ಅಯೋಧ್ಯೆ ಶಿಲಾನ್ಯಾಸಕ್ಕೆ ಮುನ್ನ ಸೂರ್ಯ VS ಓವೈಸಿ, 'ಜಾತ್ಯತೀತತೆ  ಪಾಠ'

By Suvarna News  |  First Published Jul 30, 2020, 9:46 PM IST

ಅತ್ತ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ/ ಇತ್ತ ಸಂಸದರಿಬ್ಬರ ಟ್ವಿಟರ್ ಸಮರ/ ದನಿಗೂಡಿಸಿದ ಸೋಶಿಯಲ್ ಮೀಡಿಯಾ/ ಪರ-ವಿರೋಧ ಅಭಿಪ್ರಾಯ ಮಂಡನೆ


ಬೆಂಗಳೂರು(ಜು. 30)  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಹತ್ತಿರ ಬರುತ್ತಿದ್ದರೆ ಇತ್ತ ಸಂಸದರಿಬ್ಬರ ನಡುವೆ ಟ್ವಿಟರ್ ವಾರ್ ನಡೆದಿದೆ. ಈ ಟ್ವಿಟರ್  ವಾರ್ ಸೋಶಿಯಲ್ ಮೀಡಿಯಾದಲ್ಲಿಯೂ  ವೈರಲ್ ಆಗುತ್ತಿದೆ.

ಹೈದರಾಬಾದ್‌ನ ನಿಜಾಮ ಆಡಳಿತದ ಅವಧಿಯಲ್ಲಿದ್ದ ರಜಾಕಾಕರಿಂದ ನಮಗೆ ಸಂವಿಧಾನದ ಪಾಠದ ಅಗತ್ಯವಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ  ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿಗೆ ತಿರುಗೇಟು ನೀಡಿದ್ದಾರೆ.

Latest Videos

undefined

ನೀವು ಸಾಕಿದ ಹಾವುಗಳೆ ನಿಮ್ಮನ್ನು ಒಂದು ದಿನ ಕಚ್ಚುತ್ತದೆ ಎಂದ ಓವೈಸಿ

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ  ಭಾಗವಹಿಸುತ್ತಿರುವುದು  ಸಂವಿಧಾನದ ಪ್ರಮಾಣ ಉಲ್ಲಂಘನೆ ಮಾಡಿದಂತೆ ಆಗುತ್ತದೆ ಎಂದು ಓವೈಸಿ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸೂರ್ಯ, ಭಾರತದ ರಾಷ್ಟ್ರಪತಿ ಮತ್ತು ಮುಖ್ಯಮಂತ್ರಿ ಅಧಿಕೃತ ನಿವಾಸಗಳಲ್ಲಿ ಇಫ್ತಾರ್ ಪಾರ್ಟಿಗಳನ್ನು ಸಂಘಟಿಸುತ್ತಿದ್ದಾಗ ನಿಮ್ಮ 'ಜಾತ್ಯತೀತತೆ' ಎಲ್ಲಿತ್ತು?  ಎಂದು ಪ್ರಶ್ನೆ ಮಾಡಿ ಕೌಂಟರ್ ನೀಡಿದ್ದಾರೆ. ಅಯೋಧ್ಯೆಯಲ್ಲಿ ದೇವಸ್ಥಾನವನ್ನು ನೆಲಸಮ ಮಾಡಿ ಮಸೀದಿ ಕಟ್ಟಲಾಗಿತ್ತು. ಇದೀಗ ಆ ತಪ್ಪನ್ನು ಸರಿಪಡಿಸಲಾಗುತ್ತಿದೆ ಎಂದು ಸೂರ್ಯ ಸಮರ್ಥನೆ ಮಾಡಿದ್ದಾರೆ. 

ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ನಿರಂತರವಾಗಿ ವರದಿಯಾಗುತ್ತಿದ್ದುದ್ದಕ್ಕೆ ಓವೈಸಿ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ಹೇಳಿದ್ದರು.

click me!