Tirumala Tirupati ತಿರುಪತಿ ವೆಂಕಟೇಶ್ವರನಿಗೆ 10 ಕೋಟಿ ರೂ ದೇಣಿಗೆ, ಹೊಸ ದಾಖಲೆ ನಿರ್ಮಾಣ!

Published : Jun 07, 2022, 08:26 PM IST
Tirumala Tirupati ತಿರುಪತಿ ವೆಂಕಟೇಶ್ವರನಿಗೆ 10 ಕೋಟಿ ರೂ ದೇಣಿಗೆ, ಹೊಸ ದಾಖಲೆ ನಿರ್ಮಾಣ!

ಸಾರಾಂಶ

ತಿರುಪತಿ ವೆಂಕಟೇಶ್ವರನಿಗೆ ದೇಣಿಗೆ ದಾಖಲೆ ಕುಟುಂಬದಿಂದ 10 ಕೋಟಿ ರೂಪಾಯಿ ದೇಣಿಗೆ ಒಂದು ದಿನದ ದೇಣಿಗೆ ಸಂಗ್ರಹದಲ್ಲೂ ದಾಖಲೆ  

ತಿರುಮಲ(ಜೂ.07): ತಿರುಪತಿ ವೆಂಕಟೇಶ್ವರನಿಗೆ ಭಕ್ತರು ಹಣ, ಚಿನ್ನ, ವಜ್ರ ವೈಡೂರ್ಯಗಳನ್ನು ದೇಣಿಗೆ ರೂಪದಲ್ಲಿ ನೀಡುವುದು ಸಾಮಾನ್ಯ. ಭಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕ ಹಾಗೇ ಕಾಣಿಕೆಗಳನ್ನು ನೀಡುತ್ತಾರೆ. ಹೀಗೆ ತಮಿಳುನಾಡಿನ ಕುಟುಂಬ ಹಾಗೂ ಕಂಪನಿಗಳು ಒಟ್ಟು 10 ಕೋಟಿ ರೂಪಾಯಿ ದೇಣಿಗೆ ನೀಡಿ ದಾಖಲೆ ಬರೆದಿದೆ. ವಿಶೇಷ ಅಂದರೆ 10 ಕೋಟಿ ರೂಪಾಯಿ ದೇಣಿಗೆ ಸಂಪೂರ್ಣ ನಗದು ಹಣವಾಗಿದೆ.

10 ಕೋಟಿ ರೂಪಾಯಿ ದೇಣಿಗೆಯಿಂದ ಒಂದು ದಿನದ ದೇಣಿಗೆ ಸಂಗ್ರಹದಲ್ಲಿ ತಿರುಪತಿಯಲ್ಲಿ ದಾಖಲೆ ನಿರ್ಮಾಣವಾಗಿದೆ. ಇದು ಒಂದು ದಿನದಲ್ಲಿ ಸಂಗ್ರಹವಾದ ಗರಿಷ್ಠ ದೇಣಿಗೆಯಾಗಿದೆ ಎಂದು ತಿರಮಲ ಟ್ರಸ್ಟ್ ಹೇಳಿದೆ.  

10 ಕೋಟಿ ರೂಪಾಯಿ ದೇಣಿಗೆ ನೀಡಿದ ದಿನದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಇನ್ನೂ ಲೆಕ್ಕ ಹಾಕಿಲ್ಲ. ಇವೆಲ್ಲ ಒಟ್ಟಗೂಡಿಸಿದರೆ ಮತ್ತೊಂದು ದಾಖಲೆ ನಿರ್ಮಾಣವಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ತಮಿಳುನಾಡಿನ ಉದ್ಯಮಿ ಕುಟುಂಬ 10 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

ತಿರುಮಲಕ್ಕೆ ಸೆಲೆಬ್ರಿಟಿ ಫೋಟೋ ತರುವಂತಿಲ್ಲ: ಪುನೀತ್‌ ಫೋಟೋ ವಿವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ

ತಮಿಳುನಾಡಿನ ತಿರುವೇನಲ್ಲಿಯ ಗೋಪಾಲ ಕೃಷ್ಣನ್ ಎಂಬವರರು 7 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. ಇನ್ನು ಖಾಸಗಿ ಕಂಪನಿಗಳು 3 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಹೀಗೆ ಒಂದು ದಿನ 10 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. 10 ಕೋಟಿ ರೂಪಾಯಿ ದೇಣಿಗೆಯೂ ತಮಿಳನಾಡಿನ ತಿರುವೇನಲ್ಲಿಯಿಂದಲೇ ಬಂದಿದೆ ಎನ್ನುವುದು ವಿಶೇಷ.

ಇತ್ತೀಚೆಗೆ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ದೇಣಿಗೆ ಸಂಗ್ರಹ, ಕಾಣಿಕೆ ಸಂಗ್ರಹದಲ್ಲೂ ಭಾರಿ ಏರಿಕೆಯಾಗಿದೆ. ಭಕ್ತರು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ದೇಣಿಗೆ ರೂಪದಲ್ಲಿ, ಕಾಣಿಕೆ ರೂಪದಲ್ಲಿ, ಸೇವೆ ರೂಪದಲ್ಲಿ ಸಲ್ಲಿಸುತ್ತಾರೆ ಎಂದು ಟ್ರಸ್ಟ್ ಹೇಳಿದೆ.

ತಿರುಪತಿ ದೇವಾಲಯಕ್ಕೆ ವಾಹನ ಹಸ್ತಾಂತರ
ತಿರುಪತಿ ತಿರುಮಲ ಶ್ರೀ ವೆಂಕಟರಮಣ ಸ್ವಾಮಿ ಮೇಲಿನ ಭಕ್ತಿಯಿಂದ ದೇವಾಲಯಕ್ಕೆ ಅಳಿಲು ಸೇವೆಯನ್ನು ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಹೇಳಿದರು. ತಿರುಪತಿ ತಿರುಮಲದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ತರಕಾರಿಗಳನ್ನು ಸಾಗಾಣಿಕೆ ಮಾಡುವ ಸುಮಾರು 40 ಲಕ್ಷ ವೆಚ್ಚದ ಉಚಿತ ವಾಹನವನ್ನು ಟಿ.ಟಿ.ಡಿ ಸಿಬ್ಬಂದಿಗೆ ಹಸ್ತಾಂತರ ಮಾಡಿ ಮಾತನಾಡಿದರು.ತಿರುಪತಿಯಲ್ಲಿ ಪ್ರತಿ ನಿತ್ಯವೂ ಅನ್ನದಾನಕ್ಕಾಗಿ ದಿನಸಿ, ತರಕಾರಿಗಳನ್ನು ನೀಡುತ್ತಾರೆ. ಅವುಗಳನ್ನು ಸಾಗಾಣಿಕೆ ಮಾಡುವ ಸಲುವಾಗಿ ವಾಹನವನ್ನು ಖರೀದಿಸಿ ದೇವಾಲಯಕ್ಕೆ ನೀಡಲಾಗಿದೆ ಎಂದರು.

ಆಂಧ್ರದ ತಿರುಪತಿಗೆ ಪ್ರತಿಸ್ಪರ್ಧಿಯಾಗಿ ನಿಂತ ತೆಲಂಗಾಣದ ಯದಾದ್ರಿ

ವೆಂಕಟೇಶ್ವರನ ಭಕ್ತಿ ಕ್ಷೇತ್ರವಾದ ತಿರುಮಲದಲ್ಲಿ ಕಂಡು ಕೇಳರಿಯಷ್ಟುಭಕ್ತಸಂದಣಿ ಉಂಟಾಗಿದೆ. ದರ್ಶನಕ್ಕೆ ನಿಂತ ಭಕ್ತರು ದೇವರ ದರ್ಶನ ಮಾಡಲು ಸುಮಾರು 48 ಗಂಟೆಯಷ್ಟುಕಾಯಬೇಕಾದ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಇನ್ನು 2-3 ದಿನ ಮಟ್ಟಿಗೆ ತಿರುಪತಿ ಕಡೆಗೆ ಆಗಮಿಸಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಭಕ್ತಾದಿಗಳಲ್ಲಿ ಕೋರಿದೆ.

ಆಂಧ್ರ ಹಾಗೂ ಸುತ್ತಲಿನ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಮಕ್ಕಳ ಪರೀಕ್ಷೆಗಳು ಮುಗಿದಿವೆ. ಅಲ್ಲದೆ, ಕೆಲವು ತರಗತಿಗಳ ಮಕ್ಕಳಿಗೆ ಜೂನ್‌ ಮೊದಲ ವಾರದಿಂದ ಶಾಲೆ-ಕಾಲೇಜುಗಳು ಆರಂಭವಾಗಲಿವೆ. ಅಲ್ಲದೆ, ಈ ಸಲ ಯಾವುದೇ ಕೊರೋನಾ ನಿರ್ಬಂಧಗಳು ಇಲ್ಲ. ಹೀಗಾಗಿ ಈ ಶನಿವಾರ ಹಾಗೂ ಭಾನುವಾರ ಭಾರೀ ಸಂಖ್ಯೆಯಲ್ಲಿ ಭಕ್ತ ಸಮೂಹ ದರ್ಶನಕ್ಕೆ ಆಗಮಿಸಿದೆ. ಇಷ್ಟೊಂದು ಜನಸಂದಣಿ ವೈಕುಂಠ ಏಕಾದಶಿ ವೇಳೆಯೂ ಇರಲಿಲ್ಲ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!