
ಬೆಂಗಳೂರು(ಜೂ. 08) ಕನ್ನಡವನ್ನು ಕೊಳಕು ಭಾಷೆ ಎಂದಿದ್ದ ಗೂಗಲ್ ಕನ್ನಡಿಗರ ಸ್ವಾಭಿಮಾನ-ಹಕ್ಕೋತ್ತಾಯಕ್ಕೆ ತಲೆಬಾಗಿ ಕ್ಷಮೆ ಕೇಳಿತ್ತು. ಮುಂದೆ ಹೀಗೆ ಆಗುವುದಿಲ್ಲ ಎಂದು ತಪ್ಪು ಒಪ್ಪಿಕೊಂಡಿತ್ತು. ಮಹಿಳೆಯರ ಒಳುಡುಪಿನ ಮೇಲೆ ಕನ್ನಡದ ಧ್ವಜ ಮುದ್ರಿಸಿ ಮಾರಾಟ ಮಾಡಲು ಅಮೇಜಾನ್ ಮುಂದಾಗಿತ್ತು.. ಇವು ಇತ್ತೀಚಿನ ಉದಾಹರಣೆಗಳು. ಈಗ ಸೋಶಿಯಲ್ ಮೀಡಿಯಾ ಇಸ್ಟಾಗ್ರ್ಯಾಮ್ ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಮಾಡಿಕೊಂಡಿದೆ.
ನಟಿ ಮಣಿಯರು ಶಿವ, ಗಣೇಶ, ಕಾಳಿಯ ಟ್ಯಾಟೋಗಳನ್ನು ಹಾಕಿಸಿಕೊಳ್ಳಬಾರದ ಜಾಗದಲ್ಲೆಲ್ಲಾ ಹಾಕಿಸಿಕೊಂಡು ವಿವಾದ ಎಬ್ಬಸಿದ್ದರು, ಪಾಪ್ ಸಿಂಗರ್ Rihanna ಮಾಡಿದ ಕೆಲಸವನ್ನೂ ಯಾರೂ ಮರೆತಿಲ್ಲ. ಇದೀಗ ಇಸ್ಟಾಗ್ರ್ಯಾಮ್ ಸರದಿ.
ಗಣೇಶ ಪೆಂಡೆಂಟ್ ಧರಿಸಿ ಮೇಲುಡುಗೆ ಇಲ್ಲದೆ ಗಾಯಕಿ ರಿಹಾನಾ ವಾಕ್
ಭಗವಾನ್ ಶಿವನ ಚಿತ್ರಕ್ಕೆ ಅಪಮಾನ ಮಾಡಿರುವ ಇಸ್ಟಾಗ್ರ್ಯಾಮ್ ದೇವರ ಕೈಯಲ್ಲಿ ವೈನ್ ಗ್ಲಾಸ್, ಮೊಬೈಲ್ ಹಿಡಿಸಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೇಳಿಬಂದಿದ್ದು ಕ್ಷಮೆಗೆ ಹಕ್ಕೋತ್ತಾಯ ಮಾಡಲಾಗುತ್ತಿದೆ.
ಕೆಲವೊಂದಿಷ್ಟು ವಿಚಾರಗಳು ಸದ್ದು ಮಾಡಿದಾಗ ಮಾತ್ರ ಪರಿಹಾರ ಕಾಣಲು ಸಾಧ್ಯ. ಫೇಸ್ ಬುಕ್ ನಂತೆ ಪ್ರಸಿದ್ಧಿ ಪಡೆದುಕೊಂಡ ಇಸ್ಟಾ ಯಾವ ಕಾರಣಕ್ಕೆ ಇಂಥದ್ದನ್ನೆಲ್ಲಾ ಮಾಡಿದೆಯೋ ಗೊತ್ತಿಲ್ಲ. ಹಿಂದುಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸವೆಂತೂ ಆಗಿಹೋಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ