಾರ್ಥಿ ಆತ್ಮಹತ್ಯೆ!

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Gen G ಹುಡುಗೀರು ಅಂಕಲ್ ಆದ್ರೂ ನೀವೇ ಬೇಕು ಅಂತಿರೋದ್ಯಾಕೆ? ಕಾರಣ ಇದೆ..!
ಬಗೆದಷ್ಟು ಬಯಲಾಗ್ತಿದೆ ನಾಸಿಕ್ TCS ಮತಾಂತರ ಕೇಸ್‌: ಸಂತ್ರಸ್ತರಿಗೆ ಬುರ್ಖಾ, ಇಸ್ಲಾಮಿಕ್ ಪುಸ್ತಕ, ಹೆಸರು ಬದಲಿಸಲು ಒತ್ತಾಯ