ಅಮೆರಿಕದಲ್ಲೂ ರಾಮಜಪ!| ಆ.5ಕ್ಕೆ ಟೈಮ್‌ಸ್ಕೆ ಸ್ಕ್ವೇರ್‌ನಲ್ಲಿ ರಾಮನ 3ಡಿ ಚಿತ್ರ| ಸಿಹಿ ಹಂಚಿ ಶಂಕುಸ್ಥಾಪನೆ ಸಂಭ್ರಮಕ್ಕೆ ಸಿದ್ಧತೆ
ನವದೆಹಲಿ(ಜು.31): ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುವ ಆ.5ರಂದು ಅಮೆರಿಕದ ಹೆಗ್ಗುರುತಾಗಿರುವ ಟೈಮ್ಸ್ ಸ್ಕ್ವೇರ್‌ನಲ್ಲಿ ರಾಮ ಮಂದಿರ ಹಾಗೂ ರಾಮನ ಚಿತ್ರಗಳನ್ನು ಬೃಹತ್ ಪರದೆಯಲ್ಲಿ ಪ್ರದರ್ಶಿಸಲು ಅನಿವಾಸಿ ಭಾರತೀಯರು ತೀರ್ಮಾನಿಸಿದ್ದಾರೆ. ಆ ಮೂಲಕ ಐತಿಹಾಸಿಕ ಸಂಭ್ರಮಕ್ಕೆ ಅಮೆರಿಕ ಕೂಡ ಸಾಕ್ಷಿಯಾಗಲಿದೆ.
ರಾಮ ಮಂದಿರ ಶಂಕುಸ್ಥಾಪನೆ ದಿನ ದಾಳಿಗೆ ತಾಲಿಬಾನ್ ಸಂಚು?
undefined
ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಶಂಕು ಸ್ಥಾಪನೆ ನೆರವೇರಿಸುವ ದಿನದಂದು, ಅಮೆರಿದಲ್ಲಿ ಈ ಐತಿಹಾಸಿಕ ಕಾರ್ಯಕ್ರಮವನ್ನು ಸಂಭ್ರಮಿಸಲು ನಿರ್ಧರಿಸಲಾಗಿದೆ ಎಂದು ಅಮೆರಿಕನ್ ಭಾರತೀಯ ಸಮುದಾಯದ ಅಧ್ಯಕ್ಷ ಜಗದೀಶ್ ಸೆಹ್ವಾನಿ ತಿಳಿಸಿದ್ದಾರೆ.
'ಮನೆಯಲ್ಲೇ ದೀಪ ಬೆಳಗಿ, ಅಯೋಧ್ಯೆಗೆ ಬರಬೇಡಿ'
ಆ ದಿನ ಟೈಮ್ಸ್ ಸ್ಕೆ$್ವೕರ್‌ನಲ್ಲಿ 1700 ಚದರ ಅಡಿ ವಿಸ್ತೀರ್ಣದ ಎಲ್‌ಇಡಿ ಪರದೆಯಲ್ಲಿ ಮಂದಿರದ ತ್ರೀಡಿ ಚಿತ್ರ ಹಾಗೂ ರಾಮನ ಫೋಟೋ ಹಾಗೂ ವಿಡಿಯೋಗಳನ್ನು ಪ್ರದರ್ಶಿಸಲಾಗುವುದು. ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬರೆಯಲಾಗಿರುವ ‘ಜೈ ಶ್ರೀರಾಮ್’ ನಾಮ, ಮಂದಿರದ ವಿನ್ಯಾಸ, ಶಂಕುಸ್ಥಾಪನೆಯ ಚಿತ್ರಗಳನ್ನು ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಅಲ್ಲಿ ಪ್ರದರ್ಶಿಸಲಾಗುವುದು. ಇದಲ್ಲದೆ ಭಾರತೀಯ ಸಮುದಾಯ ಅಲ್ಲಿ ಸೇರಿ ಸಿಹಿ ಹಂಚಲಿದೆ ಎಂದಿದ್ದಾರೆ.